ಆದಿ ಮತ್ತು ನಿಧಿಮಾ ಪ್ರೇಮ ಪಯಣದ ಕಥೆ ‘ಲವ್ ಮಾಕ್ಟೇಲ್’ನಲ್ಲಿತ್ತು. ಕಥಾನಾಯಕಿ ನಿಧಿಮಾ ತೀರಿಕೊಂಡ ನಂತರ ಒಂಟಿಯಾಗುವ ಆದಿ, ಅನಾಥಾಶ್ರಮದಿಂದ ರಮ್ಯಾಳನ್ನು ದತ್ತು ಪಡೆಯುವಲ್ಲಿಗೆ ‘ಲವ್ ಮಾಕ್ಟೇಲ್–2’ ಕಥೆ ಅಂತ್ಯಗೊಂಡಿತ್ತು. ಅಲ್ಲಿಂದ ನಂತರದ ರಮ್ಯಾ ಮತ್ತು ಆದಿಯ ಬದುಕೇ ‘ಲವ್ ಮಾಕ್ಟೇಲ್–3’ ಚಿತ್ರದ ಒಟ್ಟಾರೆ ಕಥೆ. ಕಳೆದುಕೊಂಡ ಹೆಂಡತಿಯ ನೆನಪಿನಲ್ಲಿ ಆದಿ ತನ್ನ ಮಗಳ ಹೆಸರನ್ನು ನಿಧಿ ಎಂದು ಬದಲಾಯಿಸಿರುತ್ತಾನೆ. ಆಕೆಗೆ ಏಳು ವರ್ಷವಾದ ನಂತರದ ಕಥೆ ಈ ಚಿತ್ರದಲ್ಲಿದೆ.

ಆದಿಯ ಸ್ನೇಹಿತ ವಿಜಯ್ನ ಹೆಂಡತಿ ಸೀಮಂತದ ನೆಪದಲ್ಲಿ ‘ಲವ್ ಮಾಕ್ಟೇಲ್’ ಎರಡು ಭಾಗಗಳ ಪ್ರಮುಖ ಪಾತ್ರಧಾರಿಗಳು ಒಂದೆಡೆ ಸೇರುತ್ತಾರೆ. ಆಗ ವಿಜಯ್ ಆದಿಯ ಪ್ರಸ್ತುತ ಬದುಕಿನ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ. ಚಿತ್ರದ ಮೊದಲಾರ್ಧ ಸ್ವಲ್ಪ ತಾಳ್ಮೆ ಪರೀಕ್ಷಿಸುತ್ತದೆ. ಆದಿಯ ಮನೆ, ನಿಧಿಯ ಶಾಲೆಯ ಸುತ್ತಲೇ ಕಥೆ ಸಾಗುತ್ತದೆ. ಇಲ್ಲಿನ ಹಲವು ಸನ್ನಿವೇಶಗಳು ಪುನರಾವರ್ತನೆಗೊಂಡು ಕಥೆ ನಿಂತಲ್ಲಿಯೇ ನಿಂತಿದೆ ಎಂಬ ಭಾವನೆ ಮೂಡುತ್ತದೆ. ಒಂದೆರಡು ಕಡೆ ಆದಿ ಮತ್ತು ನಿಧಿಮಾ ಜತೆಗಿನ ಕೆಲ ಹಳೆಯ ನೆನಪಗಳು ಮರುಕಳಿಸುತ್ತವೆ. ಇಲ್ಲಿ ಬರುವ ಒಂದೆರಡು ಹಾಡುಗಳು ಸನ್ನಿವೇಶಗಳನ್ನು ಆಪ್ತವಾಗಿಸುತ್ತವೆ.

ಚಿತ್ರದ ದ್ವಿತೀಯಾರ್ಧ ಮಗುವಿನ ದತ್ತು, ಅದರಲ್ಲಿನ ಕಾನೂನು ತೊಡಕುಗಳ ಮೇಲೆ ಕೇಂದ್ರಿಕೃತವಾಗಿದೆ. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದರೆ ಆಗಬಹುದಾದ ತೊಂದರೆಗಳನ್ನು ನಿರ್ದೇಶಕರು ಇಲ್ಲಿ ಸೊಗಸಾಗಿ ಹೇಳಿದ್ದಾರೆ. ಆದರೆ ಪಾಲಕರಿಲ್ಲದ ಮಕ್ಕಳ ಪಾಲನೆ, ದತ್ತು ಕುರಿತಾದ ಕಾನೂನು ಇವತ್ತು ಬಹಳ ಬಿಗಿಯಾಗಿದೆ. ತಂದೆ, ತಾಯಿ ಇರುವ ಮಗುವನ್ನು ಅನಾಥ ಮಗುವೆಂದು ಸುಳ್ಳು ಹೇಳಿ ಮಕ್ಕಳ ಪಾಲನಾ ಸಂಸ್ಥೆಗೆ ತಂದು ಸೇರಿಸುವುದು, ಅದನ್ನು ಬೇರೆ ಪೋಷಕರಿಗೆ ಕಾನೂನುಬಾಹಿರವಾಗಿ ದತ್ತು ನೀಡುವ ಕಥೆಯ ಮುಖ್ಯ ಎಳೆಯೇ ಇವತ್ತಿನ ಕಾಲಘಟ್ಟಕ್ಕೆ ತೀರ ಕಾಲ್ಪನಿಕ ಎನ್ನಿಸುತ್ತದೆ. ಇದರತ್ತ ಸ್ವಲ್ಪ ಗಮನಹರಿಸಬಹುದಿತ್ತು. ದ್ವಿತೀಯಾರ್ಧದ ಬಹುಭಾಗ ಕಥೆ ನ್ಯಾಯಾಲಯದಲ್ಲೇ ನಡೆದರೂ, ವಿಚಾರಗಳ ಜೊತೆಗೆ ಇಲ್ಲೊಂದಷ್ಟು ಭಾವುಕ ಸನ್ನಿವೇಶಗಳಿವೆ. ಹೀಗಾಗಿ ಈ ಭಾಗ ಮೊದಲನೆಯದಕ್ಕಿಂತ ಉತ್ತಮ ಎನ್ನಿಸುತ್ತದೆ.

ನಿಧಿಯಾಗಿ ನಟಿಸಿರುವ ಬೇಬಿ ಸಂವೃತಾ ತನ್ನ ಮುಗ್ಧ ನಟನೆಯಿಂದ ಗಮನ ಸೆಳೆಯುತ್ತಾಳೆ. ಸಾಕಷ್ಟು ದೃಶ್ಯಗಳು ಆಕೆಯ ನಟನೆಯಿಂದಲೇ ಆಪ್ತವೆನಿಸುತ್ತವೆ. ಜವಾಬ್ದಾರಿಯುತ ತಂದೆಯಾಗಿ ಕೃಷ್ಣ ಇಷ್ಟವಾಗುತ್ತಾರೆ. ವಿಜು ಮಾಮ ಆಗಿ ದಳಪತಿ ಅಭಿಲಾಶ್ ನಟನೆ ಚೆನ್ನಾಗಿದೆ. ಜಗ್ಗ ಮಮ್ಮಿ ಆಗಿ ಜಗದೀಶ್ ನಟನೆ ಗಮನ ಸೆಳೆಯುತ್ತದೆ. ಆದರೆ ವಿಜು ಹಾಗೂ ಜಗ್ಗ ಅವರ ಅನಗತ್ಯ ಹಾಸ್ಯ ಕೆಲ ಕಡೆ ಕಿರಿಕಿರಿ ಮಾಡುತ್ತದೆ. ವಕೀಲರಾಗಿ ದಿಲೀಪ್ ರಾಜ್ ಹಾಗೂ ಶ್ವೇತಾ ಪ್ರಸಾದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಸಿನಿಮಾದ ಅತಿ ದೊಡ್ಡ ಶಕ್ತಿ ಹಿನ್ನೆಲೆ ಸಂಗೀತ. ಹಾಡುಗಳು ನೆನಪಿನಲ್ಲಿ ಉಳಿಯದಿದ್ದರೂ ಆಯಾ ಸನ್ನಿವೇಶಗಳಿಗೆ ಬಹಳ ಆಪ್ತ ಎನ್ನಿಸುತ್ತವೆ. ಸೀಮಿತ ಸ್ಥಳಗಳು ಹಾಗೂ ಬೆರಳೆಣಿಕೆಯ ನಟವರ್ಗದೊಂದಿಗೆ ಹೆಚ್ಚು ಅದ್ದೂರಿತನವಿಲ್ಲದ ಸಿನಿಮಾವಿದು. ಆದರೆ ಅದು ಎಲ್ಲಿಯೂ ಕೊರತೆ ಎನ್ನಿಸದಂತೆ ಫ್ರೇಮ್ಗಳನ್ನು ನಿಭಾಯಿಸಿದ್ದಾರೆ ಛಾಯಾಚಿತ್ರಗ್ರಾಹಕ ಶ್ರೀ ಕ್ರೇಜಿಮೈಂಡ್ಸ್.

ಮೊದಲಾರ್ಧದಲ್ಲಿ ಕೆಲ ಪುನರಾವರ್ತಿತ ದೃಶ್ಯಗಳಿಗೆ ಕತ್ತರಿ ಹಾಕಿ ತಾಯಿಯಿಲ್ಲದ ಮಗುವನ್ನು ತಂದೆಯೊಬ್ಬ ಬೆಳೆಸುವಾಗಿನ ಸವಾಲುಗಳನ್ನು ತೋರಿಸುವ ಅವಕಾಶ ನಿರ್ದೇಶಕರಿಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-51-1036962978

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.