ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ ‘ರಾಕ್ಷಸ’ ವೆಬ್ಸರಣಿ ಬೆನ್ನಲ್ಲೇ ನಟ ಧನಂಜಯ ನಿರ್ಮಾಣದ ‘ಜೆರಾಕ್ಸ್’ ಎಂಬ ವೆಬ್ಸರಣಿ ಜೀ5ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಸರಣಿಯನ್ನು ‘ಬ್ಲಿಂಕ್’ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದಾರೆ. ಇದು ಧನಂಜಯ ನಿರ್ಮಾಣ ಮಾಡುತ್ತಿರುವ ಮೊದಲ ವೆಬ್ಸರಣಿಯಾಗಿದ್ದು, ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ಜಾನರ್ನಲ್ಲಿ ಈ ಸರಣಿ ಮೂಡಿಬಂದಿದೆ. ಸರಣಿಯ ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದಿದೆ ತಂಡ.

‘ಒಟಿಟಿ ವೇದಿಕೆಯಲ್ಲಿ ಇದುವರೆಗೆ ನಾನು ನಿರ್ಮಾಣ ಮಾಡಿರಲಿಲ್ಲ. ಈ ದಿಕ್ಕಿನಲ್ಲಿ ಕೆಲವು ಸಮಯದಿಂದ ಪ್ರಯತ್ನಿಸುತ್ತಿದ್ದೆ. ಸರಿಯಾದ ಕಥೆ ಮತ್ತು ಸೂಕ್ತ ವೇದಿಕೆಯಿಗಾಗಿ ಕಾಯುತ್ತಿದ್ದೆ. ಆಗ ನನಗೆ ‘ಜೆರಾಕ್ಸ್’ ಕಥೆ ಸಿಕ್ಕಿತು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನನ್ನ ಆಶಯಕ್ಕೂ ಇದು ಸೂಕ್ತವಾಗಿದೆ’ ಎಂದಿದ್ದಾರೆ ಧನಂಜಯ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-148637628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.