ರಗಡ್‌ನಲ್ಲಿ ವಿನೋದ್‌ ಲವರ್‌ ಬಾಯ್‌

7

ರಗಡ್‌ನಲ್ಲಿ ವಿನೋದ್‌ ಲವರ್‌ ಬಾಯ್‌

Published:
Updated:
ವಿನೋದ್‌ ಪ್ರಭಾಕರ್

ಚಿತ್ರದ ಹೆಸರು ‘ರಗಡ್‌’. ಚಿತ್ರದ ಟೀಸರ್‌ ಕೂಡ ರಗೆಡ್‌ ಆಗಿಯೇ ಇದೆ. ಚಿತ್ರದ ನಾಯಕ ವಿನೋದ್ ಪ್ರಭಾಕರ್‌ ಅವರು ತಮ್ಮ ಏಯ್ಟ್‌ ಪ್ಯಾಕ್‌ ದೇಹ ತೋರಿಸಿ, ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದಾರೆ. ಆದರೆ ಚಿತ್ರದಲ್ಲಿ ಅವರು ಕಾಣಿಸಿಕೊಂಡಿರುವುದು ಲವರ್‌ ಬಾಯ್‌ ಆಗಿ.

ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ವಿನೋದ್‌ ಪ್ರಭಾಕರ್‌ ಅವರೇ ಈ ಸುದ್ದಿ ಬಹಿರಂಗಪಡಿಸಿದ್ದಾರೆ. ‘ನಾನು‌ ಈ ಚಿತ್ರದ ಮೂಲಕ ಮೊದಲ ಬಾರಿಗೆ ಲವರ್ ಬಾಯ್ ಪಾತ್ರ ಮಾಡಿದ್ದೇನೆ. ಇದಕ್ಕಾಗಿ ನಿರ್ದೇಶಕ ಮಹೇಶ್‌ ಗೌಡ ಅವರಿಗೆ ಧನ್ಯವಾದ ಸಮರ್ಪಿಸುತ್ತಿದ್ದೇನೆ. ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಅಷ್ಟು ಮುಗಿದರೆ ಆಯಿತು’ ಎಂದು ಹೇಳಿದರು ವಿನೋದ್.

ಈ ಚಿತ್ರದ ಕ್ಲೈಮ್ಯಾಕ್ಸ್‌ ಬಗ್ಗೆ ವಿನೋದ್‌ ಅವರಲ್ಲಿ ಬಹಳ ನಿರೀಕ್ಷೆಗಳು ಇರುವುದು ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಡಿದ ಮಾತುಗಳ ಧಾಟಿಯಲ್ಲಿ ವ್ಯಕ್ತವಾಗುತ್ತಿತ್ತು. ‘ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿದ ಎಲ್ಲರೂ ಅತ್ತುಕೊಂಡು ಬರುತ್ತಾರೆ. ಇದು ಸೆಂಟಿಮೆಂಟ್ ಇರುವ ಸಿನಿಮಾ. ಈ ಚಿತ್ರದ ಕಥೆ ಮಾಮೂಲಿ ಆಗಿದ್ದರೂ, ಚಿತ್ರಕಥೆಯು ಬೇರೆಯದೇ ಆದ ಗುಣವನ್ನು ಹೊಂದಿದೆ’ ಎಂದೂ ವಿನೋದ್ ಹೇಳಿದರು.

ಅಂದಹಾಗೆ, ವಿನೋದ್ ಅವರು 2019ರವರೆಗೂ ಒಂದಿಲ್ಲೊಂದು ಚಿತ್ರಗಳ ಕೆಲಸದಲ್ಲಿ ಬ್ಯುಸಿ ಆಗಿರುತ್ತಾರಂತೆ. ಈ ಚಿತ್ರಕ್ಕಾಗಿ ವಿನೋದ್ ಅವರು ಆರು ತಿಂಗಳುಗಳ ಅವಧಿಯಲ್ಲೇ ದೇಹದಾರ್ಢ್ಯತೆ ಬೆಳೆಸಿಕೊಂಡಿದ್ದಾರೆ. ಇದರಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ಕೂಡ ಇದೆ ಎಂದು ಚಿತ್ರತಂಡ ಹೇಳಿದೆ.

ಅಮ್ಮನ ಮಾತು: ಚಿತ್ರದ ಟೀಸರ್‌ ವೀಕ್ಷಿಸಿದ ವಿನೋದ್ ತಾಯಿ ಅನಸೂಯಮ್ಮ, ‘ಮಗ ಮಾಡಿರುವ ಚಿತ್ರ ಇದು. ಎಲ್ಲ ರೀತಿಯಲ್ಲೂ ಅವನಿಗೆ ಯಶಸ್ಸು ಸಿಗಲಿ’ ಎಂದು ಹಾರೈಸಿದರು. ‘ಈ ಟೀಸರ್‌ ರಗೆಡ್ ಆಗಿದೆ. ಇಷ್ಟೊಂದು ರಗೆಡ್ ಆಗಿರುತ್ತದೆ ಎಂದು ನಾನು ಭಾವಿಸಿರಲಿಲ್ಲ’ ಎಂದು ಹೇಳಿದರು ಅನಸೂಯಮ್ಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !