ಜೂನ್‌ನಲ್ಲಿ ಜೋಯಾ ಫ್ಯಾಕ್ಟರ್ ತೆರೆಗೆ

ಶುಕ್ರವಾರ, ಮಾರ್ಚ್ 22, 2019
24 °C
Zoya Factor, sonam kapoor

ಜೂನ್‌ನಲ್ಲಿ ಜೋಯಾ ಫ್ಯಾಕ್ಟರ್ ತೆರೆಗೆ

Published:
Updated:
Prajavani

ಸೋನಂಕಪೂರ್ ಮತ್ತು ದುಲ್ಕರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜೋಯಾ ಫ್ಯಾಕ್ಟರ್’ ಜೂನ್ 14ರಂದು ತೆರೆಕಾಣಲಿದೆ. ಲೇಖಕಿ ಅನುಜಾ ಚೌಧರಿ ಅವರ ಕಾದಂಬರಿ ಆಧರಿಸಿ ತಯಾರಾಗಿರುವ ಚಿತ್ರವಿದು. ಈಚೆಗೆ ಚಿತ್ರತಂಡ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಮಲಯಾಳಂ ಸಿನಿರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟ ದುಲ್ಕರ್ ಜತೆಗೆ ಸೋನಂ ಮೊದಲ ಬಾರಿಗೆ ನಟಿಸುತ್ತಿದ್ದು, ಸೋನಂ ತಂದೆ ಪಾತ್ರದಲ್ಲಿ ಚಿಕ್ಕಪ್ಪ ಸಂಜಯ್ ಕಪೂರ್ ನಟಿಸುತ್ತಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು.

‘ಖೂಬ್‌ಸೂರತ್’ ಸಿನಿಮಾದ ನಂತರ ನಾನು ಗಟ್ಟಿಕಥಾ ಹಂದರದ ಸಿನಿಮಾಕ್ಕಿಂತ ಭಿನ್ನ ಬಗೆಯ ಸಿನಿಮಾಗಳನ್ನು ಮಾಡಲು ತೊಡಗಿದ್ದೇನೆ. ಬಹುತೇಕರು ನನ್ನನ್ನು  ಜೋಯಾ ರೀತಿಯ ಪಾತ್ರದಲ್ಲಿಯೇ ನೋಡಲಿಚ್ಛಿಸುತ್ತಾರೆ. ಈ ವಿಷಯದಲ್ಲಿ ನಾನು ನಿರ್ದೇಶಕ ಅಭಿಷೇಕ್ ಶರ್ಮಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರೊಬ್ಬ ಅದ್ಭುತ ಮನುಷ್ಯ. ದುಲ್ಕರ್ ಜತೆಗೆ ಇದು ನನ್ನ ಮೊದಲ ಸಿನಿಮಾ’ ಎಂದು ಸೋನಂ ಸಿನಿಮಾ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಚಿತ್ರೀಕರಣ ಆರಂಭವಾದಾಗ ಸೋನಂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಹೊಸ ಆರಂಭ’ ಅನ್ನುವ ಒಕ್ಕಣೆಯೊಂದಿಗೆ ‘ಜೋಯಾ ಫ್ಯಾಕ್ಟರ್’ ಕುರಿತು ಹಂಚಿಕೊಂಡಿದ್ದರು.

ಸೋನಂ ಅಭಿನಯದ ‘ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಾಗಾ’ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಅಷ್ಟಾಗಿ ಯಶಸ್ಸು ಗಳಿಸದಿದ್ದರೂ ಸಲಿಂಗ ಪ್ರೇಮದ ಕಥೆಯನ್ನೊಳಗೊಂಡಿದ ಈ ಸಿನಿಮಾ ಭಿನ್ನ ಕಥಾವಸ್ತುವಿಗಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ಜೋಯಾ ಫ್ಯಾಕ್ಟರ್‌’ನಲ್ಲಿ ಸೋನಂ ಜತೆಗೆ ಪ್ರಧಾನ ಪಾತ್ರ ವಹಿಸಿರುವ ದುಲ್ಕರ್, ಕಳೆದ ವರ್ಷ ಕಡಿಮೆ ಬಜೆಟ್‌ನ ‘ಕಾರ್‌ವಾನ್’ ಅನ್ನುವ ಹಿಂದಿ ಸಿನಿಮಾದಲ್ಲಿ ಇರ್ಫಾನ್ ಖಾನ್ ಜತೆಗೆ ನಟಿಸಿದ್ದರು. ಬಾಲಿವುಡ್‌ನಲ್ಲಿ ಇದು ಅವರ ಮೊದಲ ಸಿನಿಮಾವಾಗಿದ್ದು, ದುಲ್ಕರ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !