ಸರ್ಸೆ ಸರ್ಸೆ ಹಾಡಿನ ಮೂಲಕ ವಿವಾದ ಸೃಷ್ಟಿಸಿದ್ದ ಕನ್ನಡದ ‘ಕೆಡಿ:ದಿ ಡಿವಿಲ್’ ಚಿತ್ರ ಒಟಿಟಿಗೆ ಬರುತ್ತಿದೆ. ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಈ ಸಿನಿಮಾ ಜೂನ್ 5ರಂದು ಜೀ5ನಲ್ಲಿ ತೆರೆಕಾಣುತ್ತಿದೆ.

ಈ ಬಗ್ಗೆ ಜಿ5 ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಏಪ್ರಿಲ್ 30 ರಂದು ಚಿತ್ರ ಥಿಯೇಟರ್ಗೆ ಲಗ್ಗೆಇಟ್ಟಿತ್ತು.

80ರ ದಶಕದ ಬೆಂಗಳೂರಿನ ಭೂಗತ ಜಗತ್ತು, ಅದರ ರಕ್ತಚರಿತ್ರೆ, ರಾಜಕೀಯದ ಪೈಪೋಟಿ, ಮತ್ತು ವೈಯಕ್ತಿಕ ಸಂಬಂಧಗಳ ಸಂಘರ್ಷ–ಇವೆಲ್ಲವನ್ನೂ ಒಟ್ಟುಗೂಡಿಸಿ ಕಟ್ಟಿದ ಕಥೆ ಕೆಡಿ:ದಿ ಡಿವಿಲ್’ ಸಿನಿಮಾದಲ್ಲಿದೆ.

ಈ ಚಿತ್ರದಲ್ಲಿ ಕಾಲ ಭೈರವನ ಪಾತ್ರದಲ್ಲಿ ಕಿಚ್ಚ ಸುದೀಪ್, ಢಾಕ್ ದೇವನಾಗಿ ಸಂಜಯ್ ದತ್, ಅಣ್ಣಯ್ಯಪ್ಪನಾಗಿ ರವಿಚಂದ್ರನ್ ಕಾಣಿಸಿಕೊಂಡಿದ್ದರೆ, ಧರ್ಮನ ಪಾತ್ರದಲ್ಲಿ ರಮೇಶ್ ಅರವಿಂದ್, ಮಹಾಲಕ್ಷ್ಮಿಯಾಗಿ ರೀಷ್ಮಾ ನಾಣಯ್ಯ ಹಾಗೂ ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ನೋರಾ ಫತೇಹಿ ನೃತ್ಯ ಮಾಡಿದ ‘ಸೆರಗಾ ಸರ್ಸೆ’ ಹಾಡು ವಿವಾದ ಸೃಷ್ಟಿಸಿತ್ತು. ‘ಅಣ್ತಮ್ಮ ಜೋಡೆತ್ತು ಕಣೋ‘ 'ಶಿವ ಶಿವ‘, ‘ಸೆಟ್ಟಗಲ್ಲ’ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದವು.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿಲಿಯಂ ಡೇವಿಡ್ ಅವರ ಛಾಯಾಚಿತ್ರಗ್ರಹಣ, ಸಂಕೇತ್ ಆಚಾರ್ ಅವರ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.