ಉಡುಪಿ: ‘ಧರ್ಮ, ಜಾತಿಗಳ ಶ್ರೇಣೀಕರಣದಿಂದಾಗಿ ಭಾರತೀಯ ಸಿನಿಮಾಗಳು ಧರ್ಮ ಕೇಂದ್ರಿತವಾಗಿವೆ. ಈಚೆಗೆ ತೆರೆಕಂಡ ‘ದುರಂಧರ್’ ಸಿನಿಮಾವು ಏಕಮುಖವಾದ ಅಂತಹ ಸಿದ್ಧಾಂತದ ಹುಸಿ ವಾಸ್ತವಿಕತೆಯ ದೃಶ್ಯಾವಳಿಯಾಗಿದೆ. ಆ ಸಿನಿಮಾ ಉಗ್ರ ರಾಷ್ಟ್ರವಾದದ ಸಂಕೇತವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಅಭಿಪ್ರಾಯಪಟ್ಟರು.

ರಥಬೀದಿ ಗೆಳೆಯರು ಉಡುಪಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಶೇ 99ರಷ್ಟು ಸಿನಿಮಾಗಳು ಪ್ರಬಲ ಸಿದ್ದಾಂತವೊಂದನ್ನು ಬಲಪಡಿಸುತ್ತಿರುವ ಸಿನಿಮಾಗಳಾಗಿವೆ. ಆ ಪ್ರಬಲ ಸಿದ್ದಾಂತಕ್ಕೆ ವಿರುದ್ಧವಾಗಿರುವ ಬೌದ್ಧ, ಜೈನ, ಆದಿವಾಸಿ ಸಿದ್ದಾಂತಗಳನ್ನು ತೋರಿಸಲಾಗುತ್ತಿಲ್ಲ’ ಎಂದರು.

‘ಭಾರತೀಯ ಚಿತ್ರಗಳು ಏಕತೆಯನ್ನು ಭಂಗಪಡಿಸುವ, ಮುಖ್ಯ ಕತೆಗೆ ಭಿನ್ನವಾಗಿ ನಿಲ್ಲುವ, ಹಾಸ್ಯ ಪ್ರೇಕ್ಷಕರ ಆಕರ್ಷಣೆಯನ್ನೇ ಮುಖ್ಯವಾಗಿಸುವ ಸಿನಿಮಾಗಳಾಗಿವೆ’ ಎಂದು ಹೇಳಿದರು.

‘ಒಂದು ಪ್ರಬಲ ಸಿದ್ಧಾಂತ, ಇನ್ನೊಂದು ಪ್ರಬಲವಲ್ಲದ ಸಿದ್ಧಾಂತಗಳ ತಿಕ್ಕಾಟ ಸಿನೆಮಾಗಳಲ್ಲಿರುತ್ತವೆ. ನಮ್ಮ ನಿಲುವು ವ್ಯಕ್ತವಾಗದಂತೆ ಮಾಡುವುದು ರಾಜಕೀಯ ಸಿನಿಮಾಗಳ ಕೆಲಸ. ನಮ್ಮತನವನ್ನು ಇಟ್ಟುಕೊಂಡು ಬದುಕಲು ರಾಜಕೀಯ ಅಗತ್ಯ’ ಎಂದು ತಿಳಿಸಿದರು.

‘ಮನೆಯೊಳಗಿನ ವೈಮನಸ್ಸು, ವಿರೋಧಗಳು ಕೂಡ ರಾಜಕೀಯದಿಂದಲೇ ಕೂಡಿರುತ್ತವೆ. ಕೆಲಸದ ಜಾಗದಲ್ಲಿ ವೇತನ ತಾರತಮ್ಯ, ಕಿರುಕುಳ, ಲಿಂಗ ತಾರತಮ್ಯ ಇತ್ಯಾದಿಗಳನ್ನು ಬಿಂಬಿಸುವ ಚಿತ್ರಗಳು ಇಂತಹ ರಾಜಕೀಯದ ಪ್ರಭಾವವನ್ನು ಹೊಂದಿರುತ್ತವೆ’ ಎಂದರು.

‘ರಾಜಕೀಯ ಚಲನಚಿತ್ರಗಳು ಪ್ರೇಕ್ಷಕರಲ್ಲಿ ಭಾವನಾತ್ಮಕ ಅಂಶವನ್ನು ಹಂತ ಹಂತವಾಗಿ ಉದ್ದೀಪನಗೊಳಿಸುತ್ತವೆ’ ಎಂದು ಹೇಳಿದರು.

ರಥ ಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-28-1845244630

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.