ದಳಪತಿ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗುವುದಕ್ಕೂ, ಕಾರಿನ ನಂಬರ್ ಪ್ಲೇಟ್ಗೂ ವಿಶೇಷವಾದ ನಂಟಿದೆ. ಇದೀಗ ಈ ಅದೃಷ್ಟದ TN07 CM 2026’ ಎಂಬ ನಂಬರ್ ಪ್ಲೇಟ್ ನಿರ್ದೇಶಕರಾದ ವೆಂಕಟ್ ಪ್ರಭು ಅವರು ಉಡುಗೊರೆಯಾಗಿ ನೀಡಿದ್ದಾರೆ.

ಕೆಲ ವಾರಗಳ ಹಿಂದಷ್ಟೇ ದಳಪತಿ ವಿಜಯ್ ಅವರು ತಮ್ಮ (ಟಿವಿಕೆ) ಪಕ್ಷದ ಮೂಲಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನಂಬರ್ ಪ್ಲೇಟ್ ಅನ್ನು ವೆಂಕಟ್ ಪ್ರಭು ಅವರು ವಿಜಯ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ನಂಬರ್ ಪ್ಲೇಟ್ನ ಹಿನ್ನೆಲೆ ಏನು?

2024ರಲ್ಲಿ ವೆಂಕಟ್ ಪ್ರಭು ಅವರ ನಿರ್ದೇಶನದಲ್ಲಿ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಅವರು ಚಲಾಯಿಸಿದ್ದ ಕಾರಿನ ನಂಬರ್ ಪ್ಲೇಟ್ ‘TN07 CM 2026’ ಆಗಿತ್ತು. ಸಿನಿಮಾ ತೆರೆಕಂಡ ಸಂದರ್ಭದಲ್ಲಿ ಅದು ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ

ವಿಜಯ ದಳಪತಿಯವರ ಟಿವಿಕೆ ಪಕ್ಷವು ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಈ ನಂಬರ್ ಪ್ಲೇಟ್ ಮುನ್ನೆಲೆಗೆ ಬಂದಿತ್ತು. ಕಾಕತಾಳಿಯವೆಂಬಂತೆ ಮೇ 10ರಂದು ಪ್ರಮಾಣ ವಚನ ಸ್ಫೀಕರಿಸಿದ ವಿಜಯ್ ಅವರು 2026 ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಇತ್ತೀಚೆಗೆ ವೆಂಕಟ್ ಪ್ರಭು, ದಳಪತಿ ವಿಜಯ್ ಅವರನ್ನು ಭೇಟಿ ಮಾಡಿ ಇದೇ ನಂಬರ್ ಪ್ಲೇಟ್ನ ಮಾದರಿಯೊಂದನ್ನು ಸ್ಮರಣಿಕೆಯಾಗಿ ನೀಡಿದ್ದಾರೆ. ಈ ಫೋಟೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ‘ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಚಿಂತನೆ ಮತ್ತು ದೃಷ್ಠಿಕೋನದಿಂದ ಇತಿಹಾಸ ಸೃಷ್ಠಿಯಾಗಿದೆ. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು. ಇದು ಕೇವಲ ಆರಂಭ’ ಎಂದು ಬರೆದುಕೊಂಡಿದ್ದಾರೆ.

‘GOAT’ ಸಿನಿಮಾದಲ್ಲಿ ವಿಜಯ್ ಅವರ ಜೊತೆ ಪ್ರಭುದೇವ, ಮೀನಾಕ್ಷಿ ಚೌಧರಿ, ಪ್ರಶಾಂತ್, ಅಜ್ಮಲ್ ಅಮೀರ್ ಮತ್ತು ಜಯರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವನ್ ಶಂಕರ್ ರಾಜಾ ಅವರ ಸಂಗೀತ ನೀಡಿದ್ದಾರೆ. ಮಾತ್ರವಲ್ಲದೆ ವಿಜಯ್ ದ್ವಿ–ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.