ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಸೂಟಬಲ್ ಬಾಯ್‌‘ ಟ್ರೇಲರ್ ಬಿಡುಗಡೆ: ರೊಮ್ಯಾಂಟಿಕ್‌‌ ದೃಶ್ಯಗಳು ವೈರಲ್‌

ರೊಮ್ಯಾಂಟಿಕ್‌‌ ದೃಶ್ಯಗಳು ವೈರಲ್‌
Last Updated 12 ಜುಲೈ 2020, 6:26 IST
ಅಕ್ಷರ ಗಾತ್ರ

‘ಬಿಬಿಸಿ ಒನ್‌‘ಗಾಗಿ ವಾಹಿನಿಗಾಗಿ ತಯಾರಿಸಿರುವ ಮಿನಿ ವೆಬ್‌ ಸರಣಿ ‘ದಿ ಸೂಟಬಲ್ ಬಾಯ್‌‘. ಮೀರಾ ನಾಯರ್‌ ನಿರ್ದೇಶನದ ಸರಣಿಯಲ್ಲಿ ಬಾಲಿವುಡ್ ‌ನಟಿ ಟಬು ಮತ್ತು ಇಶಾನ್‌ ಕಟ್ಟರ್ ಅಭಿನಯಿಸಿದ್ದಾರೆ.

ಆರಂಭವಾಗುವ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಈ ಸರಣಿಯ ಟ್ರೇಲರ್ ಈಗ‌ ಬಿಡುಗಡೆಯಾಗಿದೆ.ಇದೇ 26ರಿಂದ ಒಟ್ಟು ಆರು ಕಂತುಗಳಲ್ಲಿ ಸರಣಿ‌ ಪ್ರಸಾರವಾಗಲಿದೆ.

‌ಈಗ ಬಿಡುಗಡೆಯಾಗಿರುವ ಒಂದು ನಿಮಿಷದಟ್ರೇಲರ್‌ನಲ್ಲಿ ಇಶಾನ್‌ ಮತ್ತು ಟಬು ಜೋಡಿಯ ಸಖತ್‌ ರೊಮ್ಯಾಂಟಿಕ್‌ ದೃಶ್ಯಗಳಿವೆ. ಬಿಡುಗಡೆಯಾದ ಒಂದು ದಿನದದಲ್ಲಿ ಐದೂವರೆ ಲಕ್ಷ ಮಂದಿ ಟ್ರೇಲರ್‌ ವೀಕ್ಷಿಸಿದ್ದಾರೆ.

ಖ್ಯಾತ ಕಾದಂಬರಿಕಾರ ವಿಕ್ರಮ್ ಸೇಠ್ ಅವರ ಅದೇ ಹೆಸರಿನ ಕಾದಂಬರಿಯನ್ನು ಈ ಸೀರೀಸ್ ಆಧರಿಸಿದ್ದು, ಆ್ಯಂಡ್ರೂ ಡೇವಿಸ್ ಅವರು ಚಿತ್ರಕಥೆ ರಚಿಸಿದ್ದಾರೆ.‌ ‘ಎ ಸೂಟಬಲ್ ಬಾಯ್‘ – ಉತ್ತರ ಭಾರತದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಲತಾಳ ಕತೆ ಹೇಳುವ ಸಿನಿಮಾ. ಈ ಕತೆ ನಡೆಯುವ ಸಮಯದಲ್ಲೇ ಭಾರತ, ತನ್ನ ಮೊದಲ ಸಾರ್ವತ್ರಿಕ ಚುನಾವಣೆಗೆ ತಯಾರಿ ನಡೆಸುತ್ತಿರುತ್ತದೆ.

2019ರ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಮುಗಿದಿದ್ದು, ಇದೇ ತಿಂಗಳಲ್ಲಿ ಮೊದಲ ಕಂತು ಪ್ರಸಾರವಾಗುತ್ತದೆ.2006ರಲ್ಲಿ ನಾಟಕವೊಂದರಲ್ಲಿ ಜತೆಯಾಗಿದ್ದ ಮೀರಾ ಮತ್ತು ಟಬು, ಹದಿನಾಲ್ಕು ವರ್ಷಗಳ ನಂತರ ಈ ಸರಣಿ ಮೂಲಕ ಮತ್ತೆ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಇಶಾನ್ ಸೂಟಬಲ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಟಬು,ರಸಿಕಾ ದುಗ್ಗಲ್‌, ತಾನ್ಯಾ, ರಾಮ್‌ ಕಪೂರ್ ಮತ್ತಿತರರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT