ಈ ವರ್ಷ ಬರ್ತ್‌ ಡೇ ಆಚರಿಸಿಕೊಳ್ಳಲ್ಲ ಯಶ್‌

7
ಕೆಜಿಎಫ್‌ ಗೆಲುವನ್ನು ಹಂಚಿಕೊಳ್ಳಲು ಸದ್ಯದಲ್ಲೇ ಯಶೋಯಾತ್ರೆ

ಈ ವರ್ಷ ಬರ್ತ್‌ ಡೇ ಆಚರಿಸಿಕೊಳ್ಳಲ್ಲ ಯಶ್‌

Published:
Updated:

ಸ್ಟಾರ್‌ ನಟರ ಜನ್ಮದಿನ ಎಂದರೆ ಅವರ ಅಭಿಮಾನಿಗಳ ಪಾಲಿಗೆ ಹಬ್ಬ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ, ಶುಭ ಹಾರೈಸಿ ಅಪ್ಪುಗೆಯ ಪುಳಕಕ್ಕೆ ಒಳಗಾಗುವ ಅವಕಾಶ ಸಿಗುವ ದಿನ. ಇಂದು (ಜ. 08) ನಟ ಯಶ್‌ ಜನ್ಮದಿನ. ‘ಕೆಜಿಎಫ್‌’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಯಶ್‌ ಜನ್ಮದಿನದ ಸಂಭ್ರಮವನ್ನು ಆಚರಿಸಲು ಅವರ ಅಭಿಮಾನಿಗಳು ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೆ ಅವರ ಉತ್ಸಾಹಕ್ಕೆ ಯಶ್ ತಣ್ಣೀರೆರೆಚಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಮಾಡಿ ಹಂಚಿಕೊಂಡಿರುವ ಯಶ್‌, ‘ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ. ಇದೇ ವಿಡಿಯೊದಲ್ಲಿ ಕೆಜಿಎಫ್‌ ಸಿನಿಮಾ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಅವರು ಈ ಸಂಭ್ರಮವನ್ನು ಆಚರಿಸಲು ಸದ್ಯದಲ್ಲಿಯೇ ‘ಯಶೋಯಾತ್ರೆ’ ಕೈಗೊಳ್ಳುವ ಸೂಚನೆ ನೀಡಿದ್ದಾರೆ.

ವಿಡಿಯೊದಲ್ಲಿ ಯಶ್ ಆಡಿರುವ ಮಾತಿನ ಅಕ್ಷರರೂಪ ಇಲ್ಲಿದೆ.

‘‘ಎಲ್ಲರಿಗೂ ನಮಸ್ಕಾರ,

‘ಕೆಜಿಎಫ್’ ಚಿತ್ರವನ್ನು ಇಷ್ಟು ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿಸಿದ್ದಾರೆ. ಎಲ್ಲ ತೊಂದರೆಗಳನ್ನು ಮೀರಿ ಈ ಸಿನಿಮಾ ವಿಶ್ವದಾದ್ಯಂತ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದೆ. ಅದೆಲ್ಲದಕ್ಕೂ ಕಾರಣ ನೀವು ತೋರಿಸಿದ ಪ್ರೀತಿ. 

ಜನವರಿ 08 ನನ್ನ ಹುಟ್ಟಿದ ಹಬ್ಬ. ನನಗೆ ಗೊತ್ತು, ಅವತ್ತು ಬಹಳಷ್ಟು ಜನರು ನನ್ನನ್ನು ಭೇಟಿಯಾಗಿ ವಿಷ್‌ ಮಾಡೋಕೆ ಕಾಯ್ತಾ ಇರ್ತೀರಿ ಅಂತ. ಆದರೆ ನಿಮ್ಮೆಲ್ಲರ ಬಳಿ ಒಂದು ವಿಷಯ ಹಂಚಿಕೊಳ್ಳಲಿಕ್ಕೆ ಇಷ್ಟಪಡ್ತೀನಿ. ಈ ಸಲ ನನ್ನ ಹುಟ್ಟಿದ ಹಬ್ಬ ಆಚರಿಸಿಕೊಳ್ಳಲು ನಂಗೆ ಇಷ್ಟ ಇಲ್ಲ. ಕಾರಣ ಇಷ್ಟೆ; ನಮ್ಮ ಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಷ್ ಅವರು ನಮ್ಮೊಂದಿಗಿಲ್ಲ. ಅವರಿಗೆ ಗೌರವ ಸೂಚಿಸಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಯಾಕೆಂದರೆ ಮನಸಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಖುಷಿ ಇಲ್ಲ. ಯಾರೂ ದಯವಿಟ್ಟು ಬೇಜಾರು ಮಾಡ್ಕೋಬೇಡಿ. ಅನ್ಯಥಾ ಭಾವಿಸಬೇಡಿ. ಪ್ರತಿವರ್ಷ ನಾನು ಈ ದಿನ ನಿಮ್ಮೆಲ್ಲರನ್ನು ಭೇಟಿ ಮಾಡುವುದಕ್ಕೋಸ್ಕರ ಕಾತರದಿಂದ ಕಾಯ್ತಾ ಇರ್ತೀನಿ. 

ಆದಷ್ಟೂ ಬೇಗ ‘ಯಶೋಯಾತ್ರೆ’ ಮೂಲಕ ನಮ್ಮ ಈ ಯಶಸ್ಸನ್ನು ಹಂಚಿಕೊಳ್ಳಲಿಕ್ಕೋಸ್ಕರ ನಿಮ್ಮ ಊರುಗಳಿಗೆ ಬರ್ತೀನಿ. ಅಲ್ಲಿಯವರೆಗೆ ದಯವಿಟ್ಟು ತಾಳ್ಮೆಯಿಂದ ಕಾಯಿರಿ. ದಯವಿಟ್ಟು ಕೋ ಆಪರೇಟ್ ಮಾಡಿ. 

ನನ್ನ ಈ ಭಾವನೆಯನ್ನು ಎಲ್ಲರೂ ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು’’

ಬರಹ ಇಷ್ಟವಾಯಿತೆ?

 • 22

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !