ಗುರುವಾರ , ಜನವರಿ 21, 2021
30 °C

ಟಾಲಿವುಡ್‌ಗೆ ಬರಲಿದ್ದಾರಾ ಸೋನಂ ಕಪೂರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋನಂ ಕಪೂರ್‌

ಟಾಲಿವುಡ್‌ ಸಿನಿಮಾಗಳಲ್ಲಿ ಇತ್ತೀಚೆಗೆ ಬಾಲಿವುಡ್‌ ಸ್ಟಾರ್ ನಟ–ನಟಿಯರು ನಟಿಸುವುದು ಸಾಮಾನ್ಯವಾಗಿದೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್‌ ಮುಂತಾದವರು ಟಾಲಿವುಡ್‌ ಸಿನಿಮಾಗಳಿಗೆ ಈಗಾಗಲೇ ಸಹಿ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಾದ ಆರ್‌ಆರ್‌ಆರ್‌ ಹಾಗೂ ಪ್ರಭಾಸ್‌ 21 ಸಿನಿಮಾಗಳಲ್ಲಿ ಆಲಿಯಾ ಹಾಗೂ ದೀಪಿಕಾ ನಟಿಸುವುದು ಪಕ್ಕಾ ಆಗಿದೆ.

ಸದ್ಯದ ಸುದ್ದಿಯ ಪ್ರಕಾರ ನಟಿ ಸೋನಂ ಕಪೂರ್ ಟಾಲಿವುಡ್‌ನಲ್ಲಿ ತಮ್ಮ ಸಿನಿ ಪಯಣವನ್ನು ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರತಿಷ್ಠಿತ ಬ್ಯಾನರ್‌ನ ಸಿನಿಮಾವೊಂದರಲ್ಲಿ ಸೋನಂ ಸ್ಟಾರ್‌ ನಟರೊಬ್ಬರ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಈ ಕುರಿತು ಗಾಳಿಸುದ್ದಿಯೊಂದು ಹರಿದಾಡುತ್ತಿದ್ದು ಅಧಿಕೃತ ಮಾಹಿತಿ ಲಭ್ಯವಿಲ್ಲ.

ಈ ಹಿಂದೆ ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ಅಂಜಲಾ ಝವೇರಿ, ಪ್ರೀತಿ ಝಿಂಟಾ, ಐಶ್ವರ್ಯಾ ರೈ, ಸೋನಲ್ ಚೌಹಾಣ್, ವಿದ್ಯಾ ಬಾಲನ್‌ ಹಾಗೂ ಶೃದ್ಧಾ ಕಪೂರ್ ಟಾಲಿವುಡ್‌ನಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು