ಸೋಮವಾರ, ಮೇ 23, 2022
30 °C

ಸಲಾರ್‌ನಲ್ಲಿ ಪ್ರಭಾಸ್‌ಗೆ ಜೋಡಿಯಾಗಲಿದ್ದಾರಾ ಬಾಲಿವುಡ್ ಬೆಡಗಿಯರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಹುಬಲಿ ಸಿನಿಮಾದ ಯಶಸ್ಸು ನಟ ಪ್ರಭಾಸ್ ಅವರನ್ನು ಸದಾ ಬ್ಯುಸಿಯಾಗಿರುವಂತೆ ಮಾಡಿದೆ. ಸದ್ಯ ಒಂದರ ಹಿಂದೆ ಒಂದರಂತೆ ಪ್ರಭಾಸ್ ಸಿನಿಮಾಗಳು ಘೋಷಣೆಯಾಗುತ್ತಿವೆ. ಇತ್ತೀಚೆಗೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್‌’ ಸಿನಿಮಾ ಘೋಷಣೆ ಮಾಡಿದ್ದರು. ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು ಚಿತ್ರತಂಡ ಜನವರಿಯಿಂದ ಶೂಟಿಂಗ್ ಆರಂಭಿಸುವುದಾಗಿ ತಿಳಿಸಿತ್ತು.

ಚಿತ್ರದ ಪ್ರಿ–ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು ಈಗ ಚಿತ್ರದ ಪಾತ್ರವರ್ಗದ ಆಯ್ಕೆಯ ಮೇಲೆ ಗಮನ ಹರಿಸಿದೆ ಚಿತ್ರತಂಡ. ಇದು ಪ್ಯಾನ್ ಇಂಡಿಯಾ ಸಿನಿಮಾವಾದ ಕಾರಣ ಬಾಲಿವುಡ್‌ ಬೆಡಗಿಯರನ್ನು ಚಿತ್ರಕ್ಕೆ ಕರೆ ತರುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಚಿತ್ರಕಥೆಯ ಪ್ರಕಾರ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ದಿಶಾ ಪಟಾನಿ ಹಾಗೂ ಸಾರ ಅಲಿ ಖಾನ್ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಿಶಾ ಪಟಾನಿ ಪಾತ್ರವು ನೆಗೆಟಿವ್ ಸ್ಪರ್ಶ ಹೊಂದಿದೆ ಎನ್ನುತ್ತಿವೆ ಮೂಲಗಳು.

ಈ ಸುದ್ದಿಯು ಪ್ರಭಾಸ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಚಿತ್ರತಂಡದ ತಯಾರಿ ನೋಡಿದರೆ ಆದಷ್ಟು ಬೇಗ ಶೂಟಿಂಗ್ ಆರಂಭಿಸಿ, ಮುಗಿಸುವ ಯೋಜನೆಯಲ್ಲಿದೆ ಚಿತ್ರತಂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು