ಮುಂಬೈ: ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದ, 2026ರ ಹಿಟ್ ಚಿತ್ರ ಧುರಂಧರ್ 2 ಒಟಿಟಿಯಲ್ಲಿ ತೆರೆಕಾಣುತ್ತಿದೆ.

‘ಧುರಂಧರ್: ದಿ ರಿವೇಂಜ್’ ಸಿನಿಮಾ ಜೂನ್ 4ರಂದು ಜಿಯೊ ಹಾಟ್ ಸ್ಟಾರ್ನಲ್ಲಿ ಬಿಡುಗಡೆಯಾಗುತ್ತಿದೆ. ಜೂನ್ 4ರಂದು ಸಂಜೆ 7 ಗಂಟೆಗೆ ಡಿಜಿಟಲ್ ಪ್ರೀಮಿಯರ್ ಇರಲಿದ್ದು, ಜೂನ್ 5 ರಿಂದ ಸ್ಟ್ರೀಮಿಂಗ್ ಆರಂಭವಾಗಲಿದೆ. ಭಾರತದ ವೀಕ್ಷಕರು ಅನಸೀನ್ ಮತ್ತು ಅನ್ಕಟ್ ವರ್ಶನ್ ಅನ್ನು ನೋಡಬಹುದು ಎಂದು ಚಿತ್ರತಂಡ ಹೇಳಿದೆ.

ಸಿನಿಮಾ ಆರಂಭಕ್ಕೂ ಮುನ್ನ 30 ನಿಮಿಷ ತೆರೆಹಿಂದಿನ ಕಥೆಗಳು, ಚಿತ್ರನಿರ್ಮಾಣ ಸಂದರ್ಭದ ಮೋಜಿನ ಕ್ಷಣಗಳ ವಿಡಿಯೊ ಪ್ರಸಾರವಾಗಲಿದ್ದು ನಂತರ ಕಥೆ ತೆರೆದುಕೊಳ್ಳುತ್ತದೆ.
.ಧುರಂಧರ್–ದಿ ರಿವೇಂಜ್ ಸಿನಿಮಾ ವಿಮರ್ಶೆ: ಕಾಲ್ಪನಿಕ ಕಥೆಯಲ್ಲಿ ಪ್ರತೀಕಾರದ ಅಧ್ಯಾಯ.
ಧುರಂಧರ್ನಲ್ಲಿ ದೊಡ್ಡ ತಾರಾಗಣವೇ ಇದೆ. ರಣವೀರ್ ಸಿಂಗ್, ಆರ್.ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

ಕಳೆದ ಡಿಸೆಂಬರ್ನಲ್ಲಿ ತೆರೆಕಂಡ ‘ಧುರಂಧರ್’ ಸಿನಿಮಾದ ಮುಂದುವರಿದ ಭಾಗ(ಸೀಕ್ವೆಲ್) ಇದಾಗಿದೆ.

‘ಧುರಂಧರ್’ ಮೊದಲ ಭಾಗದಲ್ಲಿ ಕಂದಹಾರ್ ವಿಮಾನ ಹೈಜಾಕ್, 2001ರ ಸಂಸತ್ ಭವನದ ಮೇಲಿನ ಉಗ್ರರ ದಾಳಿಯ ಘಟನೆಗಳನ್ನು ಆಯ್ದುಕೊಂಡಿದ್ದ ನಿರ್ದೇಶಕರು ಸೀಕ್ವೆಲ್ನಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ, ನೋಟು ಅಮಾನ್ಯೀಕರಣ, 2017ರ ಉತ್ತರ ಪ್ರದೇಶ ಚುನಾವಣೆ ಮುಂತಾದ ಘಟನೆಗಳನ್ನು ಜೋಡಿಸಿ ಕಥೆ ಹೆಣೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.