ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಮುತ್ತಯ್ಯ ಮುರಳೀಧರನ್‌ ಸಾಧನೆ

Last Updated 29 ಜುಲೈ 2019, 19:45 IST
ಅಕ್ಷರ ಗಾತ್ರ

ಖ್ಯಾತ ಕ್ರೀಡಾಪಟುಗಳ ಜೀವನ ಚರಿತ್ರೆ ಬಗ್ಗೆ ಬಾಲಿವುಡ್‌ನಲ್ಲಿ ಈಗಾಗಲೇ ಅನೇಕ ಬಯೋಪಿಕ್‌ಗಳು ಬಿಡುಗಡೆಯಾಗಿವೆ. ಈಗ ಶ್ರೀಲಂಕಾದ ಕ್ರಿಕೆಟರ್‌ರೊಬ್ಬರ ಜೀವನವನ್ನು ತೆರೆ ಮೇಲೆ ತೋರಿಸಲು ತಮಿಳು ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ಶ್ರೀಲಂಕಾದ ಮಾಜಿ ಆಫ್‌ ಸ್ಪಿನ್ನರ್‌ ಮುತ್ತಯ್ಯ ಮುರಳೀಧರ್‌ ಅವರ ಬಯೋಪಿಕ್‌ ಅನ್ನು ಶ್ರೀಪತಿ ರಂಗಸ್ವಾಮಿ ನಿರ್ದೇಶನ ಮಾಡಲಿದ್ದಾರೆ.

ಮುತ್ತಯ್ಯ ಮುರಳೀಧರನ್ ಲಂಕಾ ಮೂಲದ ತಮಿಳು ಕುಟುಂಬದವರು. ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ ಮೊದಲ ತಮಿಳು ಕ್ರಿಕೆಟಿಗ ಅವರು. ಹಾಗಾಗಿಯೇ ತಮಿಳು ಚಿತ್ರರಂಗದಲ್ಲಿ ಅವರ ಬಯೋಪಿಕ್ ತರಲು ಮುಂದಾಗಿದ್ದಾರೆ.

ಈ ಸಿನಿಮಾದ ಹೆಸರು ‘800’.ಮುರಳೀಧರನ್ ಟೆಸ್ಟ್ ಮಾದರಿಯಲ್ಲಿ 800 ವಿಕೆಟ್ ಪಡೆದಿದ್ದರಿಂದ ಈ ಹೆಸರನ್ನೇ ಇಡಲಾಗಿದೆ. ಅವರ ಪಾತ್ರವನ್ನು ನಟ ವಿಜಯ್‌ ಸೇತುಪತಿ ನಿರ್ವಹಿಸಲಿದ್ದಾರೆ.

ಚಿತ್ರದ ಶೂಟಿಂಗ್‌ ಡಿಸೆಂಬರ್‌ ತಿಂಗಳಲ್ಲಿ ಆರಂಭವಾಗಲಿದೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಚಿತ್ರೀಕರಣವು ಭಾರತ, ಶ್ರೀಲಂಕಾ, ಇಂಗ್ಲೆಂಡ್‌ ಹಾಗೂ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ. ಈ ಭಾಷೆ ತಮಿಳು ಹಾಗೂ ಇತರ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ಮುರಳೀಧರನ್ 2008ರಿಂದ 2014ರವರೆಗಿನ ಐಪಿಎಲ್‌ನ ವಿವಿಧ ತಂಡಗಳಲ್ಲಿ ಆಡಿದ್ದರು. ಅವರ ಪತ್ನಿ ಚೆನ್ನೈನವರು.

ಶ್ರೀಲಂಕಾದವರಾಗಿದ್ದರೂ ಮುರಳೀಧರನ್‌ ಬಗ್ಗೆ ಸಿನಿಮಾ ಮಾಡುವ ಸುದ್ದಿಯನ್ನು ತಮಿಳು ಚಿತ್ರಪ್ರೇಮಿಗಳು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT