ಮಂಗಳವಾರ, ಅಕ್ಟೋಬರ್ 26, 2021
20 °C

ತಮ್ಮ ಆಸ್ತಿಯನ್ನು ಎಸ್‌ಬಿಐಗೆ ಬಾಡಿಗೆಗೆ ನೀಡಿದ ನಟ ಅಮಿತಾಭ್ ಬಚ್ಚನ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಮನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಬಾಡಿಗೆ ನೀಡಿದ್ದು ಸುದ್ದಿಯಾಗಿದೆ.

ಜುಹುವಿನಲ್ಲಿರುವ ತಮ್ಮ ನೆಚ್ಚಿನ ‘ಜಲ್ಸಾ‘ ಮನೆಯ ಸನಿಹದಲ್ಲಿರುವ ‘ಅಮ್ಮು‘ ಹಾಗೂ ‘ವಾತ್ಸಾ‘ ಬಂಗ್ಲೆಗಳನ್ನು ಬಾಡಿಗೆ ನೀಡುವ ನಿರ್ಧಾರವನ್ನು ಅಮಿತಾಭ್  ಕೈಗೊಂಡಿದ್ದಾರೆ ಎಂದು ಮನಿ ಕಂಟ್ರೋಲ್.ಕಾಮ್ ವರದಿ ಮಾಡಿದೆ.

ಇವುಗಳಿಗೆ ಪ್ರತಿ ತಿಂಗಳು ₹18.9 ಲಕ್ಷ ಬಾಡಿಗೆ ನೀಡುವ ಒಪ್ಪಂದವನ್ನು ಎಸ್‌ಬಿಐ 15 ವರ್ಷಕ್ಕೆ ಮಾಡಿಕೊಂಡಿದೆ. ಎಸ್‌ಬಿಐ ಈ ಕಟ್ಟಡಗಳನ್ನು ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಬಳಸಲಿದೆ ಎಂದು ವರದಿ ತಿಳಿಸಿದೆ.

ಅಲ್ಲದೇ ಇದಕ್ಕಾಗಿ 2.26 ಕೋಟಿ ಮುಂಗಡ ಹಣವನ್ನು ಎಸ್‌ಬಿಐ ನೀಡಿದ್ದು, ಪ್ರತಿ ಐದು ವರ್ಷಕ್ಕೆ ಶೇ 25 ರಷ್ಟು ಬಾಡಿಗೆ ಹೆಚ್ಚಳವಾಗಲಿದೆ ಎಂದು ವರದಿ ತಿಳಿಸಿದೆ.

ಸೆಪ್ಟೆಂಬರ್ 28 ರಂದು ಒಪ್ಪಂದ ಏರ್ಪಟ್ಟಿದೆ.

ಇದನ್ನೂ ಓದಿ: ತನ್ನ ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟ ಜಗತ್ತಿನ ಜನಪ್ರಿಯ ಗೊರಿಲ್ಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು