ಎಂಬತ್ತರ ದಶಕದ ಬೆಂಗಳೂರಿನ ಭೂಗತ ಜಗತ್ತು, ಅದರ ರಕ್ತಚರಿತ್ರೆ, ರಾಜಕೀಯದ ಪೈಪೋಟಿ, ಮತ್ತು ವೈಯಕ್ತಿಕ ಸಂಬಂಧಗಳ ಸಂಘರ್ಷ–ಇವೆಲ್ಲವನ್ನೂ ಒಟ್ಟುಗೂಡಿಸಿ ಕಟ್ಟಿದ ಕಥೆಯೇ ‘KD – ದಿ ಡೆವಿಲ್’. ಕಾಲಘಟ್ಟದ ವಾತಾವರಣ, ಆ ಕಾಲದ ಸಾಮಾಜಿಕ-ರಾಜಕೀಯ ಸನ್ನಿವೇಶಗಳ ಸಣ್ಣ ಛಾಯೆಗಳನ್ನೂ ಚಿತ್ರ ಹಿಡಿಯಲು ಯತ್ನಿಸುತ್ತದೆ.

ಬೆಂಗಳೂರಿನಲ್ಲಿ ಭಾರಿ ಮಳೆ ಬಂದಾಗ ಚರಂಡಿಗಳು ಉಕ್ಕಿ ಹರಿಯುವಂತೆ, ಚಿತ್ರದುದ್ದಕ್ಕೂ ರಕ್ತದ ಹೊಳೆ ಹರಿಯುತ್ತದೆ. ಮಾಂಸದಂಗಡಿಯಲ್ಲಿ ಮಾಂಸ ಕತ್ತರಿಸುವ ನಿರ್ದಯತೆಯಷ್ಟೇ ಇಲ್ಲಿ ಮನುಷ್ಯರನ್ನು ಕೊಚ್ಚಿ ಹಾಕುವ ಕ್ರೂರತೆ ಕಾಣುತ್ತದೆ. ಈ ಹಿಂಸಾಚಾರದ ಅತಿರೇಕದ ನಡುವೆಯೂ ಪ್ರೇಕ್ಷಕರನ್ನು ಹಿಡಿದಿಡುವ ಮನರಂಜನೆಯ ಲಯವನ್ನು ಕಾಪಾಡುವಲ್ಲಿ ನಿರ್ದೇಶಕ ಪ್ರೇಮ್ ಯಶಸ್ವಿಯಾಗಿದ್ದಾರೆ. ‘ಜೋಗಿ’ಯಲ್ಲಿ ತಾಯಿ–ಮಗನ ಬಾಂಧವ್ಯವನ್ನು ಹೇಳಿದ್ದ ಅವರು, ಇಲ್ಲಿ ಅಣ್ಣ–ತಮ್ಮನ ಸಂಬಂಧದ ಮೂಲಕ ಭಾವನಾತ್ಮಕ ತೂಕ ನೀಡಲು ಪ್ರಯತ್ನಿಸಿದ್ದಾರೆ. ಕಥೆಯಲ್ಲಿ ನೆಲದ ಸೊಗಡು, ಸ್ಥಳೀಯ ಭಾಷೆಯ ನೈಜತೆ, ಸಂಸ್ಕೃತಿ ಮತ್ತು ಹಾಸ್ಯವನ್ನು ಸಮತೋಲನದಿಂದ ಬೆರೆಸಿರುವುದು ಚಿತ್ರದ ಬಲವಾದ ಅಂಶಗಳಲ್ಲಿ ಒಂದು.

ಮೋಹನ್ ಬಿ. ಕೆರೆ ಅವರ ಕಲಾನಿರ್ದೇಶನ ಹಾಗೂ ವಿಲಿಯಂ ಡೇವಿಡ್ ಅವರ ಛಾಯಾಚಿತ್ರಗ್ರಹಣ ಚಿತ್ರದ ದೃಶ್ಯಾನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ. ಸೆಟ್ಗಳು ಮತ್ತು ಲೈಟಿಂಗ್ ಮೂಲಕ ಎಂಬತ್ತರ ಕಾಲಘಟ್ಟವನ್ನು ಜೀವಂತಗೊಳಿಸುವ ಯತ್ನ ಗೋಚರಿಸುತ್ತದೆ. ಪ್ರತಿಯೊಂದು ಫ್ರೇಮ್ಗೂ ವರ್ಣಮಯ ಸ್ಪರ್ಶ ನೀಡಲಾಗಿದ್ದು, ದೃಶ್ಯ ವೈಭವ ಚಿತ್ರಕ್ಕೆ ಹೆಚ್ಚುವರಿ ಆಕರ್ಷಣೆ ನೀಡುತ್ತದೆ.

