ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸಾನಿಯಾ ಮಿರ್ಜಾ ಮಾಡಿದ ಭಾವುಕ ಟ್ವೀಟ್‌ನಲ್ಲೇನಿದೆ?

Last Updated 14 ಜೂನ್ 2020, 16:29 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಭಾವುಕವಾಗಿ ಟ್ವೀಟ್ ಮಾಡಿರುವ ಅವರು, ‘ಮುಂದೊಂದು ದಿನ ನಾವು ಜೊತೆಯಾಗಿ ಟೆನ್ನಿಸ್ ಆಡೋಣ ಎಂದು ನೀವು ಹೇಳಿದ್ದಿರಿ. ನಿಮ್ಮ ಜೀವನ ನಗುವಿನಿಂದ ಕೂಡಿತ್ತು. ನೀವು ಹೋದಲ್ಲೆಲ್ಲನಗು ಪಸರಿಸುವಂತೆ ಮಾಡುತ್ತಿದ್ದಿರಿ. ಇಷ್ಟೊಂದು ನೋವು ಅನುಭವಿಸುತ್ತಿದ್ದೀರಿ ಎಂಬುದು ನಮಗೆ ಗೊತ್ತೇ ಇರಲಿಲ್ಲ. ಇಡೀ ವಿಶ್ವವೇ ನಿಮ್ಮನ್ನು ಮಿಸ್ ಮಾಡುತ್ತಿದೆ. ಇದನ್ನು ಬರೆಯುವಾಗ ಕೈ ನಡುಗುತ್ತಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಉಲ್ಲೇಖಿಸಿದ್ದಾರೆ.

‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದ, ಹಲವು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದಬಾಲಿವುಡ್ ನಟಸುಶಾಂತ್ ಸಿಂಗ್ ರಜಪೂತ್ ಭಾನುವಾರ ಮಧ್ಯಾಹ್ನ ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT