ನೆಟ್ಫ್ಲಿಕ್ಸ್, ಜಿಯೋ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಏ.11–17) ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು:

ಸಿನಿಮಾ: ಟೋಸ್ಟರ್

ಭಾಷೆ: ಹಿಂದಿ

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಏ.15

ರಾಜ್ಕುಮಾರ್ ರಾವ್ ನಟನೆಯ ಬಾಲಿವುಡ್ನ ಹಾಸ್ಯ ಚಲನಚಿತ್ರ ‘ಟೋಸ್ಟರ್’, ಏ.15ರಿಂದ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಜಿಪುಣ ವ್ಯಕ್ತಿಯೊಬ್ಬ, ನವವಿವಾಹಿತ ದಂಪತಿಗಳಿಗೆ ಟೋಸ್ಟರ್ ಒಂದನ್ನು ಉಡುಗೊರೆಯಾಗಿ ನೀಡುತ್ತಾನೆ. ಅವನಿಗೆ ಅದರ ಮೇಲೆ ಗೀಳು ಉಂಟಾಗುತ್ತದೆ. ಅದರ ಹಿಂದೆ ಹೋಗುವ ವ್ಯಕ್ತಿಯು ಕೊಲೆ ಮತ್ತು ಅವ್ಯವಸ್ಥೆಯ ಸಂಕೋಲೆಯೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ‘ಟೋಸ್ಟರ್’ ಸಿನಿಮಾ. ವಿವೇಕ್ ದಾಸಚೌಧರಿ ನಿರ್ದೇಶನದ ಈ ಚಿತ್ರದಲ್ಲಿ ರಾಜ್ಕುಮಾರ್ ರಾವ್ ಮತ್ತು ಸನ್ಯಾ ಮಲ್ಹೋತ್ರಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ನೇರವಾಗಿ ಒಟಿಟಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಸಿನಿಮಾ: ಉಸ್ತಾದ್ ಭಗತ್ ಸಿಂಗ್

ಭಾಷೆ: ತೆಲುಗು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಏ. 16

ನಟ ಪವನ್ ಕಲ್ಯಾಣ್ ನಟನೆಯ ಟಾಲಿವುಡ್ನ ಆ್ಯಕ್ಷನ್–ಕಾಮಿಡಿ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವು ಏ.16ರಿಂದ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಹರೀಶ್ ಶಂಕರ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ, ರಾಶಿ ಖನ್ನಾ ಮತ್ತು ಆರ್. ಪಾರ್ತಿಬನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 150 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರವು 2026ರ ಮಾರ್ಚ್ 19ರಂದು ಬಿಡುಗಡೆಯಾಗಿತ್ತು. ಆದರೆ, ಬಾಕ್ಸ್ ಆಫೀಸ್ನಲ್ಲಿ 94 ಕೋಟಿ ಗಳಿಕೆ ಮಾಡಿತ್ತು. 154 ನಿಮಿಷ ಅವಧಿಯಿರುವ ಈ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳ, ಹಿಂದಿ ಭಾಷೆಯಲ್ಲಿ ಒಟಿಟಿಯಲ್ಲಿ ಲಭ್ಯವಿದೆ.

ಸಿನಿಮಾ: ಯೂತ್

ಭಾಷೆ: ತಮಿಳು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಏ. 16

ತಮಿಳಿನ ರೋಮ್ಯಾಂಟಿಕ್–ಕಾಮಿಡಿ ಸಿನಿಮಾ ‘ಯೂತ್’ ಶಾಲೆಯ ದಿನಗಳ ಕಥೆಯನ್ನು ಒಳಗೊಂಡಿದ್ದು, ಏ.16ರಿಂದ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಚಿತ್ರವನ್ನು ಕೆನ್ ಕರುಣಾಸ್ ನಿರ್ದೇಶಿಸಿದ್ದು, ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರಜ್ ವೆಂಜರಮೂಡು, ದೇವದರ್ಶಿನಿ, ಅನಿಶ್ಮಾ ಅನಿಲಕುಮಾರ್, ಮೀನಾಕ್ಷಿ ದಿನೇಶ್, ಪ್ರಿಯಾಂಶಿ ಯಾದವ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2026ರ ಮಾ.19ರಂದು ತೆರೆಕಂಡಿದ್ದ ಈ ಚಿತ್ರವು ₹53 ಕೋಟಿ ಗಳಿಕೆ ಮಾಡಿತ್ತು. ಇದೀಗ ತೆಲುಗು, ತಮಿಳು, ಕನ್ನಡ, ಮಲಯಾಳ, ಹಿಂದಿ ಭಾಷೆಯಲ್ಲಿ ಒಟಿಟಿ ಸ್ಟ್ರೀಮಿಂಗ್ ಆಗಲಿದ್ದು, ಚಿತ್ರವು 141 ನಿಮಿಷ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.