ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್ ಖಾನ್ ಪುತ್ರಿ ಇರಾ ಖಾನ್‌ಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ ನೂಪುರ್

Last Updated 23 ಸೆಪ್ಟೆಂಬರ್ 2022, 7:16 IST
ಅಕ್ಷರ ಗಾತ್ರ

ಮುಂಬೈ:ಬಾಲಿವುಡ್ ಸೂಪರ್‌ಸ್ಟಾರ್‌ ಅಮೀರ್ ಖಾನ್ ಪುತ್ರಿ ಇರಾ ಖಾನ್ ಅವರಿಗೆ ಗೆಳೆಯ ನೂಪುರ್‌ ಶಿಖರೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದಾರೆ.

ಸೈಕ್ಲಿಂಗ್‌ ಈವೆಂಟ್‌ ವೇಳೆ ಈ ಪ್ರಸಂಗ ನಡೆದಿದೆ. ಸ್ಟಾಂಡ್‌ ಬಳಿ ನಿಂತಿದ್ದ ಇರಾ ಬಳಿಗೆ ಬಂದ ನೂಪುರ್‌, ಮಂಡಿಯೂರಿ ಉಂಗುರ ತೊಡಿಸಿದ್ದಾರೆ. 'ನನ್ನನ್ನು ಮದುವೆಯಾಗುವೆಯಾ?' ಎಂದು ಕೇಳಿದ್ದಾರೆ. ಅದಕ್ಕೆ ಇರಾ, ಹೌದೆಂದು ಸಮ್ಮತಿಸಿದ್ದಾರೆ.

ಬಳಿಕ ಇಬ್ಬರೂ ಅದರ ಚುಂಬನ ಮಾಡಿ ಸಂಭ್ರಮಿಸಿದ್ದಾರೆ. ನೆರೆದಿದ್ದ ಸ್ನೇಹಿತರು ಹಾಗೂ ಇತರರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದ ವಿಡಿಯೊವನ್ನು ಇರಾ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇರಾ ಹಾಗೂಫಿಟ್ನೆಸ್ ಎಕ್ಸ್‌ಪರ್ಟ್ ನೂಪುರ್‌ ಕಳೆದರೆಡು ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದರು.

ಇರಾ, ರೀನಾ ದತ್ತ ಹಾಗೂ ಅಮಿರ್‌ ಖಾನ್‌ ದಂಪತಿಯ ಮಗಳು. ಈ ದಂಪತಿ2002ರಲ್ಲಿ ಬೇರೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT