7

ತಾಯಿಗೆ ತಕ್ಕ ಮಗನಾದ ಅಜೇಯ್‌ರಾವ್

Published:
Updated:
‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಕೃಷ್ಣ ಅಜೇಯ್‌ ರಾವ್

ನಟ ಕೃಷ್ಣ ಅಜೇಯ್‌ರಾವ್‌ ತಾಯಿಗೆ ತಕ್ಕ ಮಗನಾಗಲು ಹೊರಟಿಸಿದ್ದಾರೆ. ಶಶಾಂಕ್‌ ನಿರ್ದೇಶನದ ‘ತಾಯಿಗೆ ತಕ್ಕ ಮಗ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದು ಅಜೇಯ್‌ರಾವ್‌ ನಟನೆಯ 25ನೇ ಚಿತ್ರ ಎನ್ನುವುದು ವಿಶೇಷ. ತಾಯಿ ಪಾತ್ರದಲ್ಲಿ ನಟಿ ಸುಮಲತಾ ಕಾಣಿಸಿಕೊಂಡಿದ್ದಾರೆ. 

ಶಶಾಂಕ್‌ ಸಿನಿಮಾಸ್‌ನಿಂದ ನಿರ್ಮಿಸುತ್ತಿರುವ ಈ ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರಿನ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಕೃಷ್ಣ ಅಜೇಯ್‌ರಾವ್‌, ಸುಮಲತಾ, ಅಂಬರೀಶ್‌, ಆಶಿಕಾ ರಂಗನಾಥ್‌, ಭಜರಂಗಿ ಲೋಕಿ, ಅಚ್ಯುತ್‌ಕುಮಾರ್‌, ಸಾಧುಕೋಕಿಲ ಅವರು ಅಭಿನಯಿಸಿದ ಸನ್ನಿವೇಶ ಮತ್ತು ಸಾಹಸಮಯ ದೃಶ್ಯಗಳನ್ನು ಸೆರೆಹಿಡಿಸಲಾಗಿದೆ.

ಶೇಖರ್‌ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ರವಿವರ್ಮ ಮತ್ತು ಥ್ರಿಲ್ಲರ್‌ ಮಂಜು ಅವರ ಸಾಹಸವಿದೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಗಿರಿ ಮಹೇಶ್‌ ಅವರ ಸಂಕಲನವಿದೆ. ಮುಂದಿನ ತಿಂಗಳು ಹೊರಾಂಗಣದಲ್ಲಿ ಹಾಡಿನ ಚಿತ್ರೀಕರಣ ನಡೆಸುವ ಸಿದ್ಧತೆಯಲ್ಲಿದೆ ಚಿತ್ರತಂಡ. ತಿಂಗಳಾಂತ್ಯದಲ್ಲಿ ಮಾತಿನ ಧ್ವನಿ ಮುದ್ರಣ ಕಾರ್ಯ ಆರಂಭವಾಗಲಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 5

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !