ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಡ್‌ಕಟ್‌ನಲ್ಲಿ ಅರಳಿದ ಕಲಾಕೃತಿ

ಅಕ್ಷರ ಗಾತ್ರ

ಕಪ್ಪುಬಣ್ಣವೆಂದರೆ ಅಶುಭ ಎಂಬ ಭಾವನೆಯಿದೆ. ಆದರೆ ಕಪ್ಪು– ಬಿಳುಪುಬಣ್ಣಗಳ ನಡುವಿನ ಹೊಂದಾಣಿಕೆ ಎಲ್ಲರಿಗೂ ಇಷ್ಟ. ಕಲಾವಿದರು ಬಣ್ಣಗಳಲ್ಲೇ ಆಟವಾಡಿ ಅದ್ಭುತ ಕಲಾಕೃತಿಗಳನ್ನು ರಚಿಸುತ್ತಾರೆ. ತಮಿಳುನಾಡಿನ ಕನ್ಯಾಕುಮಾರಿಯವರು ಕಲಾವಿದ ವಿಜಯ್‌ ಪಿಚ್ಚುಮಣಿ ಅವರು ಈ ಎರಡೂ ಬಣ್ಣಗಳಲ್ಲೇಪ್ರಾಣಿ, ಪಕ್ಷಿಗಳ ಶಬ್ದ ಹಾಗೂ ತರಂಗಗಳ ಪರಿಕಲ್ಪನೆಯನ್ನು ತಮ್ಮವುಡ್‌ಕಟ್‌ನಲ್ಲಿ ಅನಾವರಣಗೊಳಿಸಿದ್ದಾರೆ.

ವಿಜಯ್‌ ಅವರ ‘ಬ್ಲಾಕ್‌ ಅಂಡ್‌ ವೈಟ್‌’ ಏಕವ್ಯಕ್ತಿ ಚಿತ್ರ ಪ್ರದರ್ಶನವು ಆರ್ಟ್‌ ಹೌಸ್‌ ಸಹಯೋಗದಲ್ಲಿ ವಸಂತನಗರದ ಆರ್ಟ್‌ ಹೌಸ್‌ ಗ್ಯಾಲರಿಯಲ್ಲಿ ನಡೆಯುತ್ತಿದೆ.

ವುಡ್‌ಕಟ್‌ನಲ್ಲಿ ಅರಳಿದ ಕಲಾಕೃತಿಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಕಾಗೆಗಳ ಕುಟುಂಬದಲ್ಲಿ ಕಾಗೆಗಳ ಜೀವನ, ಕೂಡು ಜೀವನ, ಹೊಂದಾಣಿಕೆ, ಮರಿಗಳನ್ನು ಸಾಕುವುದು...ಹೀಗೆ ಕಾಗೆಗಳ ಜೀವನದ ವಿವಿಧ ಮುಖಗಳನ್ನು ಚಿತ್ರಿಸಿದ್ದಾರೆ.

ಮತ್ತೊಂದು ಕಲಾಕೃತಿಯಲ್ಲಿ ಇಬ್ಬರು ವ್ಯಕ್ತಿಗಳ ಪರಸ್ಪರ ‌ಹಸ್ತಲಾಘನವನ್ನು ಚಿತ್ರಿಸಿದ್ದಾರೆ. ಇದರಲ್ಲಿ ಹೆಣ್ಣು ಮತ್ತು ಗಂಡಿನ ನಡುವಿನ ಆಪ್ತತೆ, ಸಂಬಂಧ, ಪ್ರೀತಿ, ನಂಬಿಕೆಯನ್ನು ಬಿಂಬಿಸುವಂತೆ ಚಿತ್ರ ಬಿಡಿಸಿದ್ದಾರೆ. ಇನ್ನು ಪ್ರಾಣಿ, ಪಕ್ಷಿಗಳ ಕೂಗು ಮತ್ತು ತರಂಗಗಳಿಗೆ ಸಂಬಂಧಿಸಿದಂತೆ ಕೋಳಿ ಕೂಗಿದರೆ ಶಬ್ದದ ವ್ಯಾಪ್ತಿ, ಮೊಲದ ಕೂಗಿನ ಶಬ್ದ ಪರಿಸುವ ಬಗೆ, ಬೆಕ್ಕು ಕೂಗಿದರೆ ಎಷ್ಟು ದೂರ ತರಂಗ ಹೋಗುತ್ತದೆ? ಇದನ್ನು ತರಂಗ, ಸುರುಳಿ ಮೂಲಕ ಹೇಳಿದ್ದಾರೆ.

