ಜಾನೂ ತಂಗಿ ಖುಷಿಗೆ ಓದೋದೇ ಖುಷಿ...

ಮಂಗಳವಾರ, ಏಪ್ರಿಲ್ 23, 2019
25 °C

ಜಾನೂ ತಂಗಿ ಖುಷಿಗೆ ಓದೋದೇ ಖುಷಿ...

Published:
Updated:
Prajavani

‘ನನ್ನ ತಂಗಿ ಖುಷಿಗೆ ಸದ್ಯ ಓದೋದ್ರಲ್ಲೇ ಖುಷಿ. ನ್ಯೂಯಾರ್ಕ್‌ನಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ್ದನ್ನೇ ಓದಿ ಬರ್ತಾಳೆ. ಆಮೇಲೆ ಇಲ್ಲೇ ಖುಷಿಯಾಗಿರ್ತಾಳೆ ಬಿಡಿ’ ಎಂದು ’ಧಡಕ್‌‘ ಸುಂದರಿ ಜಾನೂ ಹೇಳಿದ್ದಾಳೆ.

ಅಕ್ಕನ ಬೆನ್ನಲ್ಲೇ ತಂಗಿಯೂ ಬಾಲಿವುಡ್‌ಗೆ ಬರುತ್ತಾಳೆ ಎಂದು ಗಾಳಿಸುದ್ದಿ ಹಬ್ಬಿಸಿ ಕಾದು ಕುಳಿತಿದ್ದ ಗಾಸಿಪ್‌ವೀರರಿಗೆ ಕೊನೆಗೂ ಜಾನೂ ಸ್ಪಷ್ಟ ಉತ್ತರ ನೀಡಿದ್ದಾಳೆ. ಬಾಲಿವುಡ್‌ ಪ್ರವೇಶಿಸುವ ಮುನ್ನ ಓದು ಮುಗಿಸುವ ಉಮೇದಿನಲ್ಲಿದ್ದಾಳಂತೆ ಖುಷಿ ಕಪೂರ್‌.

ತಂದೆ ಬೋನಿ ಕಪೂರ್‌ ಕೂಡಾ ಮಗಳ ಬೆನ್ನು ತಟ್ಟಿದ್ದಾರೆ. ಜಾನೂ ಕಿವಿಮಾತು ಅದುವೇ. ಹಾಗಾಗಿ ಖುಷಿಯನ್ನು ಖುಷಿಯಾಗಿ ನ್ಯೂಯಾರ್ಕ್‌ಗೆ ಕಳುಹಿಸಿಕೊಡಲು ಇಬ್ಬರೂ ಸಜ್ಜಾಗಿದ್ದಾರೆ. ನ್ಯೂಯಾರ್ಕ್‌ನ ಫಿಲ್ಮ್‌ ಅಕಾಡೆಮಿಯಲ್ಲಿ ಖುಷಿ ಡಿಪ್ಲೊಮಾ ಕೋರ್ಸ್‌ ಮಾಡಲಿದ್ದಾಳಂತೆ. ಇತ್ತ ’ಗುಂಜನ್‌ ಸಕ್ಸೇನಾ‘ ಮತ್ತು ‘ತಖ್ತ್‌‘ಗೆ ಸಹಿ ಹಾಕಿರುವ ಜಾಹ್ನವಿ ಬಿಡುವಿಲ್ಲದ ಚಿತ್ರೀಕರಣದಲ್ಲಿ ತೊಡಗಿದ್ದಾಳೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !