ಕೋಲಾರ: ಮಹಾರ್ ಸೈನಿಕರ ಶೌರ್ಯ ಪ್ರಸ್ತುತಪಡಿಸುವ ‘ಭೀಮ ಕೋರೆಗಾಂವ್’ ಎಐ ಸಿನಿಮಾವನ್ನು ಬುಧವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ದಲಿತ ಮುಖಂಡರು ಬಿಡುಗಡೆ ಮಾಡಿದರು.

ಭೀಮಾ ನದಿ ತೀರದಲ್ಲಿ ನಡೆದಂಥ ಯುದ್ಧದ ಹಿನ್ನೆಲೆಯ ಮೇಲೆ ನಿರ್ಮಿತವಾದ ಎಐ ಆಧಾರಿತ ಚಿತ್ರ ಇದಾಗಿದೆ. ಕೋಲಾರದ ಶೋಭನ್ ಬಾಬು ನಿರ್ದೇಶನ, ಚಿತ್ರಕತೆ, ಸಂಕಲನ ಮಾಡಿದ್ದಾರೆ. ದಲಿತ ಮಹಾ ಸೇನೆಯ ರಾಜ್ಯಾಧ್ಯಕ್ಷ ಖಾದ್ರಿಪುರ ಬಾಬು ನಿರ್ಮಿಸಿದ್ದಾರೆ. ಸುಮಾರು 37 ನಿಮಿಷಗಳ ಈ ಸಿನಿಮಾವನ್ನು ಜನಪ್ರತಿನಿಧಿಗಳು, ದಲಿತ ಮುಖಂಡರು ವೀಕ್ಷಿಸಿದರು. ಅಸ್ಪೃಶ್ಯತೆ ವಿರುದ್ಧ ಹೋರಾಡಿ ದಿಗ್ವಿಜಯ ಸಾಧಿಸಿದ ಯುದ್ಧವೇ ಭೀಮ ಕೋರೆಗಾಂವ್ ಎಂದು ಬಣ್ಣಿಸಿದರು. ಸ್ವಾಭಿಮಾನ ಹಾಗೂ ಸ್ಫೂರ್ತಿ ಸಂಕೇತ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಳೆಯ ದಾಖಲೆ ಪತ್ರವೊಂದನ್ನು ವೀಕ್ಷಣೆ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮಹಾರ್ ಸೈನಿಕರ ಸಾಹಸ ಮೆಚ್ಚಿ ಬ್ರಿಟನ್ ಈಸ್ಟ್ ಇಂಡಿಯಾ ಕಂಪನಿಯ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟೌಂಟನ್ ಬರೆದಿದ್ದ ಪತ್ರವೊಂದನ್ನು ಅವರು ನೋಡುತ್ತಾರೆ. ಕೊನೆಯಲ್ಲಿ ಅಂಬೇಡ್ಕರ್ ಅವರ ಪ್ರೇರಣಾದಾಯಕ ಮಾತಿನೊಂದಿಗೆ ಸಿನಿಮಾ ಮುಗಿಯುತ್ತದೆ. ಮಹಾರ್ ಸೈನಿಕರ ಸ್ಮರಣಾರ್ಥ ನಿರ್ಮಿಸಿರುವ ವಿಜಯ ಸ್ತಂಭ ‘ಬರೀ ಕಲ್ಲಲ್ಲ; ಮಾನವ ಗೌರವದ ಸಂಕೇತ’ ಎಂದು ಅಂಬೇಡ್ಕರ್ ಬಣ್ಣಿಸುತ್ತಾರೆ.

‘ನಿಮ್ಮ ಶಕ್ತಿ ಜನ್ಮದಲ್ಲಿ ಇಲ್ಲ; ಬದಲಾಗಿ ಜ್ಞಾನದಲ್ಲಿದೆ. ಶಿಕ್ಷಣ ದಿಕ್ಕು ತೋರಿಸುತ್ತದೆ. ನೀವು ಎತ್ತರಕ್ಕೆ ಏರಿದಾಗ ಇತಿಹಾಸವೇ ನಿಮ್ಮ ಹೆಸರನ್ನು ಘೋಷಿಸುತ್ತದೆ’ ಎಂದು ಸ್ಮಾರಕದ ಮುಂದೆ ಬಾಲಕಿಗೆ ಪೆನ್ ನೀಡುವಲ್ಲಿಗೆ ಸಿನಿಮಾ ಮುಗಿಯುತ್ತದೆ.

ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಅನಿಲ್ ಕುಮಾರ್, ‘ಮೈನವಿರೇಳಿಸುವ ಸಿನಿಮಾವಿದು. 37 ನಿಮಿಷಗಳಲ್ಲಿ ಇಡೀ ಭೀಮ ಕೋರೆಗಾಂವ್ ಇತಿಹಾಸ ತೋರಿಸಿದ್ದಾರೆ. ಅಂಬೇಡ್ಕರ್ ಅವರನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಸಿದ್ಧಾಂಕ್ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೊಡ್ಡ ದೊಡ್ಡ ನಿರ್ದೇಶಕರು ಮಾಡದ ಕೆಲಸವನ್ನು ಶೋಭನ್ ಬಾಬು ಮಾಡಿದ್ದಾರೆ. ಮುಂದೆ ಒಳ್ಳೆಯ ಅವಕಾಶಗಳು ಸಿಗಲಿವೆ. ಈ ಚಿತ್ರವನ್ನು ಎಲ್ಲರಿಗೂ ತೋರಿಸಬೇಕು ಎಂದರು.

ಪರ್ತಕರ್ತ ಕೆ.ಎಸ್.ಗಣೇಶ್ ಮಾತನಾಡಿ, ‘ಇತಿಹಾಸದಲ್ಲಿ ಹೇಳಲಾಗದ ಹಲವಾರು ಕಥೆಗಳಿವೆ. ಅಂಬೇಡ್ಕರ್ ದಾಖಲೆ ಪರಿಶೀಲಿಸುವಾಗ ಅದರಲ್ಲಿ ಈ ಭೀಮ ಕೋರೆಗಾಂವ್ ವಿಚಾರ ಗೊತ್ತಾಗುತ್ತದೆ. ಇಂಥ ಸಿನಿಮಾ ಮಾಡಲು ಬಂದವರು ಕಡಿಮೆ. ಈಗ ಅದ್ಭುತವಾಗಿ ಎಐ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ. ರೋಮಾಂಚನ ಉಂಟು ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಿನಿಮಾ ತೋರಿಸಬೇಕು’ ಎಂದು ಸಲಹೆ ನೀಡಿದರು.

ನಿರ್ಮಾಪಕ ಖಾದ್ರಿಪುರ ಬಾಬು ಮಾತನಾಡಿ, ‘ಈಗ ಗಣ್ಯರಿಗೆ ಮಾತ್ರ ಈ ಚಿತ್ರ ತೋರಿಸಲಾಗಿದೆ. ಮುಂದೆ ಎಲ್ಲರಿಗೂ ತೋರಿಸುತ್ತೇವೆ. ನಿಜವಾಗಿಯೂ ಇಂಥ ಸಿನಿಮಾ ಮಾಡಲು ₹ 300 ಕೋಟಿ ಬೇಕಾಗುತ್ತದೆ. ಆದರೆ, ಎಐ ಮೂಲಕ ಕೇವಲ 37 ನಿಮಿಷಗಳಲ್ಲಿ ಕಥೆ ಕಟ್ಟಿಕೊಡಲಾಗಿದೆ’ ಎಂದರು.

ನಿರ್ದೇಶಕ ಶೋಭನ್ ಬಾಬು ಮಾತನಾಡಿ, ಅಂಬೇಡ್ಕರ್ ಕುರಿತು ಸಿನಿಮಾ ಮಾಡಬೇಕೆಂದು ತಂದೆ ಹೇಳಿದ್ದರು. ಈ ಸಂಬಂಧ ನಾನು ಆಲೋಚನೆಯಲ್ಲಿ ತೊಡಗಿದ್ದೆ. ಅಂಬೇಡ್ಕರ್ ಅವರನ್ನು ಒಳಗೊಂಡ ಭೀಮ ಕೋರೆಗಾಂವ್ ಸಿನಿಮಾ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರ ಬ್ಲಾಕ್ ಅಧ್ಯಕ್ಷ ಸೈಯದ್ ಅಫ್ಸರ್, ಕೋಮುಲ್ ನಿರ್ದೇಶಕ ರಮೇಶ್ ಚಂಜಿಮಲೆ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶನ ಎಂ.ಶ್ರೀನಿವಾಸನ್, ಮುಖಂಡರಾದ ಸಂಪಂಗೆರೆ ಮುನಿರಾಜು, ರಾಜಕುಮಾರ್, ಮಾರ್ಜೇನಹಳ್ಳಿ ಬಾಬು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಡಿಪಿಎಸ್ ಮುನಿರಾಜು, ದಲಿತ್ ನಾರಾಯಣಸ್ವಾಮಿ, ಮೇಡಿಹಾಳ ಮುನಿಆಂಜಿನಪ್ಪ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-18-605042731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.