ಮಲಯಾಳದಲ್ಲಿ ‘ಮಿನ್ನಲ್ ಮುರುಳಿ’ ಎಂಬ ಸಿನಿಮಾ ತೆರೆಕಂಡಿತ್ತು. ಪ್ರತ್ಯೇಕವಾಗಿ ಒಂದೇ ರಾತ್ರಿ ಬಡಿದ ಸಿಡಿಲು ನಾಯಕ ಹಾಗೂ ಖಳನಾಯಕನಿಗೆ ತಾಗುತ್ತದೆ. ಅದು ಅವರಿಗೆ ಊಹಿಸಲಾಗದ ಶಕ್ತಿ ನೀಡುತ್ತದೆ. ಇದನ್ನು ಹಾಸ್ಯ ಮಿಶ್ರಿತ ಕಥೆಯಲ್ಲಿ ನಿರ್ದೇಶಕರು ತೆರೆಗೆ ತಂದಿದ್ದರು. ‘ಜೆರಾಕ್ಸ್’ ಇದೇ ಮಾದರಿಯ ಕಥೆ ಹೊಂದಿದೆ. ಇಲ್ಲಿ ನಾಯಕನಿಗೆ ಸಿಡಿಲು ಬಡಿಯುವುದಿಲ್ಲ. ಬದಲಾಗಿ ಆತ ಕಟ್ಟಿರುವ ತಾಯತದಲ್ಲಿ ಅಪರೂಪದ ಶಕ್ತಿ ಅಡಗಿರುತ್ತದೆ.

ಆರು ಸಂಚಿಕೆಗಳನ್ನು ಒಳಗೊಂಡ ಚಿಕ್ಕ ಸರಣಿ ಇದು. ಸಿನಿಮಾ ರೂಪದಲ್ಲಿ ಬಂದಿದ್ದರೆ ಸುಮಾರು ಎರಡು ಗಂಟೆಯ ಅವಧಿಯಲ್ಲಿರುತ್ತಿತ್ತು. ಮಳವಳ್ಳಿಯ ರಾಯದುರ್ಗದ ಪ್ರಕಾಶನಿಗೆ (ನಾಗಭೂಷಣ) ಬಾಲ್ಯದಲ್ಲಿ ಗುಣವಾಗದ ಹೊಟ್ಟೆನೋವು. ಆತನ ಹೆತ್ತವರು ಊರ ಮಾನಿದೇವರ ಗುಡಿಯಲ್ಲಿ ಆತನಿಗೊಂದು ತಾಯತ ಕಟ್ಟಿಸುತ್ತಾರೆ. ಕಟ್ಟುವ ಸಂದರ್ಭದಲ್ಲಿ ಅದಕ್ಕೆ ಬಡಿದ ಸಿಡಿಲು ಅದರೊಳಗೊಂದು ಶಕ್ತಿ ತುಂಬುತ್ತದೆ. ಇಂತಹ ತಾಯತ ಹೊಂದಿರುವ ಪ್ರಕಾಶ ಯುವಕನಾದಾಗ ‘ಜೆರಾಕ್ಸ್’ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಒಂದು ದಿನ ಆ ಜೆರಾಕ್ಸ್ ಯಂತ್ರಕ್ಕೆ ತಾಯತ ತಾಗಿದಾಗ ಕಥೆ ತೆರೆದುಕೊಳ್ಳುತ್ತದೆ. ಊರಲ್ಲಿ ತದ್ರೂಪಿಗಳ ಓಡಾಟ ಶುರುವಾಗುತ್ತದೆ.

ವೆಬ್ಸರಣಿಯಾಗಿ ‘ಜೆರಾಕ್ಸ್’ ಅವಧಿ ಬಹಳ ಸಣ್ಣದಿದೆ. ನಿರ್ದೇಶಕರು ಭಿನ್ನವಾದ ಕುತೂಹಲಕಾರಿ ವಿಷಯವನ್ನಿಟ್ಟು ಕಥೆ ಹೆಣೆದಿದ್ದಾರೆ. ಸರಣಿ ಕೊಲೆ, ಕೊಲೆಗಳ ತನಿಖೆಯ ಕಥೆಗಳಿದ್ದರಷ್ಟೇ ವೆಬ್ಸರಣಿಗಳನ್ನು ನೋಡುತ್ತಾರೆ ಎನ್ನುವ ಸಂದರ್ಭದಲ್ಲಿ ಹಾಸ್ಯ ಪ್ರಧಾನ ಫ್ಯಾಂಟಸಿ ಥ್ರಿಲ್ಲರ್ ಕಥೆ ಬರೆದಿರುವುದು ಸ್ವಾಗತಾರ್ಹ. ಸಂಚಿಕೆಗಳ ಮಿತಿಯು ತರಬಹುದಾಗಿದ್ದ ಹಲವು ವಿಷಯಗಳ ಸೇರ್ಪಡೆಗೂ ಅಡ್ಡಿಯಾದಂತೆ ‘ಜೆರಾಕ್ಸ್’ನಲ್ಲಿ ಭಾಸವಾಗುತ್ತದೆ.

