ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿತಾಣ ಅಲಿಬಾಗ್. ಇಲ್ಲಿರುವ ‘ಕಿಹಿಮ್ ಬೀಚ್’ ಬಳಿ ರಾಕಿಂಗ್ ಸ್ಟಾರ್ ಯಶ್ ದಂಪತಿ ಜಮೀನು ಖರೀದಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ‘ಕಿಹಿಮ್ ಬೀಚ್‘ ಪಕ್ಕದ ಕೃಷಿ ಭೂಮಿಯನ್ನು ಯಶ್ ಅವರು ಬರೋಬ್ಬರಿ ₹24 ಕೋಟಿ ನೀಡಿ ಖರೀದಿಸಿದ್ದಾರೆ. ಈ ಭೂಮಿಗೆ ₹1.44 ಕೋಟಿ ಸ್ಟಾಂಪ್ ಡ್ಯೂಟಿ ಹಾಗೂ ₹60 ಸಾವಿರ ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಈ ಕೃಷಿ ಭೂಮಿ ಸುಮಾರು 5,289 ಚದರ ಮೀಟರ್ (1.306 ಎಕರೆ ) ವಿಸ್ತೀರ್ಣವನ್ನು ಹೊಂದಿದೆ. ಈ ಆಸ್ತಿಯಲ್ಲಿ ಒಂದು ಮನೆ ಕೂಡ ಸೇರಿದೆ. ಈಗಾಗಲೇ ಈ ಜಮೀನನ್ನು ಸೆಕ್ಷನ್ 7ರ ಅಡಿಯಲ್ಲಿ 'ಕೃಷಿ ಭೂಮಿ' ಎಂದು ನೋಂದಣಿ ಮಾಡಿಸಲಾಗಿದೆ ಎಂದು ವರದಿಯಾಗಿದೆ.

ಬಾಲಿವುಡ್ನ ಅನೇಕ ಸಿನಿ ತಾರೆಯರು ಹಾಗೂ ಉದ್ಯಮಿಗಳು ಈ ಕಡಲ ತೀರಕ್ಕೆ ಹತ್ತಿರವಿರುವ ಅಲಿಬಾಗ್ ಸುತ್ತಮುತ್ತ ಆಸ್ತಿ ಹೊಂದಿದ್ದಾರೆ. ಅಲಿಬಾಗ್ನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಈಗ ಯಶ್ ಜೋಡಿ ಹೂಡಿಕೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.