ಇಂತಹ ಕಲಾಕೃತಿ ರಚನೆಗೆ ಕಾಗೆ ಪ್ರೇರಣೆ ಎನ್ನುತ್ತಾರೆ ವಿಜಯ್‌.ಇವರ ಮನೆಯಲ್ಲಿ ಇವರು ಚಿತ್ರಕಲೆ ಬಿಡಿಸುವುದು ಯಾರಿಗೂ ಇಷ್ಟವಿರಲಿಲ್ಲ. ಇದರಿಂದಮನೆ ತೊರೆದಾಗ ಒಂದು ಕಾಗೆ ಸತ್ತಿದ್ದನ್ನು ಕಂಡರು. ಆ ಕಾಗೆ ಸುತ್ತ ಕಾಗೆಗಳು ಕಣ್ಣೀರಿಡುವ ದೃಶ್ಯ ಇವರ ಮನಸ್ಸನ್ನು ತೀರಾ ಕಾಡಿತಂತೆ. ಕಾಗೆ ಅಂದ್ರೆ ಅನಿಷ್ಠ ಅಲ್ಲ, ಅದರ ಬಣ್ಣ, ಗುಣಸ್ವಭಾವವನ್ನುಪ್ರೇರಣೆಯಾಗಿ ತೆಗೆದುಕೊಂಡ ಇವರು ತನ್ನ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳುತ್ತಾರೆ.

ವುಡ್‌ಕಟ್‌ ಪ್ರಿಂಟ್‌ಮೇಕಿಂಗ್‌ ಎಂದರೆ: ಚಿಪಿಂಗ್ ಟೂಲ್ಸ್‌ ಮತ್ತು ಆ್ಯಕ್ಷನ್‌ ಬ್ಲೇಡ್‌ಸಹಾಯದಿಂದ ಮರದ ತುಂಡಿನ ಮೇಲೆ ಕಲಾವಿದನ ಪರಿಕಲ್ಪನೆಯಲ್ಲಿ ಕಲಾಕೃತಿಯನ್ನು ರಚಿಸಿ, ಅದಕ್ಕೆ ಇಂಡಿಯನ್‌ ಇಂಕ್‌ ಹಾಕಿ ಪ್ರಿಂಟ್‌ ತೆಗೆದುಕೊಳ್ಳುವುದೇ ವುಡ್‌ಕಟ್‌ ಪ್ರಿಂಟ್‌ಮೇಕಿಂಗ್‌.

2012ರಲ್ಲಿ ಸರ್ಕಾರಿ ಕಾಲೇಜು ಆಫ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಚೆನೈನಲ್ಲಿ ಇವರು ಎಂಎಫ್‌ಎ ಪದವಿಯನ್ನು ಮುಗಿಸಿದರು. ಶಾಲಾ ಸಮಯದಲ್ಲಿ ಅನೇಕ ಅಂತರ ಕಾಲೇಜು ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅರ್ನಾವ್ ವಾಸುದೇವ್‌ ಪ್ರಶಸ್ತಿ, 56ನೇ ನ್ಯಾಷನಲ್ ಅವಾರ್ಡ್‌, ರಾಜ್ಯ ಪ್ರಶಸ್ತಿಗಳು ದೊರೆತಿವೆ. ಇವರು ಈಗಾಗಲೇ ಚೆನ್ನೈ, ದೆಹಲಿ, ಸಿಂಗಾಪುರ, ಬೆಂಗಳೂರು ಹಲವು ಕಡೆ ಪ್ರದರ್ಶನ ಕಂಡಿದೆ.

ಈ ಕಲಾಕೃತಿಗಳ ಪ್ರದರ್ಶನವು ಆರ್ಟ್‌ ಹೌಸ್‌ನಲ್ಲಿ ಅಕ್ಟೋಬರ್‌ 27ರವರೆಗೂ ಪ್ರದರ್ಶನ ಇರಲಿದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT