ದೀಪಿಕಾ ಹೊಸ ಫೋಟೊ ಕಂಡು ಅಭಿಮಾನಿಗಳು ಕೆಂಡ!

ಮಂಗಳವಾರ, ಜೂಲೈ 16, 2019
28 °C
ಮೂಗಿಗೆ ಏನಾಯ್ತು?

ದೀಪಿಕಾ ಹೊಸ ಫೋಟೊ ಕಂಡು ಅಭಿಮಾನಿಗಳು ಕೆಂಡ!

Published:
Updated:

ಬೆಂಗಳೂರು: ಮದುವೆಯ ಬಳಿಕ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಗೊಂಡ ಫೋಟೊಶಾಪ್‌ ಮಾಡಿದ ಚಿತ್ರ ಕಂಡ ಅಭಿಮಾನಿಗಳು ಗರಂ ಆಗಿದ್ದಾರೆ. 

ಖಾಸಗಿ ಕಂಪನಿಯ ಆಭರಣದ ಫೋಟೊ ಶೂಟ್‌ನ ದೀಪಿಕಾ ಪಡುಕೋಣೆ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಆಗಿವೆ. ದೀಪಿಕಾಗೆ ಸ್ಟೈಲಿಸ್ಟ್‌ ಆಗಿರುವ ಶಲಿನಾ ನಥಾನಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಗಳು ಚರ್ಚೆ ಹುಟ್ಟು ಹಾಕಿವೆ. 

‘ಅವರ ಮೂಗಿಗೆ ಏನಾಯಿತು‘, ‘ನಿಮ್ಮ ಮೈಬಣ್ಣ ಇಷ್ಟೊಂದು ಬಿಳುಪಾಗಲು  ಫೋಟೋ ಎಡಿಟ್‌ನಲ್ಲಿ ತುಂಬಾ ಕೆಲಸ ಮಾಡಿರಬೇಕು’ ಎಂದು ನೆಟ್ಟಿಗರು ದೀಪಿಕಾ ಪಡುಕೋಣೆಯ ಮೂಗು ಮತ್ತು ಬಣ್ಣದ ಬಗ್ಗೆ ಕಮೆಂಟ್‌ ಮಾಡಿ ಕಾಲೆಳೆದಿದ್ದಾರೆ.

ಇನ್ನೂ ಕೆಲವು ಅಭಿಮಾನಿಗಳು ನೀವು ಯಾವಾಗಲು ಸೋನಮ್‌ ಕಪೂರ್‌ ಅವರ ಸ್ಟೈಲ್‌ ಅನ್ನು ನಕಲಿಸುತ್ತೀರಿ ಎಂದಿದ್ದಾರೆ. ಈ ಫೋಟೊದಲ್ಲಿ ದೀಪಿಕಾ ಬಿಳಿಬಣ್ಣದ ಡೀಪ್‌ ನೆಕ್‌ ಪ್ಯಾಂಟ್‌ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಹಿಂದೆ ಇದೇ ರೀತಿಯ ವಿನ್ಯಾಸದ ಉಡುಗೆಯಲ್ಲಿ ಸೋನಂ ಕಪೂರ್‌ ಕಾಣಿಸಿಕೊಂಡಿದ್ದರು. 

 

 

Post Comments (+)