ಶನಿವಾರ, ಜುಲೈ 24, 2021
27 °C
ಸೆಲೂನ್‌, ಪಾರ್ಲರ್‌ ಸುರಕ್ಷಿತ: ಸಂದೇಶ ಸಾರಿದ ನಟಿಯರು

ಬ್ಯೂಟಿಪಾರ್ಲರ್‌ನಲ್ಲಿ ಅನು, ರಾಗಿಣಿ, ಅನುಪಮಾ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎರಡು ತಿಂಗಳ ಲಾಕ್‌ಡೌನ್‌ ನಂತರ ಸ್ಯಾಂಡಲ್‌ವುಡ್‌ ಮತ್ತು ಕಿರುತೆರೆಯ ನಟಿಯರು ಮೊದಲ ಬಾರಿಗೆ ಮನೆಯಿಂದ ಹೊರ ಬಂದಿದ್ದಾರೆ. ಶೂಟಿಂಗ್ ಸ್ಥಗಿತಗೊಂಡ ಕಾರಣ ತಿಂಗಳುಗಳಿಂದ ಮನೆಯಲ್ಲಿದ್ದ ಈ ನಟಿಮಣಿಗಳು‌ ಬ್ಯೂಟಿ ಪಾರ್ಲರ್‌ನತ್ತ‌ ತಿರುಗಿ ನೋಡಿರಲಿಲ್ಲ. ಈಗ ಲಾಕ್‌ಡೌನ್‌ ತೆರವುಗೊಳ್ಳುತ್ತಲೇ‌ ‘ತುಪ್ಪದ ಹುಡುಗಿ‘ ರಾಗಿಣಿ ದ್ವಿವೇದಿ, ‘ಕರಾವಳಿ ಬೆಡಗಿ‘ ಅನುಶ್ರೀ ಮತ್ತು ‘ಗುಳಿಕೆನ್ನೆ ಚೆಲುವೆ‘ ಅನುಪಮಾ ಗೌಡ ಬ್ಯೂಟಿ ಪಾರ್ಲರ್‌‌ಗೆ ಹೋಗಿ ಹೇರ್‌ಕಟ್‌ ಮಾಡಿಸಿದ್ದಾರೆ. ಸುಕ್ಕು ಗಟ್ಟಿದ್ದ ಕೂದಲನ್ನು ಹೊಳಪಾಗಿಸಿಕೊಂಡು ಬಂದಿದ್ದಾರೆ !

ಇದೇನಿದು, ನಟಿಮಣಿಯರ ಬ್ಯೂಟಿ ಪಾರ್ಲರ್‌ ಕತೆ ಹೇಳ್ತಿದ್ದೀರಾ? ಎಂದು ಅಚ್ಚರಿಪಡಬೇಡಿ. ಇದು ಗೋದ್ರೆಜ್‌ ಪ್ರೊಫೆಷನಲ್ಸ್‌ ಕಂಪನಿಯವರ ಆಹ್ವಾನದ ಮೇರೆಗೆ ‘ಪಾರ್ಲರ್, ಸೆಲೂನ್‌ ಸುರಕ್ಷತೆ‘ ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ‘ಸುರಕ್ಷಾ ಸೆಲೂನ್‌ ಕಾರ್ಯಕ್ರಮ‘ದಲ್ಲಿ ಈ ಮೂವರು ನಟಿಯರು ಪಾಲ್ಗೊಂಡಿರುವ ದೃಶ್ಯಗಳು.

‘ಸೆಲೂನ್‌, ಪಾರ್ಲರ್‌ಗಳಲ್ಲಿ ಗ್ರಾಹಕರಿಗಾಗಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ‘ ಎಂದು ಜನರಿಗೆ ಮನವರಿಕೆ ಮಾಡುವುದಕ್ಕಾಗಿ ಈ ಮೂವರು ನಟಿಯರು ಸೆಲೂನ್‌, ಪಾರ್ಲರ್‌ನಲ್ಲಿ ಕೈಗೊಂಡ ಚಟುವಟಿಕೆಗಳ ಮೂರು ವಿಡಿಯೊಗಳು ಮತ್ತು ಚಿತ್ರಗಳನ್ನು ಕಂಪೆನಿ ಬಿಡುಗಡೆ ಮಾಡಿದೆ.  

ವಿಡಿಯೊದಲ್ಲಿ ಏನಿದೆ ?

ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ ಇವೆಲ್ಲ ಇವೆ; ಸೆಲೂನ್‌,ಪಾರ್ಲರ್‌ ಒಳಗೆ ಪ್ರವೇಶಿಸಲು ಬಂದ ನಟಿಯರಿಗೆ ಅಲ್ಲಿಯ ಸಿಬ್ಬಂದಿ ಬಾಗಿಲಲ್ಲಿಯೇ ಥರ್ಮಲ್ ಚೆಕ್ ಮಾಡಿ, ಹ್ಯಾಂಡ್‌ ಸ್ಯಾನಿಟೈಸರ್‌ ನೀಡಿ ಸ್ವಾಗತಿಸುತ್ತಾರೆ. ಮುಖಗವಸು, ಶೂ ಕವರ್‌, ಹೊಸ ಗೌನ್‌ ಹೊದಿಸಿ ಒಳಗೆ ಕರೆದೊಯ್ಯುತ್ತಾರೆ. ಕೊಠಡಿ ಮತ್ತು ಕುರ್ಚಿಯನ್ನು ಸ್ಯಾನಿಟೈಸ್‌ ಮಾಡಿದ ನಂತರ ಮುಖಕ್ಕೆ ಫೇಸ್‌ಶೀಲ್ಡ್ ಧರಿಸಿದ ಸಿಬ್ಬಂದಿ ಸ್ಟೆರಲೈಸ್‌ ಮಾಡಿದ ಉಪಕರಣಗಳಿಂದ ಹೇರ್‌ಡ್ರೆಸ್‌‌ ಮಾಡುತ್ತಾರೆ. 

ಈ ಸುರಕ್ಷತಾ ಕ್ರಮಗಳು ಮತ್ತು ಅವುಗಳಿಂದಾಗುವ ಉಪಯೋಗದ ಕುರಿತು ರಾಗಿಣಿ, ಅನುಶ್ರೀ ಮತ್ತು ಅನುಪಮಾ ಅವರು ಹಂಚಿಕೊಂಡಿರುವ ಅನುಭವಗಳೂ ಈ ಮೂರು ವಿಡಿಯೊಗಳಲ್ಲಿವೆ. ಇನ್ನಾದರೂ ಜನರು ಭಯಬಿಟ್ಟು ಸಲೂನ್‌ಗಳತ್ತ ಹೆಜ್ಜೆ ಹಾಕಲಿ ಎಂದು ಮೂವರೂ ಹಾರೈಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು