ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಲಾಗೆ ಮತ್ತೆ ಲವ್ವಾಗಿದೆ

Last Updated 21 ಜುಲೈ 2019, 19:45 IST
ಅಕ್ಷರ ಗಾತ್ರ

ಅಮಲಾ ಪೌಲ್‌ ಮತ್ತೆ ಪ್ರೇಮಪಾಶಕ್ಕೆ ಸಿಲುಕಿದಂತಿದೆ. ತಮ್ಮ ಮುಂದಿನ ‘ಅಡಾಯ್‌’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಸ್ವತಃ ನಟಿಯೇ ಬಹಿರಂಗಪಡಿಸಿದ್ದಾರೆ.

‘ಹೆಬ್ಬುಲಿ’ ಚಿತ್ರದಲ್ಲಿ ನಟ ಸುದೀಪ್‌ ಜೊತೆ ನಾಯಕಿಯಾಗಿ ನಟಿಸಿದ್ದ ಅಮಲಾ ತಮ್ಮ ಮೊದಲ ಗಂಡ, ನಿರ್ದೇಶಕ ವಿಜಯ್‌ (ಕಳೆದ ವಾರ ವಿಜಯ್‌ ವೈದ್ಯೆಯೊಬ್ಬರ ಜೊತೆ ಮರುಮದುವೆಯಾಗಿದ್ದರು) ಅವರಿಂದವಿಚ್ಛೇದನ ಪಡೆದಿದ್ದರು. ಇದರ ಬೆನ್ನಲ್ಲೇ, ‘ನನಗೆ ಮತ್ತೆ ಲವ್ವಾಗಿದೆ, ಆ ವ್ಯಕ್ತಿಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ, ಅವರು ಬುದ್ಧಿವಂತ ವ್ಯಕ್ತಿ’ ಎಂದೆಲ್ಲಾ ಅಮಲಾ ಹೊಗಳಿದ್ದಾರೆ. ಆ ವ್ಯಕ್ತಿ ಯಾರು? ಎನ್ನುವುದು ಅಭಿಮಾನಿಗಳ ಕುತೂಹಲ.

‘ ಸುತ್ತ ಹೊಗಳುವವರೇ ತುಂಬಿಕೊಳ್ಳುವುದರಿಂದ ನಟ– ನಟಿಯರನ್ನು ಯಾವಾಗಲೂ ಅಸುರಕ್ಷಿತ ಭಾವ ಕಾಡುತ್ತಿರುತ್ತದೆ. ಇದು ನನಗೂ ಅನುಭವಕ್ಕೆ ಬಂದಿದೆ. ಆದರೆ ಈ ವ್ಯಕ್ತಿ ನನ್ನ ನ್ಯೂನತೆಗಳನ್ನು ಗುರುತಿಸಿ ಹೇಳುತ್ತಾರೆ. ಅವರು ನನ್ನ ಮೂರನೇ ಕಣ್ಣು ತೆರೆಸಿದ್ದಾರೆ’ ಎಂದು ಹೊಗಳಿದ್ದಾರೆ.

ಆದರೆ ‘ಆ ವ್ಯಕ್ತಿ’ ಬಗ್ಗೆ ಅಮಲಾ ಯಾವುದೇ ಗುರುತನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT