ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಮಾಲಿಗುಡ್ಡ’ದಲ್ಲಿ ಹಿರೋಶಿಮಾ, ನಾಗಸಕಿಯಾದ ‘ಡಾಲಿ’, ‘ಯಶ್‌’

Last Updated 11 ಜುಲೈ 2022, 11:40 IST
ಅಕ್ಷರ ಗಾತ್ರ

‘ಬೈರಾಗಿ’ ಯಶಸ್ಸಿನ ಗುಂಗಿನಲ್ಲಿರುವ ನಟ ‘ಡಾಲಿ ಧನಂಜಯ್‌’ ಅವರ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಆಗಸ್ಟ್‌ 12ರಂದು ರಚಿತಾ ರಾಮ್‌ ಜೊತೆಗಿನ ‘ಮಾನ್ಸೂನ್‌ ರಾಗ’, ಸೆ.9ರಂದು ‘Once Upon A Time in ಜಮಾಲಿಗುಡ್ಡ’, ಸೆ.30ರಂದು ‘ತೋತಾಪುರಿ’, ಅ.21ಕ್ಕೆ ‘ಹೆಡ್‌ಬುಷ್‌’ ಸಿನಿಮಾ ಬಿಡುಗಡೆಯಾಗಲಿದೆ.

ಸೋಮವಾರ ‘Once Upon A Time in ಜಮಾಲಿಗುಡ್ಡ’ ಚಿತ್ರದಲ್ಲಿನ ಧನಂಜಯ್‌ ಅವರ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.

‘ಹಿರೋಶಿಮಾ’ಎಂಬಪಾತ್ರದಲ್ಲಿಧನಂಜಯ್‌ಕಾಣಿಸಿಕೊಳ್ಳುತ್ತಿದ್ದು,ಖಳನಟಯಶ್‌ಶೆಟ್ಟಿ‘ನಾಗಸಕಿ’ಎಂಬಪಾತ್ರಕ್ಕೆ
ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಧನಂಜಯ್‌ ಕೈದಿಯಾಗಿರುತ್ತಾರೆಯೇ ಎನ್ನುವ ಪ್ರಶ್ನೆ ಇದೀಗ ಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆ ಪೂರಕವಾಗಿ ‘ಅವಳಿ ಕೈದಿಗಳು ಅವಳಿ ನಗರಗಳ ಹೆಸರಿನಲ್ಲಿ’ ಎಂದು ಧನಂಜಯ್‌ ಟ್ವೀಟ್‌ ಮಾಡಿದ್ದಾರೆ. ಚಿತ್ರದಲ್ಲಿಯಶ್‌ ಶೆಟ್ಟಿ ಕೈದಿ ಸಮವಸ್ತ್ರ ಧರಿಸಿ ಜೈಲಿನೊಳಗೆ ಇರುವ ಫೋಟೊ ಪೋಸ್ಟರ್‌ ಒಂದನ್ನು ಚಿತ್ರತಂಡ ಈ ಹಿಂದೆ ಬಿಡುಗಡೆ ಮಾಡಿತ್ತು.

ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ, ಶಿವಮೊಗ್ಗದಲ್ಲಿ 80 ದಿನ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರತಂಡವು ಪೋಸ್ಟ್‌ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಇದು 90ರ ದಶಕದಲ್ಲಿ ನಡೆಯುವ ಕಥೆ. ಬಾರ್ ಸಪ್ಲೈಯರ್‌ ಪಾತ್ರದಲ್ಲಿ ಧನಂಜಯ್‌ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ‘ಕಾಮಿಡಿ ಕಿಲಾಡಿಗಳು’ ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಕುಶಾಲ್ ಗೌಡ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ಕುಶಾಲ್ ಗೌಡ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT