ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿಯಲ್ಲಿ ಸಿನಿಪ್ರಿಯರಿಗೆ ಬಂಪರ್ ಧಮಾಕ: ನಾಳೆ ಮೂರು ಹಿಂದಿ ಸಿನಿಮಾಗಳು ಬಿಡುಗಡೆ

Last Updated 30 ಜುಲೈ 2020, 8:01 IST
ಅಕ್ಷರ ಗಾತ್ರ

ವರಮಹಾಲಕ್ಷ್ಮಿ ಹಬ್ಬದ ಆಚರಣೆಯೊಂದಿಗೆ ಜುಲೈ ತಿಂಗಳು ಮುಕ್ತಾಯವಾಗಲಿದೆ. ಮತ್ತೊಂದೆಡೆ ಕೋವಿಡ್‌–19 ಸೋಂಕು ನಿಯಂತ್ರಣಕ್ಕೆ ಬಾರದ ಪರಿಣಾಮ ಚಿತ್ರಮಂದಿರಗಳ ಆರಂಭಕ್ಕೆ ಕೇಂದ್ರ ಸರ್ಕಾರವೂ ಅನುಮತಿ ನೀಡಿಲ್ಲ. ಥಿಯೇಟರ್‌ಗಳಲ್ಲಿ ಸಿನಿಮಾಗಳು ಯಾವಾಗ ತೆರೆ ಕಾಣುತ್ತವೆ ಎಂದು ನಿಖರವಾಗಿ ಹೇಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಟಿಟಿ ವೇದಿಕೆಗಳೇ ಸಿನಿಪ್ರಿಯರ ಮನರಂಜನೆಯ ಹಸಿವು ತಣಿಸಲು ವರದಾನವಾಗಿವೆ.

ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಸಂಕಷ್ಟದ ದಿನಗಳನ್ನು ಎದುರು ನೋಡುತ್ತಿದ್ದ ನಿರ್ಮಾಪಕರ ಪಾಲಿಗೂ ಕೊಂಚ ನೆಮ್ಮದಿ ನೀಡುತ್ತಿವೆ. ಜುಲೈ 31 ಸಿನಿಪ್ರಿಯರಿಗೆ ಪಾಲಿಗೆ ಹಬ್ಬವಿದ್ದಂತೆ. ಅಂದು ಬಾಲಿವುಡ್‌ನ ಮೂರು ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿವೆ.

ಶಕುಂತಲಾ ದೇವಿ

ಗಣಿತಜ್ಞೆ ಶಕುಂತಲಾ ದೇವಿ ‘ಮಾನವ ಕಂಪ್ಯೂಟರ್‌’ ಎಂದೇ ಪ್ರಸಿದ್ಧಿ ಪಡೆದವರು. ಅವರ ಬಯೋಪಿಕ್ ಆದ ‘ಶಕುಂತಲಾ ದೇವಿ’ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ. ಬಾಲಿವುಡ್‌ ನಟಿ ವಿದ್ಯಾ ಬಾಲನ್‌, ಶಕುಂತಲಾ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನಿರ್ದೇಶಿಸಿರುವುದು ಅನು ಮೆನನ್‌. ಇದಕ್ಕೆ ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಮತ್ತು ವಿಕ್ರಮ್‌ ಮಲ್ಹೋತ್ರ ಬಂಡವಾಳ ಹೂಡಿದ್ದಾರೆ. ಜಿಸ್ಸು ಸೇನ್‌ಗುಪ್ತ, ಸಾನ್ಯಾ ಮಲ್ಹೋತ್ರ, ಅಮಿತ್‌ ಸಧಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ರಾತ್ ಅಕೆಲಿ ಹೈ

‘ರಾತ್ ಅಕೆಲಿ ಹೈ’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ನವಾಜುದ್ದೀನ್‌ ಸಿದ್ದಿಕಿ ಮತ್ತು ರಾಧಿಕಾ ಆಪ್ಟೆ ನಟನೆಯ ಇದಕ್ಕೆ ಹನಿ ಟ್ರೆಹಾನ್ ಅವರ ನಿರ್ದೇಶನವಿದೆ. ಹೊಸದಾಗಿ ಮದುವೆಯಾದ ಭೂಮಾಲೀಕನೊಬ್ಬನ ಕೊಲೆಯಾಗುತ್ತದೆ. ಸಂತ್ರಸ್ತ ಕುಟುಂಬದ ರಹಸ್ಯದ ಪರಿಣಾಮ ತನಿಖೆಯು ಸಂಕೀರ್ಣ ಜಾಡಿನಲ್ಲಿ ಸಾಗುತ್ತದೆ. ತನಿಖಾಧಿಕಾರಿಯು ಹೇಗೆ ಈ ರಹಸ್ಯವನ್ನು ಹೊರಗೆಳೆಯುತ್ತಾನೆ ಎನ್ನುವುದೇ ಈ ಚಿತ್ರದ ತಿರುಳು.

ಲೂಟ್‌ಕೇಸ್

ಕಾಮಿಡಿ ಚಿತ್ರ ಇದು. ರಾಜೇಶ್‌ ಕೃಷ್ಣನ್‌ ಇದನ್ನು ನಿರ್ದೇಶಿಸಿದ್ದಾರೆ. ಡಿಸ್ನಿ ಹಾಟ್‌ ಸ್ಟಾರ್‌ನಲ್ಲಿ ಇದು ಬಿಡುಗಡೆಯಾಗಲಿದೆ. ಮಧ್ಯಮ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬನಿಗೆ ಹಣ ತುಂಬಿದ್ದ ಸೂಟ್‌ಕೇಸ್‌ವೊಂದು ಸಿಗುತ್ತದೆ. ಅದರ ಮೇಲೆ ಭ್ರಷ್ಟ ರಾಜಕಾರಣಿ, ಪೊಲೀಸ್‌ ಮತ್ತು ಸ್ಥಳೀಯ ದರೋಡೆಕೋರನ ಕಣ್ಣು ಬೀಳುತ್ತದೆ. ಆ ಹಣವನ್ನು ಜತನದಿಂದ ರಕ್ಷಿಸಿಕೊಳ್ಳುತ್ತಾನೆಯೇ ಅಥವಾ ಅದನ್ನು ಕಳೆದುಕೊಳ್ಳುತ್ತಾನೆಯೇ ಎನ್ನುವುದೇ ಈ ಚಿತ್ರದ ಕಥಾಹಂದರ. ಇದರಲ್ಲಿ ರಸಿಕಾ ದುಗ್ಗಲ್, ಗಜ್‌ರಾಜ್‌ ರಾವ್‌, ರಣವೀರ್‌ ಶೋರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT