ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳ ಮಾಹಿತಿ ಇಲ್ಲಿದೆ

7

ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳ ಮಾಹಿತಿ ಇಲ್ಲಿದೆ

Published:
Updated:

ಬೆಂಗಳೂರು: ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಮಲಯಾಳಂನಲ್ಲಿ ಶುಕ್ರವಾರ ಹಲವು ಸಿನಿಮಾಗಳು ತೆರೆ ಕಾಣಲಿವೆ.

ಅರಣ್ಯಾನಿ (ಕನ್ನಡ)
ಶ್ರೀಗಂಗಾಧರೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಿ. ರವಿಕುಮಾರ್ ನಿರ್ಮಿಸಿರುವ ಚಿತ್ರವಿದು. ಭರತಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಎಲ್.ವಿ. ಮುತ್ತುಕುಮಾರಸ್ವಾಮಿ ಸಂಗೀತ ನೀಡಿದ್ದಾರೆ. ಜೀವ ಆಂಟೋನಿ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ ಈ ಚಿತ್ರಕ್ಕಿದೆ. ತಾರಾಬಳಗದಲ್ಲಿ ಅಂಜನ್, ತೇಜು ಪೊನ್ನಪ್ಪ, ಮಯೂರ್, ನಿಶಾ, ಶಾಂತಕುಮಾರ್, ಶಿವಜಯ್ ಕಾರ್ತಿಕ್ ಇದ್ದಾರೆ.

ವಿರಾಜ್ (ಕನ್ನಡ)
ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ ಚಿತ್ರವಿದು. ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣವಿದೆ. ಈ ಚಿತ್ರದ ನಾಯಕರಾಗಿ ವಿದ್ಯಾಭರಣ್ ಅಭಿನಯಿಸಿದ್ದಾರೆ. ಶಿರಿನ್ ಕಂಚವಾಲ, ನಿಖಿತಾ, ದೇವರಾಜ್, ವಿನಯಪ್ರಸಾದ್, ಜೈಜಗದೀಶ್, ಸ್ವಾತಿ, ಕಡ್ಡಿಪುಡಿ ಚಂದ್ರು, ಟೆನ್ನಿಸ್ ಕೃಷ್ಣ, ಚಿದಾನಂದ್ ಶ್ರೀಧರ್, ಉಗ್ರಂ ಮಂಜು, ಉಗ್ರಂ ಶರತ್, ರಾಜ್ ದೀಪಕ್ ಶೆಟ್ಟಿ, ಕೃಷಿ ತಾಪಂಡ, ಕುರಿ ಸುನೀಲ್, ಕಾಮಿಡಿ ಕಿಲಾಡಿ ಸೂರ್ಯ 

ಪಿಕೆ ಲೆಲೆ ಅ ಸೇಲ್ಸ್‌ ಮನ್‌ (ಹಿಂದಿ): ಬಾಂಬೆ ಟಾಕೀಸ್‌ ಪ್ರಸ್ತುತ ಪಡಿಸುತ್ತಿರುವ ಈ ಚಿತ್ರ ಅಡಲ್ಟ್‌ ಹಾಸ್ಯ ಚಿತ್ರವೆಂದು ಹೇಳಲಾಗಿದೆ.  ಮಾನವ್‌ ಸೋಹಲ್‌ ಬರೆದು, ನಿರ್ದೇಶಿಸಿದ್ದಾರೆ. ಬ್ರಿಜೇಂದ್ರ ಕಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಭಾಗ್ತೆ ರಹೋ (ಹಿಂದಿ): ಪ್ರಫುಲ್‌ ಡಿ.ಎಸ್. ನಿರ್ದೇಶನದ ಈ ಚಿತ್ರದಲ್ಲಿ ರಾಜ್‌ಪಾಲ್‌ ಯಾದವ್‌, ರಿಯಾ ದೀಪ್ಸಿ, ಅಭಯ್‌ ಕಬೀರ್‌ ರೈಚಾಂದ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಹವಾ (ತೆಲುಗು):  ಮಹೇಶ್‌ ರೆಡ್ಡಿ ನಿರ್ದೇಶನದ ‘ಹವಾ’ ಸಿನಿಮಾದಲ್ಲಿ ಚೈತನ್ಯ ಮಡಾಡಿ ಮತ್ತು ದೇವಿ ಪ್ರಸನ್ನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 1 ಗಂಟೆ 50 ನಿಮಿಷದ ‘ಕಾಮಿಡಿ’ ಸಿನಿಮಾ.

