ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಕ್ರಾಂತ್‌ ರೋಣ’ ಹಿಂದಿ 3ಡಿ ಅವತರಣಿಕೆಯ ವಿತರಣೆ ಹಕ್ಕು ಪಿವಿಆರ್‌ಗೆ

Last Updated 21 ಮೇ 2022, 9:11 IST
ಅಕ್ಷರ ಗಾತ್ರ

‘ವಿಕ್ರಾಂತ್‌ರೋಣಸಿನಿಮಾದ ವಿದೇಶಿ ವಿತರಣೆಗೆ ಇತ್ತೀಚೆಗೆ ಭರ್ಜರಿ ಡೀಲ್‌ ನಡೆದಿದ್ದು ಹಳೆಯ ಸುದ್ದಿ. ಈಗ ವಿಕ್ರಾಂತ್‌ ರೋಣದ ಹಿಂದಿ 3 ಡಿ ಅವತರಣಿಕೆಯ ವಿತರಣೆಯ ಹಕ್ಕನ್ನು ಪಿವಿಆರ್‌ ಸಂಸ್ಥೆ ಪಡೆದುಕೊಂಡಿದೆ. ಪಿವಿಆರ್‌ ದೇಶದಾದ್ಯಂತ ಚಿತ್ರ ಪ್ರದರ್ಶನ ಕ್ಷೇತ್ರದಲ್ಲಿ (ಮಲ್ಟಿಪ್ಲೆಕ್ಸ್‌) ತೊಡಗಿಕೊಂಡಿದೆ. ಈಗ ಚಿತ್ರ ವಿತರಣೆಗೂ ಮುಂದಾಗಿದೆ. ಈ ಹಕ್ಕುಗಳ ಮಾರಾಟದ ಮೊತ್ತ ಇನ್ನಷ್ಟೇ ಗೊತ್ತಾಗಬೇಕಾಗಿದೆ.

ಜುಲೈ 28ಕ್ಕೆ ಈ ಚಿತ್ರ 3ಡಿ ಯಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್ ಲಾಲ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಇಂಗ್ಲಿಷ್‌ನಲ್ಲಿ ವೀರೇಂದ್ರ ಸೆಹ್ವಾಗ್ ಅವರು ಚಿತ್ರದ ಟೀಸರನ್ನು ಏ. 2ರಂದು ಬಿಡುಗಡೆ ಮಾಡಿದ್ದರು. ಉತ್ತರ ಭಾರತದಲ್ಲಿ ಈ ಚಿತ್ರವನ್ನು ಪ್ರಸ್ತುತಪಡಿಸಲು ಸಲ್ಮಾನ್‌ ಖಾನ್‌ ಮುಂದಾಗಿದ್ದಾರೆ.

ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಅವರು ಚಿತ್ರದ ನಿರ್ಮಾಪಕರು. ಅನೂಪ್‌ ಭಂಡಾರಿ ನಿರ್ದೇಶನವಿದೆ. ಬಿ. ಅಜನೀಶ್‌ ಲೋಕನಾಥ್‌ ಅವರ ಕಿಚ್ಚ ಸುದೀಪ್ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫೆರ್ನಾಂಡಿಸ್‌ ಈ ಚಿತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT