ಬುಧವಾರ, ಮಾರ್ಚ್ 3, 2021
22 °C

‘ನೀನು ಕರಣ್‌ ಜೋಹರ್‌ನ ಕೈಗೊಂಬೆಯಂತೆ ವರ್ತಿಸಬೇಡ’ ಅಲಿಯಾಗೆ ಕಂಗನಾ ಕ್ಲಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಲಿಯಾ, ನೀನು ಕರಣ್‌ ಜೋಹರ್‌ನ ಕೈಗೊಂಬೆಯಂತೆ ವರ್ತಿಸಬೇಡ’ ಎಂದು ’ಮಣಿಕರ್ಣಿಕಾ– ದಿ ಕ್ವೀನ್‌ ಆಫ್‌ ಝಾನ್ಸಿ‘ ಕಂಗನಾ ರನೋಟ್‌ ಎಚ್ಚರಿಕೆ ನೀಡಿದ್ದಾರೆ.

ಇಡೀ ದೇಶವೇ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಿರುವಾಗ ಬಾಲಿವುಡ್ ಮಾತ್ರ ಮೌನ ವಹಿಸಿ ಅವಮಾನಿಸುತ್ತಿದೆ ಎಂದು, ಚಿತ್ರ ಬಿಡುಗಡೆಯಾದಾಗಿನಿಂದಲೂ ಕಂಗನಾ ದೂರುತ್ತಿದ್ದಾರೆ. ಅಲಿಯಾ ಭಟ್‌ ಕೂಡಾ ತಮ್ಮ ಸಿನಿಮಾ ವೀಕ್ಷಣೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸದಿರಲು ಕಾರಣವೇನು ಎಂದು ಕಂಗನಾ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಲಿಯಾ, ’ಕಂಗನಾಳನ್ನು ಅವಮಾನಿಸುವ ಅಥವಾ ನೋವುಂಟು ಮಾಡುವ ಉದ್ಧೇಶದಿಂದ ಸಿನಿಮಾ ನೋಡದೇ ಕೂತಿಲ್ಲ. ’ಮಣಿಕರ್ಣಿಕಾ‘ ನೋಡದಿರುವ ಬಗ್ಗೆ ಕಂಗನಾ ಅವರಲ್ಲಿ ವೈಯಕ್ತಿಕವಾಗಿ ಕ್ಷಮೆ ಕೋರಲೂ ಸಿದ್ಧ‘ ಎಂದಿದ್ದರು. 

ಅಲಿಯಾ ಪ್ರತಿಕ್ರಿಯೆಯಿಂದ ಕಂಗನಾ ಸಮಾಧಾನಗೊಂಡಿಲ್ಲ. ಬದಲಾಗಿ, ಮಹಿಳಾ ಸ್ವಾವಲಂಬನೆ ಬಗ್ಗೆ ಮಾತನಾಡುವ ನಾವು ಮಹಿಳಾಪರ ಧ್ವನಿಯಿರುವ ’ಮಣಿಕರ್ಣಿಕಾ‘ದಂತಹ ಚಿತ್ರವನ್ನು ನೋಡದೆ ಸಬೂಬು ಹೇಳುವುದು ಸರಿಯಲ್ಲ. ನೀನು ಕರಣ್‌ ಜೋಹರ್ ಕೈಗೊಂಬೆಯಂತೆ ವರ್ತಿಸುತ್ತಿದ್ದೀಯ‘ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು