ಯಶ್‌-ರಾಧಿಕಾ ಮಗಳಿಗೆ ಅಭಿಮಾನಿಗಳಿಂದ ನಾಮಕರಣ!

ಶನಿವಾರ, ಮಾರ್ಚ್ 23, 2019
31 °C

ಯಶ್‌-ರಾಧಿಕಾ ಮಗಳಿಗೆ ಅಭಿಮಾನಿಗಳಿಂದ ನಾಮಕರಣ!

Published:
Updated:

ಬೆಂಗಳೂರು: 2018ರ ವರ್ಷಾಂತ್ಯ ಕನ್ನಡದ ತಾರಾ ದಂಪತಿ ಯಶ್‌– ರಾಧಿಕಾಗೆ ಇಮ್ಮಡಿ ಖುಷಿ ತಂದಿತ್ತಿದೆ. ‘ಕೆಜಿಎಫ್‌’ ಸಿನಿಮಾ ಐದೂ ಭಾಷೆಗಳಲ್ಲಿ ಸೂಪರ್‌ಹಿಟ್‌ ಆಗಿ ಖುಷಿಯ ಕಾಮನಬಿಲ್ಲು ಮೂಡುತ್ತಿರುವುದು ಒಂದು ಕಡೆ. ಇನ್ನೊಂದು ಕಡೆ ಯಶ್‌–ರಾಧಿಕಾ, ಅಪ್ಪ–ಅಮ್ಮನಾದ ಹೆಮ್ಮೆಯ ಪುಲಕದಲ್ಲಿ ಮೀಯುತ್ತಿದ್ದಾರೆ.

ಡಿಸೆಂಬರ್‌‌ನಲ್ಲಿಯೇ ರಾಧಿಕಾ ಹೆಣ್ಣುಮಗುವಿಗೆ ಜನ್ಮವಿತ್ತಿದ್ದರು. ಮಗುವಿನ ಪಾಲನೆಯ ಸಂತಸವನ್ನು ದಂಪತಿ ಅನುಭವಿಸುತ್ತಿರುವಾಗಲೇ ಅಭಿಮಾನಿಗಳ ವಲಯದಲ್ಲಿ ಮಗುವಿಗೆ ಏನು ಹೆಸರಿಡಬೇಕು ಎಂಬ ಚರ್ಚೆ ಜೋರು ನಡೆಯುತ್ತಿದೆ. ಈ ಚರ್ಚೆ ಎಲ್ಲಿಯವರೆಗೆ ಮುಟ್ಟಿದೆ ಎಂದರೆ ಅವರವರೇ ಚರ್ಚಿಸಿ ಏನು ಹೆಸರಿಡಬಹುದು ಎಂಬುದನ್ನು ನಿರ್ಧರಿಸಿಯೂ ಬಿಟ್ಟಿದ್ದಾರೆ. ಹೌದು, ಅಭಿಮಾನಿ ವಲಯದಲ್ಲಿ ನಿರ್ಧರಿತವಾದ ಒಂದು ಹೆಸರನ್ನೇ ದಂಪತಿ ಇಡಲಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ಗಾಂಧಿನಗರದ ಗಲ್ಲಿಗಳಲ್ಲಿ ನುಸುಳಿಕೊಂಡು ಓಡಾಡುತ್ತಿದೆ.

ಮಗುವಿಗೆ ಇಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿರುವ ಹೆಸರು ‘ಯಶಿಕಾ’!. ಯಶ್‌ ಮತ್ತು ರಾಧಿಕಾ ಈ ಎರಡೂ ಹೆಸರುಗಳನ್ನು ಸೇರಿ ರೂಪಿಸಲಾದ ಯಶಿಕಾ ಎಂಬ ಹೆಸರು ಕೇಳಲಿಕ್ಕೇನೋ ಸುಂದರವಾಗಿಯೇ ಇದೆ. ಆದರೆ ಆ ಹೆಸರನ್ನೇ ಇಡಿ ಎಂದು ಒತ್ತಡ ಹೇರಲಿಕ್ಕಾದೀತೇ?

‘ನಾವು ಮಗುವಿಗೆ ಯಶಿಕಾ ಎಂದು ಹೆಸರಿಡುತ್ತಿದ್ದೇವೆ ಎಂಬುದು ನಿಜವಲ್ಲ’ ಎಂದು ರಾಧಿಕಾ ಅವರೇ ಆಪ್ತಬಳಗದಲ್ಲಿ ಹೇಳಿಕೊಂಡಿದ್ದಾರಂತೆ. ಮಗುವಿಗೆ ಐದು ತಿಂಗಳು ತುಂಬಿದ ಮೇಲೆ ಹೆಸರಿಡುವ ಯೋಚನೆ ಅವರದ್ದು. ಏನು ಹೆಸರಿಡಬೇಕು ಎಂಬುದನ್ನು ಅವರಿನ್ನೂ ನಿರ್ಧರಿಸಿಲ್ಲ. ಆದರೆ ಅವರ ಪರವಾಗಿ ಅಭಿಮಾನಿಗಳೇ ಯೋಚಿಸಿ ನಾಮಕರಣ ಮಾಡಿಬಿಡುವುದನ್ನು ಅಭಿಮಾನ ಎನ್ನಬೇಕೋ ತಾರೆಯರ ಖಾಸಗೀ ಬದುಕಿನ ಅತಿಕ್ರಮ ಪ್ರವೇಶದ ಪ್ರಯತ್ನ ಎನ್ನಬೇಕೋ ಗೊತ್ತಿಲ್ಲ.

ಅದೇನೇ ಇದ್ದರೂ ಯಶ್‌ ಮತ್ತು ರಾಧಿಕಾ ತಮ್ಮ ಮಗುವಿಗೆ ಏನು ಹೆಸರಿಡಬೇಕು ಎನ್ನುವುದನ್ನು ತಿಳಿದುಕೊಳ್ಳಲು ಇನ್ನೂ ಎರಡು ತಿಂಗಳು ಕಾಯಬೇಕಾಗಿರುವುದಂತೂ ಖಚಿತ.

ಬರಹ ಇಷ್ಟವಾಯಿತೆ?

 • 38

  Happy
 • 7

  Amused
 • 5

  Sad
 • 9

  Frustrated
 • 10

  Angry

Comments:

0 comments

Write the first review for this !