ಕಳೆದ ಡಿಸೆಂಬರ್ನಲ್ಲಿ ತೆರೆಕಂಡ ‘ಧುರಂಧರ್’ ಸಿನಿಮಾದ ಮುಂದುವರಿದ ಭಾಗ(ಸೀಕ್ವೆಲ್) ಇದಾಗಿದೆ. ನೈಜ ಘಟನೆಗಳನ್ನು ಸ್ಫೂರ್ತಿ, ಆಧಾರವಾಗಿಟ್ಟುಕೊಂಡು ಅದಕ್ಕೆ ಕಾಲ್ಪನಿಕ ಕಥೆಯ ಸ್ಪರ್ಶ ನೀಡಿ ಭಾವನಾತ್ಮಕವಾಗಿ, ಕುತೂಹಲಕಾರಿಯಾಗಿ ಅದನ್ನು ತೆರೆ ಮೇಲೆ ತರುವುದರಲ್ಲಿ ತಮ್ಮ ನೈಪುಣ್ಯತೆ ಪ್ರದರ್ಶಿಸಿದವರು ನಿರ್ದೇಶಕ ಆದಿತ್ಯ ಧರ್. ‘ಉರಿ’, ‘ಧುರಂಧರ್’ ಬರವಣಿಗೆ ಇದಕ್ಕೆ ಉದಾಹರಣೆ.

‘ಧುರಂಧರ್’ ಮೊದಲ ಭಾಗದಲ್ಲಿ ಕಂದಹಾರ್ ವಿಮಾನ ಹೈಜಾಕ್, 2001ರ ಸಂಸತ್ ಭವನದ ಮೇಲಿನ ಉಗ್ರರ ದಾಳಿಯ ಘಟನೆಗಳನ್ನು ಆಯ್ದುಕೊಂಡಿದ್ದ ನಿರ್ದೇಶಕರು ಸೀಕ್ವೆಲ್ನಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ, ನೋಟು ಅಮಾನ್ಯೀಕರಣ, 2017ರ ಉತ್ತರ ಪ್ರದೇಶ ಚುನಾವಣೆ ಮುಂತಾದ ಘಟನೆಗಳನ್ನು ಜೋಡಿಸಿ ಕಥೆ ಹೆಣೆದಿದ್ದಾರೆ.

ಆರಂಭದಲ್ಲೇ ಸಿನಿಮಾದ ಕಥೆ ಕಾಲ್ಪನಿಕ ಎಂದು ಸ್ಪಷ್ಟಪಡಿಸುವುದಕ್ಕೇ ಸುಮಾರು ಮೂರ್ನಾಲ್ಕು ನಿಮಿಷಗಳ ಹೇಳಿಕೆ(ಡಿಸ್ಕ್ಲೈಮರ್) ಹಾಕಿ ಕಥೆ ಹೇಳುವುದಕ್ಕೆ ನಿರ್ದೇಶಕರು ಇಳಿಯುತ್ತಾರೆ.

ಮೊದಲ ಭಾಗದಂತೆ ಸೀಕ್ವೆಲ್ನಲ್ಲೂ ಸರಣಿಯಾದ ಅಧ್ಯಾಯಗಳು(ಚಾಪ್ಟರ್ಸ್) ಇವೆ. ಒಟ್ಟು 6 ಅಧ್ಯಾಯಗಳಲ್ಲಿ ಪ್ರತೀಕಾರದ ಕಥೆಯನ್ನು ಹೇಳಲಾಗಿದೆ. ಇದರಿಂದಾಗಿಯೇ ಸಿನಿಮಾದ ಅವಧಿ 229 ನಿಮಿಷಗಳಷ್ಟು ವಿಸ್ತಾರಗೊಂಡಿದೆ. ಮೊದಲ ಭಾಗ ‘ಲಿಯಾರಿ’ ಎಂಬ ನಗರದಲ್ಲಿನ ರೌಡಿ ‘ರೆಹಮಾನ್ ಡಕೈತ್’ ನಿಧನದಿಂದ ಅಂತ್ಯಗೊಂಡಿತ್ತು. ಸೀಕ್ವೆಲ್ ‘ಎ ಬರ್ನ್ಟ್ ಮೆಮೊರಿ’ ಎಂಬ ಅಧ್ಯಾಯದಿಂದ ಆರಂಭವಾಗುತ್ತದೆ. ಸೈನಿಕನಾಗಲು ತರಬೇತಿ ಪಡೆಯುತ್ತಿದ್ದ ಪಂಜಾಬ್ನ ‘ಜಸ್ಕಿರತ್ ಸಿಂಗ್ ರಂಗಿ’ ಎಂಬ ಯುವಕನ ಕಥೆ ಇದರಲ್ಲಿದೆ. ಈತನಿಗೆ ಗಲ್ಲು ಶಿಕ್ಷೆಯ ಆದೇಶ, ‘ಹಮ್ಜ ಅಲಿ ಮಜಾರಿ’ಯಾಗಿ ಆತನ ಬದಲಾವಣೆ, ಪಾಕಿಸ್ತಾನದ ಪ್ರವೇಶ, ‘ಲಿಯಾರಿ’ಯಲ್ಲಿ ತನ್ನ ಅಧಿಕಾರ ವಿಸ್ತರಣೆ, ಪ್ರತೀಕಾರವೇ ಸೀಕ್ವೆಲ್ನ ಮುಂದಿನ ಕಥೆ.

ಶೀರ್ಷಿಕೆಯೇ ಹೇಳುವಂತೆ ಇದೊಂದು ಪ್ರತೀಕಾರದ ಪಯಣ. ಹೀಗಾಗಿ ರಕ್ತದೋಕುಳಿ ನಿರೀಕ್ಷಿತ. ಇದರಲ್ಲಿ ನಾಯಕನ ವೈಯಕ್ತಿಕ ಜೀವನದ ಪ್ರತೀಕಾರದ ಕಥೆಯೂ ಇದೆ. ಈ ಹಿನ್ನೆಲೆಯಲ್ಲಿ ‘ಜಸ್ಕಿರತ್’ ಎಂಬಾತ ‘ಹಮ್ಜ’ ಆದ ಬಗೆ ಹೇಳಲಾಗಿದೆ. ಸಿನಿಮಾ ಒಂದು ದೀರ್ಘವಾದ ಆ್ಯಕ್ಷನ್ ಸೀಕ್ವೆನ್ಸ್ ಮೂಲಕ ತೆರೆದುಕೊಂಡು ಭಾವನಾತ್ಮಕವಾಗಿ ಕೊನೆಗೊಳ್ಳುತ್ತದೆ. ಸುದೀರ್ಘವಾದ ಕಥೆಗೊಂದು ಸೂಕ್ತ ಅಡಿಪಾಯದಂತೆ ಈ ಚಿತ್ರಕಥೆಯನ್ನು ವಿನ್ಯಾಸಗೊಳಿಸಲಾಗಿದೆ. ತೆರೆ ಮೇಲೆ ಸಂಭಾಷಣೆಯ ಪದಗಳನ್ನು, ಪಾತ್ರಗಳ ವಿವರಗಳನ್ನು ಮೂಡಿಸುತ್ತಾ ದೃಶ್ಯವನ್ನು ಆಕರ್ಷಕವಾಗಿಸುವ ಕಲೆ ಇಲ್ಲೂ ಮುಂದುವರಿದಿದೆ.

ಮೊದಲ ಅಧ್ಯಾಯದಲ್ಲೇ ರಣ್ವೀರ್ ಸಿಂಗ್ ತಮ್ಮ ನಟನೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕಣ್ಣುಗಳಲ್ಲೇ ‘ಜಸ್ಕಿರತ್’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಅಧ್ಯಾಯವೇ ಉಳಿದ ಎಲ್ಲಾ ಅಧ್ಯಾಯಗಳಿಗಿಂತ ಪರಿಣಾಮಕಾರಿಯಾಗಿದೆ. ಸೀಕ್ವೆಲ್ ಕಥೆಯಲ್ಲಿ ಹೆಚ್ಚು ತಿರುವುಗಳಿವೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ತಮ್ಮ ನಟನೆಯ ಮೂಲಕ ‘ರೆಹಮಾನ್ ಡಕೈತ್’ ಪಾತ್ರಕ್ಕೆ ಗತ್ತು ತಂದಿದ್ದರು. ಈ ಭಾಗದಲ್ಲಿ ಅರ್ಜುನ್ ರಾಂಪಾಲ್ ಅವರ ‘ಮೇಜರ್ ಇಕ್ಬಾಲ್’ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ‘ಅಜಯ್ ಸಾನ್ಯಾಲ್’ ಆಗಿ ಮಾಧವನ್ ನಟನೆ ಚೆನ್ನಾಗಿದೆ. ಆದರೆ ‘ಬಡೇ ಸಾಬ್’ ಪಾತ್ರ ಟೊಳ್ಳಾಗಿದೆ. ‘ಜಮೀಲ್’ ಪಾತ್ರದ ಮೂಲಕ ರಾಕೇಶ್ ಬೇಡಿ ನಗಿಸುತ್ತಾರೆ, ಬೆರಗು ಮೂಡಿಸುತ್ತಾರೆ.

‘ಲಿಯಾರಿ’ಯ ಗ್ಯಾಂಗ್ವಾರ್ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಮಧ್ಯಂತರದ ಬಳಿಕ ವಿಳಂಬ ಗತಿಯಲ್ಲಿ ಸಾಗಿದರೂ, ಕಥೆಯು ಶಿಖರಾಗ್ರ ತಲುಪುತ್ತಾ ಕುತೂಹಲ ಹೆಚ್ಚಿಸುತ್ತದೆ. ಚಿತ್ರಕಥೆಗೆ ಪೂರಕವಾಗಿ ಶಾಶ್ವತ್ ಸಚ್ದೇವ್ ಹಿನ್ನೆಲೆ ಸಂಗೀತ, ವಿಕಾಸ್ ನೌಲಖ ಛಾಯಾಚಿತ್ರಗ್ರಹಣವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-51-1857094588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.