ತಮಿಳು ನಟ ಸೂರ್ಯ ನಾಯಕನಾಗಿ ನಟಿಸುತ್ತಿರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಚಿತ್ರ ವಿಭಿನ್ನವಾದ ಪ್ರೇಮಕಥೆಯನ್ನು ಹೊಂದಿದೆ ಎಂದು ಟೀಸರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚಿತ್ರ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ಧಗೊಂಡಿದೆ.

ವೆಂಕಿ ಅಟ್ಲೂರಿ ಅವರ ಹಿಂದಿನ ಚಿತ್ರ ‘ಲಕ್ಕಿ ಭಾಸ್ಕರ್’ ಸೂಪರ್ ಹಿಟ್ ಆಗಿತ್ತು. ಬ್ಯಾಂಕ್ ಉದ್ಯೋಗಿಯೊಬ್ಬನ ವಿಭಿನ್ನ ಕಥೆಯನ್ನು ಚಿತ್ರ ಹೊಂದಿತ್ತು. ಅದೇ ರೀತಿ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದಲ್ಲಿ ಕಥಾ ನಾಯಕ ಸಂಜಯ್ ವಿಶ್ವನಾಥ್ ಅಂತರರಾಷ್ಟ್ರೀಯ ಪಿಸ್ತೂಲ್ ಶೂಟರ್. ತನಗಿಂತ 20 ವರ್ಷ ಚಿಕ್ಕವಳಾದ ನಾಯಕಿ ಜತೆ ಪ್ರೇಮವಾಗುತ್ತದೆ. ಅವರಿಬ್ಬರ ಪ್ರೇಮಪಯಣವೇ ಚಿತ್ರವೆಂಬುದು ಗೊತ್ತಾಗುತ್ತಿದೆ.

ವೆಂಕಿ ಅಟ್ಲೂರಿ ಮಧ್ಯಮ ವರ್ಗದವರ ಬದುಕಿನ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಡುತ್ತಾರೆ. ಅದೇ ರೀತಿ ಈ ಚಿತ್ರದಲ್ಲಿಯೂ ಭಾವುಕ ಸನ್ನಿವೇಶಗಳು ಸಾಕಷ್ಟಿವೆ. ಮಮಿತಾ ಬೈಜು ಚಿತ್ರದ ನಾಯಕಿ. ರವೀನಾ ಟಂಡನ್, ರಾಧಿಕಾ ಶರತ್ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜಿ.ವಿ. ಪ್ರಕಾಶ್ ಸಂಗೀತ, ನಿಮಿಶ ರವಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ತೆಲುಗಿನ ಹೆಸರಾಂತ ನಿರ್ಮಾಣ ಸಂಸ್ಥೆ ಸಿತಾರ ಎಂಟರ್ಟೈನ್ಮೆಂಟ್ ಚಿತ್ರವನ್ನು ನಿರ್ಮಾಣ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.