ಅಖಿಲ ಭಾರತ ಶ್ವಾನ ಪ್ರದರ್ಶನ

7

ಅಖಿಲ ಭಾರತ ಶ್ವಾನ ಪ್ರದರ್ಶನ

Published:
Updated:
Deccan Herald

ಬೆಂಗಳೂರಿನ ಸಿಲಿಕಾನ್ ಸಿಟಿ ಕೆನಲ್‍ಕ್ಲಬ್ 117, 118 ಹಾಗೂ 119ನೇ ಅಖಿಲ ಭಾರತ ಶ್ವಾನ ಪ್ರದರ್ಶನದ ಸ್ಪರ್ಧೆ ಆಯೋಜಿಸಿದೆ. ಕೋರೆಹಲ್ಲು ನಾಯಿಗಳ ಕುರಿತು ಜನಪ್ರಿಯತೆ ಮೂಡಿಸುವ ಸಲುವಾಗಿಯೇ ಈ ಸ್ಪರ್ಧೆ ಆಯೋಜಿಸಲಾಗಿದೆ. ಮೈಸೂರು ಕೆನಲ್‍ಕ್ಲಬ್ ಹೆಸರಿನಲ್ಲಿ 1932ರಲ್ಲಿ ಕಾರ್ಯಾರಂಭ ಮಾಡಿ, ನಂತರ ಸಿಲಿಕಾನ್ ಸಿಟಿ ಕೆನಲ್‍ಕ್ಲಬ್ ಆಗಿ ಪರಿವರ್ತನೆ ಆಯಿತು. 

ಇದೀಗ ಸಿಲಿಕಾನ್ ಸಿಟಿ ಕೆನಲ್‍ಕ್ಲಬ್ ಇದೇ ಶನಿವಾರ ಮತ್ತು ಭಾನುವಾರ ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್‍ನಲ್ಲಿ ಶ್ವಾನ ಪ್ರದರ್ಶನ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಶ್ವಾನಪ್ರಿಯರು ಸ್ಪರ್ಧೆ ವೀಕ್ಷಿಸಬಹುದಾಗಿದೆ. 50 ತಳಿಯ 450ರಿಂದ 500 ನಾಯಿಗಳು ಪ್ರದರ್ಶನಗೊಳ್ಳುತ್ತಿವೆ. ವಿಶೇಷ ತಳಿಯಾದ ಅಕಿತಾ, ಮಾಲ್ಟೀಸ್, ಸ್ಕ್ನಾಜರ್, ಸೈಬೀರಿಯನ್‍ಹಸ್ಕಿ, ಬೆಲ್ಜಿಯನ್ ಶೆಫರ್ಡ್ , ಅಫಘಾನ್‍ಹೌಂಡ್ ಇನ್ನೂ ಹಲವು ತಳಿಯ ನಾಯಿಗಳಾದ ಜರ್ಮನ್ ಶೆಫರ್ಡ್, ಡಾಬರ್ಮನ್, ಲ್ಯಾಬ್ರಡಾರ್‍ ರಿಟ್ರೈವರ್, ಗೋಲ್ಡನ್‍ ರಿಟ್ರೈವರ್, ಬಾಕ್ಸರ್, ಗ್ರೇಟ್‍ಡೇನ್, ಕಾಕರ್ ಸ್ಪೈನಿಯೆಲ್ ಮತ್ತಿತರ ತಳಿಯ ನಾಯಿಗಳು ಪಾಲ್ಗೊಳ್ಳಲಿವೆ.

ಪ್ರದರ್ಶನದ ತೀರ್ಪುಗಾರರಾಗಿ ರೊಮೇನಿಯಾ ದೇಶದ ಪೆಟ್ರು ಮುನ್ಟೀನ್, ರಷ್ಯಾದ ಡಾ.ಯುಜೆನಿ ಎಸ್‍ಕುಪ್ಲೈಸ್ಕಸ್ ಹಾಗೂ ಹಂಗೇರಿಯ ಅಟೈಲ್ಯಾ ಸೆಜೆಲ್ಡಿ ಭಾಗವಹಿಸುವರು.

ಕರ್ನಾಟಕ ಪಶುವೈದ್ಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ರಿಜಿಸ್ಟ್ರಾರ್, ಕಾಲೇಜಿನ ಡೀನ್, ಸಿಲಿಕಾನ್ ಸಿಟಿ, ಕೆನಲ್ ಕ್ಲಬ್ ಗೌರವ ಕಾರ್ಯದರ್ಶಿ ಡಾ.ಅಜೀಮುಲ್ಲಾ ಎಚ್.ಆರ್., ಖಜಾಂಚಿ ಡಾ.ನರೇಂದ್ರ ಆರ್. ಅಧ್ಯಕ್ಷ ಡಾ.ಯತಿರಾಜ್‍ಎಸ್. ಶ್ವಾನ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !