ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ನಿನ್ನೆ (ಏಪ್ರಿಲ್ 6) ಕೊಡಗಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ದೇವರಕೊಂಡ ಅವರು ‘ಕೊಡಗಿನ ಯುವತಿಯರು ಸುಂದರಿಯರು, ಅವರಲ್ಲಿ ಒಬ್ಬರನ್ನು ನಾನು ಮದುವೆಯಾಗಿದ್ದೇನೆ’ ಎಂದು ಹೇಳಿದ್ದಾರೆ.

ರಶ್ಮಿಕಾ ಹಾಗೂ ದೇವರಕೊಂಡ ಅವರು ವಿವಾಹವಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಇವರ ಆಗಮನವನ್ನು ಕುಟುಂಬಸ್ಥರು ಆದ್ದೂರಿಯಾಗಿ ಆರತಕ್ಷತೆಯನ್ನು ಆಯೋಜಿಸುವ ಮೂಲಕ ಆಚರಿಸಿದ್ದಾರೆ. ಇದೇ ವೇಳೆ ದೇವರಕೊಂಡ ಅವರು ಕೊಡಗಿನ ಯುವತಿಯರ ಕುರಿತು ಮಾತನಾಡಿದ್ದಾರೆ.

ದೇವರಕೊಂಡ ಅವರು ಶಾಲಾ ದಿನಗಳಲ್ಲಿ ಕೊಡಗಿಗೆ ಪ್ರವಾಸ ಬಂದಿರುವುದನ್ನು ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಇದು ತಮ್ಮ 3ನೇ ಕೊಡಗು ಪ್ರವಾಸ ಎಂದಿದ್ದಾರೆ. ‘ರಶ್ಮಿಕಾ ಅವರನ್ನು ಭೇಟಿಯಾಗುವ ಮೊದಲು ನಾನು ಇಲ್ಲಿಗೆ ಬಂದಿದ್ದೆ. ನನಗೆ ಗೊತ್ತಿಲ್ಲದೆ, ರಶ್ಮಿಕಾ ಅವರ ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದೆ’ ಎಂದು ಹೇಳಿಕೊಂಡಿದ್ದಾರೆ.

‘ಮುಂದಿನ ಬಾರಿ ನಾನು ಕೊಡಗಿಗೆ ಬಂದಾಗ, ರಶ್ಮಿಕಾಳ ಬಾಲ್ಯದ ದಿನಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಕೊಡಗು ನಮ್ಮ ಮೊದಲ ರಜಾ ದಿನಗಳ ತಾಣವಾಗಿತ್ತು. ಕೊಡಗಿನ ಯುವತಿಯರು ತುಂಬಾ ಸುಂದರಿಯರು ಎಂದು ನಾನು ಭಾವಿಸುತ್ತೇನೆ. ಆ ಸುಂದರಿಯರಲ್ಲಿ ಒಬ್ಬರನ್ನು ನಾನು ಮದುವೆಯಾಗಿದ್ದೇನೆ. ನಿಮ್ಮೆಲ್ಲರನ್ನೂ ಇಲ್ಲಿ ಭೇಟಿಯಾಗಿದ್ದು ಇನ್ನಷ್ಟು ಖುಷಿ ತಂದಿದೆ’ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರುವರಿ 26 ರಂದು ಉದಯಪುರದಲ್ಲಿ ವಿವಾಹವಾದರು. ವಿವಾಹದ ನಂತರ, ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗಾಗಿ ಆರತಕ್ಷತೆಯನ್ನು ಆಯೋಜಿಸಿದ್ದರು. ಇದೀಗ ಮತ್ತೊಮ್ಮೆ ರಶ್ಮಿಕಾ ಅವರ ಹುಟ್ಟೂರಿನಲ್ಲಿ ಆರತಕ್ಷತೆ ಮಾಡುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.