ಬಹುದೊಡ್ಡ ತಾರಾಬಳಗದಿಂದ ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಿತ್ತು. ಆ ನಿರೀಕ್ಷೆಯನ್ನು ಒಂದು ಮಟ್ಟಿಗೆ ತೀರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮೊದಲ 20 ನಿಮಿಷ ಪಾತ್ರಗಳ ಪರಿಚಯಕ್ಕೆ ಮೀಸಲಾಗಿದ್ದು, ಪ್ರತಿ ನಟನಿಗೂ ವಿಭಿನ್ನ ಬಿಲ್ಡಪ್ ನೀಡಲಾಗಿದೆ. ಕೆಲವೊಮ್ಮೆ ಈ ಬಿಲ್ಡಪ್ಗಳು ಕಥೆಯ ಹರಿವಿಗೆ ಸ್ವಲ್ಪ ಅಡ್ಡಿಯಾದಂತೂ ಅನಿಸುತ್ತದೆ. ಕಾಳಿಯ ಹಿನ್ನೆಲೆ, ಅವನ ಕುಟುಂಬ ಸಂಬಂಧಗಳು ಹಾಗೂ ಮಚ್ ಲಕ್ಷ್ಮಿಯೊಂದಿಗೆ ಅವನ ಪ್ರೇಮಕಥೆಯಲ್ಲಿಯೇ ಮೊದಲಾರ್ಧ ಸಾಗುತ್ತದೆ.

ಸೀಮೆಎಣ್ಣೆ ವ್ಯಾಪಾರ ಮಾಡುವ ಕಾಳಿ, ಓದಿಲ್ಲ ಎಂಬ ಕಾರಣಕ್ಕೆ ಅಣ್ಣ ಧರ್ಮನಿಂದ ದೂರವಾಗಿರುತ್ತಾನೆ. ಅಣ್ಣನ ಪ್ರೀತಿ ಗಳಿಸಬೇಕೆಂಬ ಹಂಬಲ ಅವನಲ್ಲಿ ಸದಾ ಕಾಡುತ್ತದೆ. ಈ ನಡುವೆ ಮಚ್ ಲಕ್ಷ್ಮಿಯೊಂದಿಗೆ ಅವನ ಪರಿಚಯ ಪ್ರೇಮಕಥೆಗೆ ದಾರಿ ಮಾಡಿಕೊಡುತ್ತದೆ. ಆದರೆ ನಾಯಕಿಯ ಪಾತ್ರದ ಅತಿಯಾದ ಗದ್ದಲ, ಮಾತಿನ ಮಿತಿ ಮೀರುವಿಕೆ ಮತ್ತು ಪುನರಾವರ್ತಿತ ನಡವಳಿಕೆ ಕೆಲವೊಮ್ಮೆ ಕಿರಿಕಿರಿ ಉಂಟುಮಾಡುತ್ತದೆ; ಇದನ್ನು ಇನ್ನಷ್ಟು ಸಂಯಮದಿಂದ ರೂಪಿಸಬಹುದಿತ್ತು.

ಧರ್ಮ ಎಂಬ ಅಧ್ಯಾಪಕ ಮತ್ತು ಶಾಸಕ ಅಣ್ಣಯ್ಯಪ್ಪನ ಸ್ನೇಹದಿಂದ ಕಥೆಗೆ ರಾಜಕೀಯದ ಸ್ಪರ್ಶ ಸಿಗುತ್ತದೆ. ಈ ಭಾಗಕ್ಕೆ ಇನ್ನಷ್ಟು ಗಟ್ಟಿತನ ನೀಡಬಹುದಿತ್ತು. ಮೊದಲಾರ್ಧದಲ್ಲಿ ಅನಗತ್ಯ ಹಾಡುಗಳು, ಪುನರಾವರ್ತಿತ ಸಂಭಾಷಣೆಗಳು ಹಾಗೂ ನಿಧಾನಗತಿಯ ನಿರೂಪಣೆ ಚಿತ್ರದ ಅವಧಿಯನ್ನು ಹೆಚ್ಚಿಸಿದಂತೆ ಅನುಭವವಾಗುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಕಥೆ ವೇಗ ಪಡೆದು, ಅನಿರೀಕ್ಷಿತ ತಿರುವುಗಳೊಂದಿಗೆ ಕುತೂಹಲವನ್ನು ಹೆಚ್ಚಿಸುತ್ತದೆ.

ಒಂದು ಘಟನೆ ಕಾಳಿಯನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಕ್ಲೈಮ್ಯಾಕ್ಸ್ ವೇಳೆಗೆ ಅವನು ಉಗ್ರ ರೂಪ ತಾಳುತ್ತಾನೆ. ಮಚ್ಚು ಕೈಗೆ ಬಂದ ನಂತರ ಚಿತ್ರದ ಹಿಂಸೆ ಇನ್ನಷ್ಟು ತೀವ್ರವಾಗುತ್ತದೆ. ಮಳೆಯ ನಡುವೆ ನಡೆಯುವ ಅಂತಿಮ ಹೋರಾಟ ದೃಶ್ಯಕ್ಕೆ ದೃಶ್ಯಾತ್ಮಕ ತೀವ್ರತೆ ಮಾತ್ರವಲ್ಲ, ಭಾವನಾತ್ಮಕ ಘರ್ಷಣೆಯನ್ನೂ ನೀಡುತ್ತದೆ.

ಧ್ರುವ ಸರ್ಜಾ ಕಾಳಿಯಾಗಿ ಚಿತ್ರವನ್ನು ಸಂಪೂರ್ಣ ಆವರಿಸಿದ್ದಾರೆ. ಅವರು ಕೇವಲ ಆ್ಯಕ್ಷನ್ಗೆ ಸೀಮಿತವಾಗದೆ, ಪಾತ್ರದ ವಿವಿಧ ಹಂತಗಳನ್ನು ಸಮರ್ಥವಾಗಿ ತೋರಿಸಿದ್ದಾರೆ. ಸಂಜಯ್ ದತ್ ಡಾಕ್ ದೇವನಾಗಿ ಖಡಕ್ ಖಳನಾಯಕನಾಗಿ ಮಿಂಚುತ್ತಾರೆ. ರಮೇಶ್ ಅರವಿಂದ್ ಅವರ ಧರ್ಮ ಪಾತ್ರ ಇನ್ನಷ್ಟು ಗಟ್ಟಿಯಾಗಬಹುದಿತ್ತು. ಶಿಲ್ಪಾ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೀಷ್ಮಾ ಅವರ ಪಾತ್ರದಲ್ಲಿ ಗದ್ದಲ ಹೆಚ್ಚು ಅನ್ನಿಸುತ್ತದೆ. ಸುದೀಪ್ ಕೊನೆಯ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ, ಮುಂದಿನ ಭಾಗದ ಸೂಚನೆ ನೀಡುವ ರೀತಿಯಲ್ಲಿ.

ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಸನ್ನಿವೇಶಗಳಿಗೆ ಬಲ ನೀಡುತ್ತದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವಷ್ಟು ಪರಿಣಾಮ ಬೀರುವುದಿಲ್ಲ. ದೃಶ್ಯ ವೈಭವ ಹೆಚ್ಚಿಸಲು ಅವು ಸಹಕಾರಿಯಾಗುತ್ತವೆ.

ಪ್ರತಿ ಫ್ರೇಮ್ ಅನ್ನು ವರ್ಣಮಯವಾಗಿ ಮೂಡಿಸುವಲ್ಲಿ ಪ್ರೇಮ್ ಯಶಸ್ವಿಯಾಗಿದ್ದರೂ, ಕಥೆಯ ಕೆಲವು ಭಾಗಗಳನ್ನು ಮುಂದಿನ ಭಾಗಕ್ಕೆ ಉಳಿಸಿರುವುದರಿಂದ ಚಿತ್ರದಲ್ಲಿ ಅಪೂರ್ಣತೆಯ ಭಾವನೆ ಮೂಡುತ್ತದೆ. ಅದೇ ಸಮಯದಲ್ಲಿ ಮುಂದಿನ ಭಾಗದ ಮೇಲೆ ಕುತೂಹಲವನ್ನು ಉಳಿಸುತ್ತದೆ.

ನೋಡಬಹುದಾದ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.