ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೆಬ್ರುವರಿ 26ರಂದು ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಲವು ಬಂಧು ಮಿತ್ರರು ಮಾತ್ರ ಭಾಗಿಯಾಗಿದ್ದರು.

ಆ ಬಳಿಕ ಪುಟಾಣಿ ಅಭಿಮಾನಿ ವಿಡಿಯೊದಲ್ಲಿ ‘ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನನ್ನ ಏಕೆ ನಿಮ್ಮ ಮದುವೆಗೆ ಕರೆದಿಲ್ಲ? ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮ ಕಥೆಯೇನು?’ ಎಂದು ಬೇಸರ ಹೊರಹಾಕಿದ್ದರು.

ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿರೋಶ್ ಜೋಡಿಯ ಮದುವೆ ಕುರಿತು ಪುಟಾಣಿ ಮಾತನಾಡಿರುವ ವಿಡಿಯೊ ಸಿಕ್ಕಾಪಟ್ಟೆ ಹರಿದಾಡಿತ್ತು. ಅಲ್ಲದೇ ಆಕೆಯ ಮಾತಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ಸಹ ಕೊಟ್ಟಿದ್ದರು. ‘ಪುಟ್ಟ ಕಂದ ನಿನ್ನನ್ನು ಮನೆಗೆ ಊಟಕ್ಕೆ ಆಹ್ವಾನಿಸುತ್ತೇನೆ. ನಿನ್ನ ಇಷ್ಟದ ಆಹಾರ ಮತ್ತು ಸಿಹಿ ಪದಾರ್ಥ ಯಾವುದು ಎಂದು ಹೇಳು, ಎಲ್ಲವನ್ನೂ ಮನೆಯಲ್ಲಿಯೇ ಮಾಡಿಸಿ ಇಬ್ಬರೂ ಸೇರಿ ಹೊಟ್ಟೆ ತುಂಬಾ ತಿನ್ನೋಣ’ ಎಂದು ಕಮೆಂಟ್ ಮೂಲಕವೇ ಉತ್ತರಿಸಿದ್ದರು.
.ನನ್ನ ಏಕೆ ಮದುವೆಗೆ ಕರೆದಿಲ್ಲ: ವಿಜಯ್–ರಶ್ಮಿಕಾಗೆ ದಬಾಯಿಸಿದ ಪುಟಾಣಿ ಅಭಿಮಾನಿ.ನನ್ನ ನಟನೆಯನ್ನು ಟ್ರೋಲ್ ಮಾಡಿದ್ರು, ಆದರೆ ಈಗ: ವೇದಿಕೆ ಮೇಲೆ ನಟಿ ರಶ್ಮಿಕಾ ಭಾವುಕ.
ಇದೀಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕೊಟ್ಟ ಮಾತಿನಂತೆಯೇ ಪುಟಾಣಿ ಅಭಿಮಾನಿಯನ್ನು ಹೈದರಾಬಾದ್ ಮನೆಗೆ ಸ್ವಾಗತಿಸಿದ್ದಾರೆ. ದೇವರಕೊಂಡ ಕುಟುಂಬಸ್ಥರ ಜೊತೆಗೆ ಕುಳಿತುಕೊಂಡು ಊಟ ಸವಿದಿದ್ದಾರೆ. ಅಭಿಮಾನಿಗೆ ಇಷ್ಟವಿರುವ ಲಡ್ಡುವನ್ನು ಬಡಿಸಿ, ಆಕೆಯ ಹಣೆಗೆ ಮುತ್ತಿಟ್ಟಿದ್ದಾರೆ. ಇದೇ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪುಟಾಣಿ, ‘ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ್ದು ತುಂಬಾ ಸಂತೋಷ ತಂದಿತು. ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವ ಸುಂದರವಾದ ಮಾತಕತೆ, ನಗು ಮತ್ತು ಸಂತೋಷದಾಯಕ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಇದು ನಿಜವಾಗಿಯೂ ಹೃದಯಸ್ಪರ್ಶಿ ಅನುಭವವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.