‘ವೀಕ್ ಎಂಡ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

7

‘ವೀಕ್ ಎಂಡ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

Published:
Updated:
Deccan Herald

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಡಿ.ಮಂಜುನಾಥ್ ನಿರ್ಮಿಸುತ್ತಿರುವ ‘ವೀಕ್ ಎಂಡ್’ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ನಾಯಕನ ಜೊತೆ ನಾಯಕಿ ವಾಹನದಿಂದ ಮನೆಯ ಮುಂದೆ ಇಳಿಯುವುದನ್ನು ಗಮನಿಸಿದ, ನಾಯಕಿಯ ತಂದೆ ‘ಸಾಫ್ಟ್‌ವೇರ್‌’ ಉದ್ಯೊಗಿಗಳು ಬೇಕಾದಷ್ಟು ಜನ ಇದ್ದಾರೆ. ಅವರ ಉದ್ಯೋಗ ಒಂದು ಕಡೆ ಕಾಯಂ ಇರುವುದಿಲ್ಲ. ನೀನು ಇನ್ನು ಮುಂದೆ ಅವನ ಜೊತೆ ಓಡಾಡುವುದನ್ನು ನಿಲ್ಲಿಸು’ ಎಂದು ಮಗಳಿಗೆ ಬುದ್ಧಿ ಹೇಳುವ ಸನ್ನಿವೇಶವನ್ನು ರಾಜರಾಜೇಶ್ವರಿ ನಗರದ ಭವ್ಯ ಬಂಗಲೆಯೊಂದರಲ್ಲಿ ಚಿತ್ರೀಕರಿಸಲಾಗಿದೆ.

ಈ ಭಾಗದ ಚಿತ್ರೀಕರಣದಲ್ಲಿ ನಾಯಕ ಮಿಲಿಂದ್, ನಾಯಕಿ ಸಂಜನಾ ಬುರ್ಲಿ ಹಾಗೂ ನಾಯಕಿಯ ತಂದೆಯ ಪಾತ್ರದಲ್ಲಿ ಗೋಪಿನಾಥ್ ಭಟ್ ಅಭಿನಯಿಸಿದ್ದರು. ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ.

ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳು, ಸಾಹಸ ಸನ್ನಿವೇಶ ಹಾಗೂ ಚೇಸಿಂಗ್ ದೃಶ್ಯವಿರುತ್ತದೆ ಎಂದು ಅವರು  ತಿಳಿಸಿದ್ದಾರೆ.

ನಟರಾದ ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ನಟನ ವೀಣಾ, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !