ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ ಇತ್ತೀಚೆಗಷ್ಟೇ ಮುಂದೂಡಿಕೆಯಾಗಿತ್ತು. ಹೀಗಿದ್ದರೂ ಸಿನಿಮಾ ಬಗೆಗಿನ ನಿರೀಕ್ಷೆ ಕಡಿಮೆಯಾಗಿಲ್ಲ. ಈ ಸಂದರ್ಭದಲ್ಲೇ ಸಿನಿಮಾದೊಳಗಿನ ಅವರ ಪಾತ್ರದ ಮತ್ತೊಂದು ಫೋಟೊ ಬಿಡುಗಡೆಯಾಗಿದೆ.

ಇತ್ತೀಚೆಗೆ ಅಮೆರಿಕದ ಲಾಸ್ ವೇಗಸ್ನಲ್ಲಿ ನಡೆದ ‘ಸಿನಿಮಾಕಾನ್’ನಲ್ಲಿ ಭಾಗವಹಿಸಿದ ಯಶ್ ಅಲ್ಲಿನ ಹಲವು ಮಾಧ್ಯಮಗಳ ಜೊತೆ ‘ಟಾಕ್ಸಿಕ್’ ಕುರಿತು ಮಾತನಾಡಿದ್ದಾರೆ. ಅಲ್ಲಿನ ಪ್ರಮುಖ ಅಂತರರಾಷ್ಟ್ರೀಯ ಸಿನಿಮಾ ನಿಯತಕಾಲಿಕದ ಮುಖಪುಟದಲ್ಲೂ ಯಶ್ ಅವರ ಈ ಫೋಟೋ ಪ್ರಕಟವಾಗಿದೆ. ಇದು ಪಾತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ಮಾರ್ಚ್ 19ರಂದೇ ತೆರೆಕಾಣಬೇಕಿದ್ದ ಸಿನಿಮಾ ಜೂನ್ 4ಕ್ಕೆ ಮುಂದೂಡಿಕೆಯಾಗಿತ್ತು. ಸಿನಿಮಾಕಾನ್ನಲ್ಲಿ ಸಿನಿಮಾದ ತುಣುಕುಗಳ ಪ್ರದರ್ಶನದ ಬಳಿಕ ಚಿತ್ರವನ್ನು ಅಂತರರಾಷ್ಟ್ರೀಯವಾಗಿ ಇನ್ನೂ ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಮತ್ತೊಮ್ಮೆ ಬಿಡುಗಡೆಯನ್ನು ಮುಂದೂಡಿದೆ.

ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಈ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮುಂತಾದವರು ತಾರಾಬಳಗದಲ್ಲಿದ್ದಾರೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1150695198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.