ಮಂಗಳವಾರ, ಸೆಪ್ಟೆಂಬರ್ 21, 2021
25 °C

‘ಅಭಯ್ 2’ನ ಭಾಗ 3 ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುನಾಲ್ ಖೇಮು ಅಭಿನಯದ ‘ಅಭಯ್’ ವೆಬ್‌ಸರಣಿ 2019ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಿತ್ತು. ಇದರ ಮೊದಲ ಸರಣಿಯಲ್ಲಿ ಒಟ್ಟು 8 ಎಪಿಸೋಡ್‌ಗಳಿದ್ದವು. ಈ ವೆಬ್‌ಸರಣಿಯನ್ನು ಕೆನ್ ಘೋಷ್ ನಿರ್ದೇಶನ ಮಾಡಿದ್ದರು.

ಈ ಸರಣಿಯ ಎರಡನೇ ಭಾಗ ‘ಅಭಯ್ 2’ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಕುನಾಲ್ ಜೊತೆಗೆ ರಾಮ್ ಕಪೂರ್ ಹಾಗೂ ಚಂಕಿ ಪಾಂಡೆ ನಟಿಸಿದ್ದಾರೆ. ಅಭಯ್ 2 ಸರಣಿಯು ಆಗಸ್ಟ್ 14 2020 ರಂದು ಜೀ 5ನಲ್ಲಿ ಬಿಡುಗಡೆಯಾಗಿತ್ತು. ಅದರ ಉಳಿದ ಭಾಗವು ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ. ಅದಕ್ಕೆ ‘ಅಭಯ್ ಸೀಸನ್‌ 2– ಪಾರ್ಟ್ 3’ ಎಂದು ಹೆಸರಿಸಲಾಗಿದೆ. ಇದಕ್ಕೆ ಬಿಪಿ ಸಿಂಗ್‌, ಸುಧಾಂಶು ಶರ್ಮಾ, ಪ್ರಿಯಾ ಸಗ್ಗಿ ಚಿತ್ರಕಥೆ ಬರೆದಿದ್ದಾರೆ.

ರಣವೀರ್ ಶೋರೆ, ಯಶಪಾಲ್ ಶರ್ಮಾ, ಅಭಿಷೇಕ್ ಬ್ಯಾನರ್ಜಿ, ವಿಜಯ್ ರಾಝ್‌, ಗಜ‌ರಾಜ್ ರಾವ್‌, ನಿಧಿ ಸಿಂಗ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಸತ್ಯ ಘಟನೆ ಆಧಾರಿತ ಸರಣಿ ಇದಾಗಿದೆ. ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ಈ ವೆಬ್‌ಸರಣಿಯು ಅಭಯ್ ಪ್ರತಾಪ್ ಸಿಂಗ್ ಎಂಬ ತನಿಖಾಧಿಕಾರಿಯ ಕತೆಯನ್ನು ಒಳಗೊಂಡಿದೆ. ಅಭಯ್ ಪಾತ್ರದಲ್ಲಿ ಕುನಾಲ್ ಕಾಣಿಸಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು