ರಾಜಕುಮಾರಿಗೆ ಲಾಲಿ ಹಾಡಿದ ಕಿಚ್ಚ: ವಿಕ್ರಾಂತ ರೋಣದ 2ನೇ ಹಾಡಿಗೆ ಭಾರೀ ಮೆಚ್ಚುಗೆ
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಎರಡನೇ ಹಾಡು ಶನಿವಾರ ಸಂಜೆ ಬಿಡುಗಡೆಯಾಗಿದೆ.
ಅಪ್ಪ–ಮಗಳ ನಡುವಿನ ದಟ್ಟ ಬಾಂಧವ್ಯವನ್ನು ಮೈತುಂಬಿಕೊಂಡಿರುವ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ನಿರ್ದೇಶಕ ಅನೂಪ್ ಬಂಡಾರಿ ಬರೆದಿರುವ ಸಾಹಿತ್ಯಕ್ಕೆ, ಅಜನೀಶ್ ಲೋಕನಾಥ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಅದ್ದೂರಿ ಸೇಟ್‌ಗಳ ನಡುವೆ ಕಣ್ಮನ ಸೆಳೆಯುವ ಕಿಚ್ಚ ಸುದೀಪ್ ಹಾಗೂ ಪುಟ್ಟ ಮಗುವಿನ ಭಾವನಾತ್ಮಕ ಮಿಡಿತಗಳು ಪ್ರೇಕ್ಷಕರನ್ನು ಗಾಢವಾಗಿ ಸೆಳೆಯುತ್ತವೆ.
ಕಳೆದ 16 ಗಂಟೆಗಳಲ್ಲಿ 13,30,605 ಜನರು ಈ ಹಾಡನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ. ಇದೇ ಹಾಡು ಮಲಯಾಳಂ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ.
ಜುಲೈ 28ರಂದು ವಿಕ್ರಾಂತ್ ರೋಣ ಜಗತ್ತಿನಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ.
ಹಾಡು ನೋಡಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.