ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿಯಾದ ನೆಟ್‌ಫ್ಲಿಕ್ಸ್ ಸಿಇಒ

Last Updated 17 ಫೆಬ್ರುವರಿ 2023, 16:04 IST
ಅಕ್ಷರ ಗಾತ್ರ

ನವದೆಹಲಿ: ಜನಪ್ರಿಯ ಸ್ಟ್ರೀಮಿಂಗ್ ತಾಣವಾದ ನೆಟ್‌ಫ್ಲಿಕ್ಸ್‌ ಸಂಸ್ಥೆಯ ಸಿಇಒ ಟೆಡ್ ಸರಂಡೋಸ್‌ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮನರಂಜನಾ ಕ್ಷೇತ್ರದಲ್ಲಿ ಆರೋಗ್ಯಕರ ವಾತಾವರಣದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಚಿವ ಠಾಕೂರ್ ಇದೇ ವೇಳೆ ಟೆಡ್ ಅವರಿಗೆ ಮನವಿ ಮಾಡಿಕೊಂಡರು.

ಒಟಿಟಿ ವೇದಿಕೆಯಲ್ಲಿ ಭಾರತ ಜಾಗತಿಕವಾಗಿ ನಂಬರ್ 1 ಆಗುವತ್ತ ಬೆಳೆಯುತ್ತಿದೆ. ಭಾರತದ ಒರಿಜಿನಲ್ ಕಂಟೆಂಟ್‌ಗಳು ವಿದೇಶಗಳಲ್ಲು ಸಾಕಷ್ಟು ಜನಪ್ರಿಯವಾಗುತ್ತಿವೆ. ಇಲ್ಲಿನ ನಿಜವಾದ ಪ್ರತಿಭೆಗಳನ್ನು ಗುರುತಿಸಲು ಇದೊಂದು ಅದ್ಭುತ ವೇದಿಕೆಯಾಗಿದೆ. ನಾವು ಟೆಡ್ ಅವರ ಜೊತೆ ಈ ನಿಟ್ಟಿನಲ್ಲಿ ಆಶಾ ಭಾವನೆಯೊಂದಿಗೆ ಇದ್ದೇವೆ ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಸಚಿವರಿಗೆ ಟೆಡ್ ಅವರು ಭಾರತದ ಪ್ರಾದೇಶಿಕ ಕಂಟೆಂಟ್‌ಗಳು ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕವಾಗಿ ಸಾಕಷ್ಟು ಗಮನ ಸೆಳೆಯುತ್ತಿರುವ ಬಗ್ಗೆ ವಿವರಿಸಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ವೀರರ 25 ಕಥೆಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ಹೊರತರಲು ಕೇಂದ್ರ ಸರ್ಕಾರ ನೆಟ್‌ಫ್ಲಿಕ್ಸ್‌ನೊಂದಿಗೆ ಒ‍ಪ್ಪಂದ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT