ದಕ್ಷಿಣ ಭಾರತದ ತಾರಾ ನಟ ವಿಜಯ್ ದೇವರುಕೊಂಡ– ರಶ್ಮಿಕಾ ಮಂದಣ್ಣ ವಿವಾಹವಾಗಿ ಒಂದು ತಿಂಗಳು ಪೂರ್ಣಗೊಂಡಿದ್ದು, ವಿರೋಶ್ ಮದುವೆಯ ಕ್ಷಣಗಳನ್ನು ಇನ್ನಷ್ಟು ಸುಂದರಗೊಳಿಸಿದವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ತಿಳಿಸಿದ್ದಾರೆ.
.ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ಖಡಕ್ ಪಾತ್ರದಲ್ಲಿ ಬಾದ್ಷಾ.
ತಮ್ಮ ಮದುವೆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿರೋಶ್ ಜೋಡಿ, ‘ನಮ್ಮ ಮದುವೆಯಾಗಿ ಆಗಲೆ ಒಂದು ತಿಂಗಳು ಆಯಿತು ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ಮದುವೆ ಹೇಗಿರಬೇಕು ಎಂಬುದರ ಕುರಿತು ಅನೇಕರು ನಮ್ಮ ಜೊತೆ ನಿಂತು ಸಲಹೆ ನೀಡಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ತಿಳಿಸುತ್ತೇವೆ‘ ಎಂದು ಬರೆದುಕೊಂಡಿದ್ದಾರೆ.

‘ಐಶ್ವರ್ಯಕೊಲ್ಲ, ನೀವು ಹಲವು ವರ್ಷಗಳಿಂದ ನನ್ನ ಬೆನ್ನೆಲುಬಾಗಿ ನಿಂತಿದ್ದೀರಾ. ಸಾರ್ವಜನಿಕವಾಗಿ ಹೇಳಲು ಆಗದಿರುವ ಎಷ್ಟೋ ವಿಷಯಗಳಲ್ಲಿ ನೀನು ನನಗೆ ಶಕ್ತಿಯಾಗಿದ್ದೀಯಾ. ಈ ಮದುವೆ ಇಷ್ಟು ಚೆನ್ನಾಗಿ ನಡೆಯಲು ನೀನೇ ಕಾರಣ. ಆರಂಭದ ದಿನಗಳಲ್ಲಿ ನನ್ನ ಭಾಷೆ ಯಾರಿಗೂ ಅರ್ಥವಾಗದೆ ಇದ್ದಾಗ, ನಿನಗೆ ಫೋನ್ ಮಾಡಿ ಹೇಳಿಕೊಳ್ಳುತ್ತಿದ್ದೆ. ನಾನು ಗೊಂದಲ್ಲಿದ್ದಾಗ ನಿನ್ನ ಬಳಿ ಮಾತಾನಾಡಿದರೆ ಸಮಸ್ಯೆಗಳು ಸರಿ ಹೋಗುತ್ತವೆ ಎಂಬ ನಂಬಿಕೆ. ನನ್ನ ಜೀವನದಲ್ಲಿ ನೀನು ಇರೋದಕ್ಕೆ ನಾನು ತುಂಬಾ ಪುಣ್ಯ ಮಾಡಿದ್ದೀನಿ’ ಎಂದಿದ್ದಾರೆ.

‘ಪ್ರಿಯಾ ಮಾಗಂಟಿ‘ ನೀವು ಕೂಡ ಈಗ ನಮ್ಮ ಕುಟುಂಬದ ಸದಸ್ಯೆ. ನಮ್ಮ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದೇವು. ನಿಮ್ಮಿಂದ ಆ ಕನಸು ಈಡೇರಿದೆ. ನಮ್ಮ ವಿವಾಹದ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣವು ಪರ್ಫೆಕ್ಟ್ ಆಗಿ ಇತ್ತು. ನಮ್ಮ ಮೇಲೆ ನಿನಗೆ ಇರುವ ಪ್ರೀತಿ, ನಿನ್ನ ಕೆಲಸದಲ್ಲಿ ಎದ್ದು ಕಾಣಿಸುತ್ತಿತ್ತು. ವಿರೋಶ್ ಜೋಡಿ ಮದುವೆ ಕ್ಷಣಗಳು ಸಂದರವಾಗಿಸಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.