ಪಟ್ಟಣದಲ್ಲಿ ನಡೆಯುವ ಕುತೂಹಲಕಾರಿ ರಾಜಕೀಯ ಮಾತುಕತೆ, ಚರ್ಚೆಗಳು, ಆಚರಣೆ, ಕಟ್ಟೆ ಪಂಚಾಯ್ತಿ, ಜನರ ಜೀವನವನ್ನು ಇನ್ನಷ್ಟು ಕಟ್ಟಿಕೊಡಲು ಅವಕಾಶವಿತ್ತು. ಪಾತ್ರಗಳನ್ನಷ್ಟೇ ಕೇಂದ್ರೀಕರಿಸಿರುವ ಕಾರಣದಿಂದ ಅವುಗಳ ಸುತ್ತಮುತ್ತಲಿನ ಜನಜೀವನ ಸರಣಿಯಲ್ಲಿ ಸೆರೆಯಾಗಿಲ್ಲ. ‘ಜೆರಾಕ್ಸ್’ ಪಾತ್ರಗಳನ್ನಿಟ್ಟುಕೊಂಡು ಇನ್ನಷ್ಟು ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಬಹುದಿತ್ತು. ಕಥೆಯ ಸೂಕ್ಷ್ಮ ಭಾಗವನ್ನು ರಿಲೀಸ್ಗೂ ಮೊದಲೇ ಬಿಟ್ಟುಕೊಟ್ಟಿರುವ ಕಾರಣ ಕಥೆಯು ಕುತೂಹಲ ಉಳಿಸಿಕೊಳ್ಳುವುದಿಲ್ಲ. ‘ಜೆರಾಕ್ಸ್’ ಗುಟ್ಟುಬಿಟ್ಟುಕೊಡದೆ ಇಡೀ ಕಥೆಯನ್ನು ರಿವರ್ಸ್ ಸ್ಕ್ರೀನ್ಪ್ಲೇಯಲ್ಲಿ ಹೇಳುವ ಅವಕಾಶವಿತ್ತು.

ಕಥೆ ಭಿನ್ನವಾಗಿದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಬೆಳೆಸುವಲ್ಲಿ ತಂಡ ಎಡವಿದಂತಿದೆ. ಕಥೆಯ ಅಂತ್ಯದ ಬಗ್ಗೆ ಇನ್ನಷ್ಟು ಯೋಚನೆ, ಕೆಲಸ ಮಾಡಬಹುದಿತ್ತು. ಕಥೆಯು ಹಠಾತ್ ಕೊನೆಗೊಳ್ಳುವುದು ಇದಕ್ಕೆ ಸಾಕ್ಷಿ. ಜನರನ್ನು ನಗಿಸುವ ಸಾಮರ್ಥ್ಯ ಹೊಂದಿರುವ ನಾಗಭೂಷಣ್ ಹಾಗೂ ಶ್ರೀವತ್ಸ ಕಾಂಬಿನೇಷನ್ ದೃಶ್ಯಗಳನ್ನು ಮತ್ತಷ್ಟು ಅಳವಡಿಸಿಕೊಳ್ಳಬೇಕಿತ್ತು. ರಾಜ್ಕುಮಾರ್ ಅವರ ‘ಜೆರಾಕ್ಸ್’ ರೂಪಕ್ಕೆ ಮಾತ್ರ ಜೀವ ಇರುವುದು, ಏಕೆ ಕೊನೆಯಲ್ಲಿ ಆ ಪಾತ್ರವಿರುವುದಿಲ್ಲ ಎನ್ನುವುದಕ್ಕೆ ಉತ್ತರವಿಲ್ಲ.

ನಟನೆಯಲ್ಲಿ ನಾಗಭೂಷಣ್ ‘ಪ್ರಕಾಶ’ನಾಗಿ ಜೀವಿಸಿದ್ದಾರೆ. ರಾಜ್ಕುಮಾರ್ ಅವರ ಅಭಿಮಾನಿಯಾಗಿ ಮಿಂಚಿದ್ದಾರೆ. ‘ದೊಡ್ಡಪ್ಪ’ನ ಪಾತ್ರದಲ್ಲಿ ಓಂಪ್ರಕಾಶ್ ರಾವ್ ನಗಿಸುತ್ತಾರೆ. ಮಂಜು ಪಾವಗಡ, ಪಾಯಲ್ ಚಂಗಪ್ಪ, ತುಕಾಲಿ ಸಂತೋಷ್ ಎರಡು ಶೇಡ್ಗಳ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ವಿಜಯ್ ಪ್ರಸಾದ್, ಸುಧಾಕರ್ ಗೌಡ, ಜಗಪ್ಪ, ಯಶವಂತ ಶೆಟ್ಟಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-548660084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.