ಅನಗನಗ ಒ ಪ್ರೇಮಕಥಾ (ತೆಲುಗು): ರಿದ್ಧಿ ಕುಮಾರ್‌ ಮತ್ತು ಅಶ್ವಿನಿ ಜೆ ವಿರಾಜ್‌ ಮುಖ್ಯ ಭೂಮಿಯಕೆಯಲ್ಲಿ ನಟಿಸಿರುವ ‘ಅನಗನಗ ಒ ಪ್ರೇಮಕಥಾ’ ಸಿನಿಮಾ ಪ್ರಥಾಪ್‌ ತಾತಂಸೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿದೆ.

ಹುಷಾರು (ತೆಲುಗು): ಎಸ್‌.ಜೆ. ಸೂರ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಹುಷಾರು’ ಚಿತ್ರದಲ್ಲಿ ಪವನ್‌ ಕಲ್ಯಾಣ್‌, ರಮ್ಯಾ, ಪ್ರಿಯಾ ವದ್ಲಾಮನಿ ಮತ್ತು ತೇಜಸ್‌ ಕಂಚೇರಿಯಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ದಕ್ಷಾ ನಗರ್ಕರ್‌, ದಿನೇಶ್‌ ತೇಜ್‌ ಮತ್ತು ತೇಜ್‌ ಕುರಪತಿ ಕೂಡ ಬಣ್ಣ ಹಚ್ಚಿದ್ದಾರೆ.

ಅಬ್ಬೊ ನಾ ಪೆಳ್ಳಂಟಾ (ತೆಲುಗು): ಅನಿರುದ್‌ ಪವಿತ್ರನ್‌ ಮತ್ತು ಅವಂತಿಕ ಮುನ್ನಿ ಮುಖ್ಯ ಭೂಮಿಕೆಯಲ್ಲಿರುವ ‘ಅಬ್ಬೊ ನಾ ಪೆಳ್ಳಂಟಾ’ ಚಿತ್ರ ಸಾಯಿ ಕೆ ಪ್ರಭಾಕರ್‌  ಅವರ ನಿರ್ದೇಶನದ್ದಾಗಿದೆ.

ಜಾನಿ (ತಮಿಳು): ಆ್ಯಕ್ಷನ್‌ ಮೂವಿಯಾದ ‘ಜಾನಿ’ಯನ್ನು ಪಿ. ವೆಟ್ರಿಸೆಲ್ವನ್‌ ನಿರ್ದೇಶಿಸಿದ್ದಾರೆ. ಇದರ ಮುಖ್ಯ ಪಾತ್ರದಲ್ಲಿ ಪ್ರಶಾಂತ್‌, ಸಂಚಿತಾ ಶೆಟ್ಟಿ, ಪ್ರಭು ಮತ್ತು ಅಶುತೋಷ್‌ ರಾಣಾ ಇದ್ದಾರೆ. ಅವರ ಜತೆಗೆ ದೇವದರ್ಶಿನಿ ಮತ್ತು ಆತ್ಮಾ ಪ್ಯಾಟ್ರಿಕ್‌ ಸಾಥ್‌ ನೀಡಿದ್ದಾರೆ.

ಒಡಿಯನ್‌ (ಮಲಯಾಳಂ): ಮೋಹನ್‌ಲಾಲ್‌, ಪ್ರಕಾಶ್‌ ರಾಜ್‌, ಮಂಜು ವಾರಿಯರ್‌ ಮತ್ತು ಮಕ್ಬೂಲ್‌ ಸಲ್ಮಾನ್‌ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಒಡಿವಾನ್‌ ಜೋಷಿ, ನಂಧು ಅವರೂ ನಟಿಸಿರುವ ‘ಒಡಿಯನ್‌’ ಸಿನಿಮಾವನ್ನು ವಿ.ಎ. ಶ್ರೀಕುಮಾರ್‌ ಮೆನನ್‌ ನಿರ್ದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !