ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿಗೆ ₹25 ಲಕ್ಷ ವೇತನ: ಪತ್ನಿಯಾಗುವಂತೆ ನೀತು ಚಂದ್ರಗೆ ಆಫರ್ ನೀಡಿದ್ದ ಉದ್ಯಮಿ

ಅಕ್ಷರ ಗಾತ್ರ

ಬೆಂಗಳೂರು: ಮಿಥಿಲ ಮಖಾನ್ ಮತ್ತು ಓಯ್ ಲಕ್ಕಿ! ಲಕ್ಕಿ ಓಯ್! ಸಿನಿಮಾಗಳಲ್ಲಿ ಮಿಂಚಿದ್ದ ನಟಿ ನೀತು ಚಂದ್ರ, ಚಿತ್ರವೊಂದರ ಆಡಿಶನ್‌ನಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಉದ್ಯಮಿಯೊಬ್ಬರು ತನಗೆ ಅವರ ವೇತನ ಸಹಿತ ಪತ್ನಿಯಾಗುವಂತೆ ಆಫರ್ ನೀಡಿದ್ದರು. ಅಲ್ಲದೆ, ತಿಂಗಳಿಗೆ ₹25 ಲಕ್ಷ ನೀಡುವ ಬಗ್ಗೆಯೂ ಹೇಳಿದ್ದರು ಎಂದು ನೀತು ಬಹಿರಂಗಪಡಿಸಿದ್ದಾರೆ.

ಸಿನಿಮಾ ಒಂದರ ಅಡಿಶನ್ ಹೋಗಿದ್ದೆ. ಆ ಸಂದರ್ಭದಲ್ಲಿ ನನಗೆ ನಿರ್ದೇಶಕರು ಒಂದೇ ಗಂಟೆಯಲ್ಲಿ ನಾನು ಆಯ್ಕೆಯಾಗಿಲ್ಲವೆಂದು ತಿಳಿಸಿದರು. ಅವರು ಜನಪ್ರಿಯ ನಿರ್ದೇಶಕರು, ಆದರೆ ಅವರ ಹೆಸರು ಹೇಳಲು ನಾನು ಬಯಸುವುದಿಲ್ಲ ಎಂದು ನೀತು ತಿಳಿಸಿದ್ದಾರೆ.

ಜತೆಗೆ, ಅವರು ವೇತನ ಸಹಿತ ಪತ್ನಿಯಾಗುವಂತೆ ನನ್ನನ್ನು ಕೇಳಿಕೊಂಡಿದ್ದರು. ಅದಕ್ಕಾಗಿ ತಿಂಗಳಿಗೆ ₹25 ಲಕ್ಷ ಪಾವತಿಸುವ ಬಗ್ಗೆಯೂ ತಿಳಿಸಿದ್ದರು ಎಂದು ನೀತು ಬಹಿರಂಗಪಡಿಸಿದ್ದಾರೆ.

ನೀತು ಚಂದ್ರ ಅವರು 2005ರಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.

ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆಗಳನ್ನು ಎದುರಿಸಿದ ಬಗ್ಗೆ ಮತ್ತು ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಹಲವರು ಸಾಮಾಜಿಕ ತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಅದೇ ರೀತಿಯಲ್ಲಿ ನೀತು ಅವರು ಕೂಡ ಬಾಲಿವುಡ್‌ನಲ್ಲಿ ನಡೆದ ಸಂದರ್ಶನ ಕಾರ್ಯಕ್ರಮದಲ್ಲಿ ತಮಗಾಗಿದ್ದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT