ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಖ್ಯಭೂಮಿಕೆಯಲ್ಲಿರುವ ನೆಟ್ಫ್ಲಿಕ್ಸ್ ಸಿನಿಮಾ ‘ಕರ್ತವ್ಯ’ ಮೇ 15ರಿಂದ ಸ್ಟ್ರೀಮ್ ಆಗಲಿದೆ. ಈ ಕುರಿತು ನಟ ಶಾರುಖ್ ಖಾನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೊಲೀಸ್ ಅಧಿಕಾರಿ ಸುತ್ತ ನಡೆಯುವ ಕಥಾಹಂದರ ಸಿನಿಮಾದಲ್ಲಿದ್ದು, ಚಿತ್ರವನ್ನು ‘ಭಕ್ಷಕ್’ ಖ್ಯಾತಿಯ ಪುಲಕಿತ್ ನಿರ್ದೇಶಿಸಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ಸ್ನಡಿ ಗೌರಿ ಖಾನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ರಸಿಕಾ ದುಗಾಲ್, ಸಂಜಯ್ ಮಿಶ್ರಾ, ಜಾಕಿರ್ ಹುಸೈನ್, ಮನಿಶಾ ಚೌಧರಿ, ಸೌರಭ್ ದ್ವಿವೇದಿ ತಾರಾಬಳಗದಲ್ಲಿದ್ದಾರೆ. ‘ಭಕ್ಷಕ್’ ಬಳಿಕ ನೆಟ್ಫ್ಲಿಕ್ಸ್ಗಾಗಿ ಪುಲಕಿತ್ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ ನೆಟ್ಫ್ಲಿಕ್ಸ್ನಲ್ಲೇ ತೆರೆಕಂಡ ‘ಜುವೆಲ್ ಥೀಫ್–ದಿ ಹೈಸ್ಟ್ ಬಿಗಿನ್ಸ್’ನಲ್ಲಿ ಸೈಫ್ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಪ್ರಿಯದರ್ಶನ್ ನಿರ್ದೇಶನದ ‘ಹೈವಾನ್’ನಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಸೈಫ್ ಮತ್ತೊಮ್ಮೆ ತೆರೆಹಂಚಿಕೊಳ್ಳಲಿದ್ದಾರೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-51-1495616441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.