ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಯಜುವೇಂದ್ರ ಚಾಹಲ್ ಅವರು ಮೈದಾನದ ಒಳಗೂ ಹೊರಗು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಸದ್ಯ, ಈಗ ನಟಿಯೊಬ್ಬರಿಗೆ ಮೆಸೆಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ಮತ್ತೊಮ್ಮೆ ಚರ್ಚೆಯಾಗುತ್ತಿದ್ದಾರೆ.

ಒಟಿಟಿ ವೆಬ್ ಸರಣಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ವೈರಲ್ ಪೋಸ್ಟ್ಗಳ ಮೂಲಲ ಪ್ರಸಿದ್ಧಿ ಪಡೆದಿರುವ ನಟಿ ತಾನಿಯಾ ಚಟರ್ಜಿ ಅವರಿಗೆ ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ನಟಿ ತಾನಿಯಾ ಹೇಳಿರುವಂತೆ ಚಾಹಲ್ ಅವರು ‘ಆಪ್ ಕ್ಯೂಟ್ ಹೋ’ ಎಂದು ಸಂದೇಶ ಕಳುಹಿಸಿದ್ದಾರೆ. ಗಾಂಧಿ ಬಾತ್ ಮತ್ತು ಟಿಟಿಯಾನ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ತಾನಿಯಾ ಅವರು, ಪಾಪರಾಜಿಗಳೊಂದಿಗೆ ಮಾತನಾಡುವಾಗ ಚಾಹಲ್ ಮಾಡಿದ್ದಾರೆ ಎನ್ನಲಾದ ಸಂದೇಶವನ್ನು ಪ್ರದರ್ಶಿಸಿದ್ದಾರೆ.

ತಾನಿಯಾ ತಮ್ಮ ಇನ್ಸ್ಟಾಗ್ರಾಮ್ ಇನ್ಬಾಕ್ಸ್ ಮೆಸೆಜ್ ಅನ್ನು ಪ್ರದರ್ಶಿಸುತ್ತಾ, ‘ಚಾಹಲ್ ಕಳುಹಿಸಿದ ಈ ಸಂದೇಶಗಳನ್ನು ನೋಡಿ, ಅವರು ನನ್ನನ್ನು ಕ್ಯೂಟ್ ಎಂದು ಕರೆದಿದ್ದಾರೆ’ ಎಂದು ಹೇಳಿದ್ದಾರೆ.

ಯುಜ್ವೆಂದರ್ ಚಾಹಲ್ ಅವರು 2025ರಲ್ಲಿ ಧನಶ್ರೀ ವರ್ಮಾ ಅವರಿಂದ ವಿಚ್ಚೇದನ ಪಡೆದಿದ್ದರು. ಮಾತ್ರವಲ್ಲ, ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಆಗಾಗ ಚರ್ಚೆಯಾಗುತ್ತಿರುತ್ತಾರೆ. ಆದರೆ, ತಾನಿಯಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಚಹಾಲ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ, ಭಾರತ ಕ್ರಿಕೆಟ್ ತಂಡದಿಂದ ದೂರ ಉಳಿದಿರುವ ಚಾಹಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಅವರು 2023ರಲ್ಲಿ ಕೊನೆಯದಾಗಿ ಭಾರತ ತಂಡದ ಪರ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.