ವಿನಯ ವಿದೇಯ ರಾಮನಿಗೆ ಮೆಚ್ಚುಗೆ

7
ಫಸ್ಟ್‌ ಲುಕ್‌

ವಿನಯ ವಿದೇಯ ರಾಮನಿಗೆ ಮೆಚ್ಚುಗೆ

Published:
Updated:
Deccan Herald

ಸುಕುಮಾರ್ ನಿರ್ದೇಶನದ ‘ರಂಗಸ್ಥಳಂ’ ಸಿನಿಮಾದ ಬಳಿಕ ‘ವಿನಯ ವಿದೇಯ ರಾಮ’ ಸಿನಿಮಾದ ಫಸ್ಟ್‌ ಲುಕ್ ಈಚೆಗೆ ಬಿಡುಗಡೆಗೊಂಡಿದ್ದು, ತೆಲುಗು ನಟ ರಾಮ್ ಚರಣ್ ಈ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದು ಕೈಯಲ್ಲಿ ಕತ್ತಿಯನ್ನು ಹಿಡಿದು ರಾಮ್‌ ಚರಣ್ ಓಡುತ್ತಿರುವ ದೃಶ್ಯವನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಫಸ್ಟ್‌ಲುಕ್‌ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗಿದೆ.

ಚರಣ್‌ಗೆ ನಾಯಕಿಯಾಗಿ ಕೈರಾ ಅಡ್ವಾಣಿ ನಟಿಸುತ್ತಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದಾರೆ. ಫಸ್ಟ್‌ಲುಕ್ ಜೊತೆಗೆ ಸಿನಿಮಾದ ಟೀಸರ್‌ ಬಿಡುಗಡೆಯ ದಿನಾಂಕವನ್ನೂ ಹೊರಹಾಕಿದೆ ಚಿತ್ರತಂಡ. ಶುಕ್ರವಾರವೇ ಟೀಸರ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.

ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರಮಂದಿರಗಳಿಗೆ ಈ ಸಿನಿಮಾ ಲಗ್ಗೆಯಿಡುವ ಸಾಧ್ಯತೆ ಇದೆ. ಅದ್ಧೂರಿಯಾಗಿಯೇ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾಕ್ಕೆ ಬೊಯಪತಿ ಶ್ರೀನು ಅವರ ನಿರ್ದೇಶನವಿದೆ. ತೆಲುಗಿನ ಖ್ಯಾತ ನಿರ್ಮಾಪಕ ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರೀಕರಣದ ಕೊನೆಯ ದಿನದಂದು ರಾಮ್ ಚರಣ್ ಜೊತೆಗಿರುವ ಚಿತ್ರವೊಂದನ್ನು ವಿವೇಕ್ ಒಬೇರಾಯ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ, ‘ಸಹೋದರ ರಾಮ್ ಚರಣ್ ಜೊತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಅವರ ಪ್ರೀತಿ, ಗೌರವ ಹಾಗೂ ಆತಿಥ್ಯಕ್ಕೆ ಧನ್ಯವಾದ. ಅವರ ತಂದೆ ಚಿರಂಜೀವಿ ಅವರಲ್ಲಿನ ಅತ್ಯುತ್ತಮ ಗುಣಗಳೆಲ್ಲವೂ ರಾಮ್‌ ಅವರಲ್ಲಿದೆ’ ಎಂಬ ಒಕ್ಕಣೆಯನ್ನು ನೀಡಿದ್ದರು.

ಇನ್ನೂ ಚರಣ್‌ಗೆ ನಾಯಕಿಯಾಗಿರುವ ಕೈರಾಗೆ ಇದು ತೆಲುಗಿನಲ್ಲಿ ಎರಡನೇ ಸಿನಿಮಾ. ಈ ಹಿಂದೆ ಅವರು, ಮಹೇಶ್ ಬಾಬು ಅಭಿನಯದ ‘ಭರತ್ ಅನೆ ನೇನು’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಪೂರ್ಣಗೊಂಡ ಬಳಿಕ ಎಸ್‌. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಜೊತೆ ಚರಣ್ ನಟಿಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !