ಬುಧವಾರ, ಜೂನ್ 23, 2021
22 °C

ರಜನಿ–ಕಮಲ್‌ರನ್ನು ಒಟ್ಟಿಗೆ ತೆರೆ ಮೇಲೆ ತರಲಿದ್ದಾರಾ ಕೈದಿ ನಿರ್ದೇಶಕ?

ಪ್ರಜಾವಾಣಿ ಫೀಚರ್‌ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್ ಹಾಗೂ ಕಮಲ್‌ಹಾಸನ್‌ ಅವರನ್ನು ಒಂದೇ ತೆರೆ ಮೇಲೆ ನೋಡುವುದು ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಈ ಯೋಚನೆಯೇ ಖುಷಿ ಕೊಡುತ್ತದೆ. ಆದರೆ ಇದನ್ನು ನಿಜ ಮಾಡಲು ಹೊರಟಿದ್ದಾರಂತೆ ತಮಿಳಿನ ‘ಕೈದಿ’ ಸಿನಿಮಾ ಖ್ಯಾತಿಯ ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜ್‌. 

ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲೂ ಸಿನಿಮಾ ಕ್ಷೇತ್ರದಲ್ಲಿ ಊಹಾಪೋಹಗಳಿಗೆ ತೆರೆಬಿದ್ದಿಲ್ಲ. ಸದ್ಯದ ಸುದ್ದಿಯ ಪ್ರಕಾರ ಲೋಕೇಶ್ ಬಹುದೊಡ್ಡ ಪ್ರಾಜೆಕ್ಟ್ ಒಂದನ್ನು ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ. ಅಲ್ಲದೇ ಈ ಸಿನಿಮಾದ ಮೂಲಕ ಇಬ್ಬರು ಸ್ಟಾರ್‌ ನಟರನ್ನು ಒಂದಾಗಿ ನಟಿಸುವಂತೆ ಮಾಡುವ ಯೋಚನೆ ಅವರದ್ದು. 

ಕಳೆದ ವರ್ಷದ ’ಕೈದಿ’ ಸಿನಿಮಾದ ಯಶಸ್ವಿನ ನಂತರ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಲೋಕೇಶ್‌ಗೆ ಮುಂಗಡ ಹಣ ನೀಡಿದೆಯಂತೆ. ಅಲ್ಲದೇ ತಮಿಳು–ತೆಲುಗು ದ್ವಿಭಾಷಾ ಚಿತ್ರ ಮಾಡುವಂತೆ ನಿರ್ದೇಶಕರ ಬಳಿ ಕೇಳಿಕೊಂಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. 

ರಜನಿ ಹಾಗೂ ಕಮಲ್ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ ಸ್ಟಾರ್‌ಗಿರಿ ಬಂದ ಮೇಲೆ ಇಬ್ಬರೂ ಒಂದಾಗಿ ನಟಿಸಿರಲಿಲ್ಲ. 

ಕಮಲ್ ಹಾಸನ್ ಅವರ ಅಪ್ಪಟ ಅಭಿಮಾನಿಯಾದ ಲೋಕೇಶ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮಲ್ಟಿಸ್ಟಾರರ್ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ತಾವು ಮಾಡುವ ಮುಂದಿನ ಸಿನಿಮಾ ಶಾಶ್ವತ ಇತಿಹಾಸ ಬರೆಯಬೇಕು ಎಂದು ಮಹತ್ವಾಕಾಂಕ್ಷೆಯ ಮಾತುಗಳನ್ನು ಹೇಳಿದ್ದರು.

ತಮ್ಮ ಮುಂದಿನ ಸಿನಿಮಾದ ಕುರಿತು ಸಿನಿಮಾ ನಿರ್ಮಾಣ ಸಂಸ್ಥೆ ಸದ್ಯದಲ್ಲೇ ಅಧೀಕೃತ ಮಾಹಿತಿಯನ್ನು ಹೊರ ಹಾಕಲಿದೆ ಎಂದು ಹೇಳಿದ್ದರು ಲೋಕೇಶ್‌. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು