ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಗಿಲ್‌’ ಚಿತ್ರಕ್ಕೆ ವಿಜಯ್‌ ಸಂಭಾವನೆ ₹40 ಕೋಟಿ

Last Updated 29 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ತಮಿಳು ನಟ ವಿಜಯ್‌, ‘ಬಿಗಿಲ್‌’ ಚಿತ್ರಕ್ಕೆ ₹40 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ.ಈ ಚಿತ್ರಕ್ಕಾಗಿ ಅವರು ತಮ್ಮ ಸಂಭಾವನೆಯನ್ನು ಶೇಕಡ 50ರಷ್ಟು ಏರಿಕೆ ಮಾಡಿದ್ದಾರಂತೆ.

ವಿಜಯ್‌ ಅಭಿನಯದ ಚಿತ್ರಗಳು ಬಾಕ್ಸಾಫೀಸಿನಲ್ಲಿ ₹200 ಕೋಟಿ ಗಡಿ ದಾಟುತ್ತವೆ. ದಕ್ಷಿಣ ಭಾರತದಲ್ಲಿ ರಜನಿಕಾಂತ್‌ ಹಾಗೂ ಪ್ರಭಾಸ್‌ ಬಿಟ್ಟರೆ, ಬಾಕ್ಸಾಫೀಸಿನಲ್ಲಿ ₹200 ಕೋಟಿ ಗಡಿ ದಾಟುವುದು ವಿಜಯ್‌ ಅಭಿನಯದ ಚಿತ್ರಗಳು. ಹಾಗಾಗಿ ಅವರು ತಮ್ಮಸಂಭಾವನೆಯನ್ನು ಹೆಚ್ಚಿಸಿಕೊಂಡಿರುವುದು ದೊಡ್ಡ ವಿಷಯವಲ್ಲ. ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂಬ ಮಾತೂ ಕಾಲಿವುಡ್‌ನಿಂದ ಕೇಳಿಬಂದಿದೆ.

ಈ ಹಿಂದೆ ವಿಜಯ್‌ ತಮ್ಮ ಒಂದು ಚಿತ್ರಕ್ಕೆ ₹20ರಿಂದ 25 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈಗ ‘ಬಿಗಿಲ್‌’ ಚಿತ್ರಕ್ಕೆ ಶೇಕಡ 50ರಷ್ಟು ಸಂಭಾವನೆಯನ್ನು ಹೆಚ್ಚಿಸಲು ಚಿತ್ರದ ಮಾತುಕತೆ ಹಂತದಲ್ಲಿಯೇ ವಿಜಯ್‌ ತಿಳಿಸಿದ್ದರು. ಹಾಗಾಗಿ ‘ಬಿಗಿಲ್‌’ ಚಿತ್ರಕ್ಕೆ ₹40 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಚಿತ್ರವನ್ನು ಕರ್ನಾಟಕ, ಕೇರಳ ಹಾಗೂ ಇನ್ನೂ ಎರಡು ರಾಜ್ಯಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT